21 ನೇ ಶತಮಾನದ ಕಲಿಕಾ ಕೌಶಲಗಳು

 

21 ನೇ ಶತಮಾನದ ಕಲಿಕಾ ಕೌಶಲಗಳು

     21 ನೇ ಶತಮಾನದ ಕೌಶಲಗಳೆಂದರೆ ಇಂದಿನ ಮಾಹಿತಿ ತಂತ್ರಜ್ಞಾನದ ಕಾಲದಲ್ಲಿ ವಿದ್ಯಾರ್ಥಿಗಳು ಅಗತ್ಯವಾಗಿ ಬೆಳೆಸಿಕೊಳ್ಳಲೇಬೇಕಾದ ಸಾಮರ್ಥ್ಯಗಳ ಗುಂಪು ಆಗಿದೆ.

3 ವಿಧಗಳಲ್ಲಿ 21 ನೇ ಶತಮಾನದ ಕೌಶಲಗಳನ್ನು ಕಾಣಬಹುದಾಗಿದೆ,

  1. ಕಲಿಕಾ ಕೌಶಲಗಳು
  2. ಸಾಕ್ಷರತಾ ಕೌಶಲಗಳು
  3. ಜೀವನ ಕೌಶಲಗಳು

 

ಕಲಿಕಾ ಕೌಶಲಗಳು

1.ವಿಮರ್ಶಾತ್ಮಕ ಆಲೋಚನಾ ಕೌಶಲಗಳು:

           ವಿಮರ್ಶಾತ್ಮಕ ಆಲೋಚನೆಯು ಎಚ್ಚರಿಕೆಯಿಂದ ವಿಶ್ಲೇಷಿಸಿದ ಒಂದು ವಿಷಯ ವಸ್ತುವಿನ ಬಗ್ಗೆ ಅರ್ಥೈಸುವುದಕ್ಕೆ ಕೇಂದ್ರೀಕರಿಸುತ್ತದೆ.

ವ್ಯಾಖ್ಯಾನಗಳು:

  1. “ಒಂದು ಉತ್ತರ ಅಥವಾ ತೀರ್ಮಾನವನ್ನು ತಲುಪಲು ಸಕ್ರೀಯ ಮತ್ತು ಕೌಶಲಯುಕ್ತವಾಗಿ ಪರಿಕಲ್ಪನೆಯನ್ನು ಬೆಳೆಸುವ, ಅನ್ವಯಿಸುವ, ವಿರ್ಶ್ಲೇಷಿಸುವ, ಸಂಶ್ಲೇಷಿಸುವ, ಮತ್ತು ಮೌಲ್ಯಮಾಪನ ಮಾಡುವ ಪ್ರಕ್ರಿಯೆಯೇ ವಿಮರ್ಶಾತ್ಮಕ ಆಲೋಚನಾ ಕೌಶಲಗಳು”.
  2. “ಸ್ಪಷ್ಟ, ವಿಚಾರಶಕ್ತಿಯುಳ್ಳ, ಮುಕ್ತ ಮನಸ್ಸುಗಳ, ಸಾಕ್ಷಿಯಿಂದ ಮಾಹಿತಿ ಪಡೆದ ಶಿಸ್ತುಬದ್ದ ಆಲೋಚನೆಯೇ ವಿಮರ್ಶಾತ್ಮಕ ಆಲೋಚನಾ ಕೌಶಲಗಳು”.
  3. “ಯಾವುದನ್ನು ನಂಬಬೇಕು ಅಥವಾ ಮಾಡಬೇಕು ಎಂಬ ವಿಷಯದ ಮೇಲೆ ಕೇಂದ್ರೀಕರಿಸುವ, ಸಮಂಜಸವಾದ, ಪ್ರತಿಫಲಿತ ಆಲೋಚನೆಯೇ ವಿಮರ್ಶಾತ್ಮಕ ಆಲೋಚನಾ ಕೌಶಲಗಳು”.
  4. “ನಮ್ಮ ನಂಬಿಕೆಗಳ ಸೂತ್ರೀಕರಣದಲ್ಲಿ ಬಳಸುವ ಕಾರಣದ ಜೊತೆ ಒಂಗೊಂಡಿರುವ ಬದ್ದತೆಯೇ ವಿಮರ್ಶಾತ್ಮಕ ಆಲೋಚನಾ ಕೌಶಲಗಳು”.

ವಿಮರ್ಶತ್ಮಕ ಕೌಶಲಯುಕ್ತ ತರಗತಿಯಲ್ಲಿ ವಿದ್ಯಾರ್ಥಿಗಳು

  1. ಕಲಿಕಾ ತಂಡ ಮತ್ತು ಗುಂಪುಗಳಾಗಿ ಆಗಾಗ್ಗೆ ಕೆಲಸ ಮಾಡುವರು.
  2. ಶೈಕ್ಷಣಿಕ ಸಮಸ್ಯೆಗಳು, ಸನ್ನಿವೇಶಗಳಲ್ಲಿ ಕಂಡುಬರುವ ಸಮಸ್ಯೆಗಳು ಮತ್ತು ನೈಜ ಪ್ರಪಂಚದ ಸಮಸ್ಯೆಗಳನ್ನು ಸಕ್ರೀಯವಾಗಿ ಬಗೆಹರಿಸುವರು.
  3. ವಿದ್ಯಾರ್ಥಿಗಳು ಏನು ಮಾಡುತ್ತಿದ್ದಾರೆ, ಮತ್ತು ಹೇಗೆ ಕಲಿಯುತ್ತಿದ್ದಾರೆ ಎಂಬುದರ ಮೇಲೆ ವ್ಯವಸ್ಥಿತವಾಗಿ ಪ್ರತಿಫಲಿಸುತ್ತದೆ.
  4. ಅವರ ಕಲಿಕೆಯ ಮೇಲೆ ಸಾರ್ವಜನಿಕ ಪ್ರಸ್ತುತಿ ಮತ್ತು ಪ್ರದರ್ಶನ ಮಾಡುವರು.
  5. ಅವರ ಕೆಲಸದ ಗುಣಮಟ್ಟದ ಮೇಲೆ ಗಮನ ಹರಿಸುವರು.
  6. ಅವರ ಕಲಿಕೆ ಹಾಗೂ ತರಗತಿ ಸಮುದಾಯಕ್ಕಾಗಿ ಜವಾಬ್ದಾತಿಯ ಹಂಚಿಕೆ ಮತ್ತು ಮಾಲಿಕತ್ವವನ್ನು ತೆಗ್ದುಕೊಳ್ಳುವರು.

