Posts

21 ನೇ ಶತಮಾನದ ಕಲಿಕಾ ಕೌಶಲಗಳು

Image
  21 ನೇ ಶತಮಾನದ ಕಲಿಕಾ ಕೌಶಲಗಳು      21 ನೇ ಶತಮಾನದ ಕೌಶಲಗಳೆಂದರೆ ಇಂದಿನ ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ವಿದ್ಯಾರ್ಥಿಗಳು ಅಗತ್ಯವಾಗಿ ಬೆಳೆಸಿಕೊಳ್ಳಲೇಬೇಕಾದ ಸಾಮರ್ಥ್ಯಗಳ ಗುಂಪು ಆಗಿದೆ. 3 ವಿಧಗಳಲ್ಲಿ 21 ನೇ ಶತಮಾನದ ಕೌಶಲಗಳನ್ನು ಕಾಣಬಹುದಾಗಿದೆ, ಕಲಿಕಾ ಕೌಶಲಗಳು ಸಾಕ್ಷರತಾ ಕೌಶಲಗಳು ಜೀವನ ಕೌಶಲಗಳು   ಕಲಿಕಾ ಕೌಶಲಗಳು 1.ವಿಮರ್ಶಾತ್ಮಕ ಆಲೋಚನಾ ಕೌಶಲಗಳು:             ವಿಮರ್ಶಾತ್ಮಕ ಆಲೋಚನೆಯು ಎಚ್ಚರಿಕೆಯಿಂದ ವಿಶ್ಲೇಷಿಸಿದ ಒಂದು ವಿಷಯ ವಸ್ತುವಿನ ಬಗ್ಗೆ ಅರ್ಥೈಸುವುದಕ್ಕೆ ಕೇಂದ್ರೀಕರಿಸುತ್ತದೆ. ವ್ಯಾಖ್ಯಾನಗಳು: “ಒಂದು ಉತ್ತರ ಅಥವಾ ತೀರ್ಮಾನವನ್ನು ತಲುಪಲು ಸಕ್ರೀಯ ಮತ್ತು ಕೌಶಲಯುಕ್ತವಾಗಿ ಪರಿಕಲ್ಪನೆಯನ್ನು ಬೆಳೆಸುವ, ಅನ್ವಯಿಸುವ, ವಿರ್ಶ್ಲೇಷಿಸುವ, ಸಂಶ್ಲೇಷಿಸುವ, ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯೇ ವಿಮರ್ಶಾತ್ಮಕ ಆಲೋಚನಾ ಕೌಶಲಗಳು”. “ಸ್ಪಷ್ಟ, ವಿಚಾರಶಕ್ತಿಯುಳ್ಳ, ಮುಕ್ತ ಮನಸ್ಸುಗಳ, ಸಾಕ್ಷಿಯಿಂದ ಮಾಹಿತಿ ಪಡೆದ ಶಿಸ್ತುಬದ್ದ ಆಲೋಚನೆಯೇ ವಿಮರ್ಶಾತ್ಮಕ ಆಲೋಚನಾ ಕೌಶಲಗಳು”. “ಯಾವುದನ್ನು ನಂಬಬೇಕು ಅಥವಾ ಮಾಡಬೇಕು ಎಂಬ ವಿಷಯದ ಮೇಲೆ ಕೇಂದ್ರೀಕರಿಸುವ, ಸಮಂಜಸವಾದ, ಪ್ರತಿಫಲಿತ ಆಲೋಚನೆಯೇ ವಿಮರ್ಶಾತ್ಮಕ ಆಲ...

ಕಲಿಕಾ ವಲಯಗಳು

Image
  ಕಲಿಕಾ ವಲಯಗಳು (ಬ್ಲೂಮ್ ರವರ ಪರಿಷ್ಕೃತ ಶೈಕ್ಷಣಿಕ ಉದ್ದೇಶಗಳ ವರ್ಗೀಕರಣ)          ಆಂಗ್ಲ ಪದ ʼTaxonomy’ ಎಂದರೆ, ವರ್ಗೀಕರಣ. ಶಿಕ್ಷಣ ಕ್ಷೇತ್ರದಲ್ಲಿ ಬಳಸಲಾಗುವ ಉದ್ದೇಶಗಳ ಸ್ವಭಾವ ಮತ್ತು ವಿಧಗಳ ಬಗ್ಗೆ ತಿಳಿಯಲು ಪೂರ್ವ ನಿಯೋಜಿತ ವರ್ಗೀಕರಣ ಸಹಕಾರಿ. ಕಲಿಯಲು ಅಗತ್ಯ ಚಟುವಟಿಕೆಗಳನ್ನು ಯೋಜಿಸುವುದು ಉದ್ದೇಶ ಯಾವ ಮಟ್ಟದಲ್ಲಿ ಹಾಗೂ ಯಾವ ತರಹದ್ದು ಎಂದು ತಿಳಿದಾಗ ಸುಲಭ. ಸಾಮಾನ್ಯವಾಗಿ ಶಿಕ್ಷಣದ ಉದ್ದೇಶಗಳನ್ನು ʼವಸ್ತುʼ ವಿನ ಆಧಾರ ಬಳಸಿ ಮಾಡಿದ್ದರೆ ವಾಸ್ತವಿಕ ವಲಯಗಳಲ್ಲಿ ವಿಂಗಡಣೆ ಮಾಡಿ ಹೇಳಬೇಕಾಗುತ್ತದೆ. ಬ್ಲೂಮ್‌ (1956) ತಾನು ರಚಿಸಿದ ವರ್ಗೀಕರಣ ʼTaxonomy’ ಯಲ್ಲಿ ಶೈಕ್ಷಣಿಕ ಉದ್ದೇಶಗಳನ್ನು ವರ್ತನೆಯ ಆಧಾರದ ಮೇಲಿಂದ ವಿಂಗಡಿಸಿದ್ದಾನೆ. ಆತನ ಪ್ರಕಾರ ಉದ್ದೇಶಗಳನ್ನು ಮೂರು ವಲಯಗಳಲ್ಲಿ ವಿಂಗಡಿಸಬಹುದು. ಆ ಮೂರು ವಲಯಗಳೆಂದರೆ, ಸಂಜ್ಞಾತ್ಮಕ ವಲಯ ಭಾವನಾತ್ಮಕ ವಲಯ ಮತ್ತು ಮನೋಚಲನಾತ್ಮಕ ವಲಯ 1990 ರಲ್ಲಿ ಬ್ಲೂಮ್ ನ ಶಿಷ್ಯನಾದ ಲೋರಿನ್‌ ಆಂಡರ್ಸನ್‌ ರವರು ಬ್ಲೂಮ್‌ ನ ಶೈಕ್ಷಣಿಕ ಉದ್ದೇಶಗಳ ವರ್ಗೀಕರಣವನ್ನು ಆಧುನೀಕರಿಸಿದ್ದಾರೆ. 21 ನೇ ಶತಮಾನದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಗೆ ಸರಿಹೊಂದುವಂತೆ ಆಧುನೀಕರಿಸಿದ್ದಾರೆ. ಪರಿಭಾಷೆಯ ಬದಲಾವಣೆ     ಮೂಲಭೂತವಾಗಿ ಬ್ಲೂಮ್ ನ 6 ಮುಖ್ಯ ವಿಭಾಗಗಳು ನಾಮಪದದಿಂದ ಕ್ರಿಯಾಪ...