ವಿಮರ್ಶತ್ಮಕ ಕೌಶಲಯುಕ್ತ ತರಗತಿಯಲ್ಲಿ ಶಿಕ್ಷಕರು

1.     ಶಿಕ್ಷಕರು ಆದರ್ಶವ್ಯಕ್ತಿತ್ವವುಳ್ಳವರು, ಮಾರ್ಗದರ್ಶಕರು, ತರಬೇತುದಾರರು ಹಾಗೂ ಕಲಿಕಾ ಪ್ರಕ್ರಿಯೆಯನ್ನು ಬೆಂಬಲಿಸುವವರಾಗಿರುತ್ತಾರೆ.

2.     ಎಚ್ಚರಿಕೆಯಿಂದ ಸಂಪರ್ಕಿಸುವ ಮತ್ತು ಪ್ರತಿಯೊಬ್ಬರಿಗೂ ಹೊಂದಿಕೊಳ್ಳುವಂತಹ ಕಲಿಕಾ ಚಟುವಟಿಕೆಗಳನ್ನು ಯೋಜಿಸುವರು.

 

2. ಸೃಜನಾತ್ಮಕ ಕೌಶಲಗಳು:

 

      ನಾವೆಲ್ಲರೂ ಸೃಜನಾತ್ಮಕ/ಸೃಜನಶೀಲ ಸಾಮರ್ಥ್ಯವನ್ನು ಹೊಂದಿದವರಾಗಿದ್ದೇವೆ. ಪ್ರತಿಯೊಬ್ಬರೂ ಅನನ್ಯ ಸೃಷ್ಠಿಯಾಗಿದ್ದೇವೆ. ಆದ್ದರಿಂದ ಸೃಜನಶೀಲ ಸಾಮರ್ಥ್ಯದ ಪ್ರಮಾಣವು ಏಕರೂಪದಲ್ಲಿರುವುದಿಲ್ಲ.

 

ವ್ಯಾಖ್ಯಾನಗಳು:

1.    ಡ್ರೇವದಲ್‌ ರವರ ಪ್ರಕಾರ “ಸೃಜನಶೀಲತೆಯ ಸಂಯೋಜನೆಯನ್ನು ಮಾಡುವುದು ಹೊಸ, ಮೊದಲೇ ಗೊತ್ತಿರದ ಅಥವಾ ಚಿಂತನೆ ಹಾಗೂ ಉತ್ಪಾದಕನಿಗೆ ಈ ಮೊದಲೇ ಗೊತ್ತಿರದ ಅಂಶಗಳನ್ನು ಪ್ರಸ್ತುತ ಪಡಿಸುವ ಅಥವಾ ಉತ್ಪಾದಿಸುವ ವ್ಯಕ್ತಿಯ ಸಾಮರ್ಥ್ಯವಾಗಿದೆ”.

2.    ಹರ್ಬರ್ಟ ಫಾಕ್ಸ್: ‌ “ಸೃಜನಶೀಲ ಪ್ರಕ್ರಿಯೆಯು, ಸಮಸ್ಯೆಗಳನ್ನು ಸ್ವಂತಿಕೆಯಿಂದ ಮತ್ತು ಉಪಯುಕ್ತ ದಾರಿಯ ಮೂಲಕ ಬಿಡಿಸುವ, ಆಲೋಚನೆಯೇ ಆಗಿದೆ.”

3.    ಬ್ರೂನರ್: ‌ ಸೃಜನಶೀಲತೆಯು ನವೀನ, ಅನಿರಿಕ್ಷಿತ/ಆಶ್ಚರ್ಯಕರ ಮತ್ತು ಸ್ವಂತಿಕೆಯದ್ದಾಗಿದೆ.”

 

ಸೃಜನಶೀಲತೆಯ ಗುಣ-ಲಕ್ಷಣಗಳು

  1. ಸೃಜನಶೀಲತೆಯು ಸಾಕಷ್ಟು ವಿಶಾಲವಾದ ಮತ್ತು ವಿಶಿಷ್ಟವಾದುದಾಗಿದೆ.
  2. ಸೃಜನಶೀಲತೆಯು ಸಾರ್ವತ್ರಿಕವಾದುದು.
  3. ಸೃಜನಶೀಲತೆಯು ವ್ಯಕ್ತಿಯ ಪರಿಸರದ ಕಾರ್ಯವಾಗಿದೆ.
  4. ಯಾವುದೇ ಸೃಜನಶೀಲ ಅಭಿವ್ಯಕ್ತಿಯು ಸೃಷ್ಠಿಕರ್ತನ ಸಂತೋಷ ಹಾಗೂ ತೃಪ್ತಿಯ ಆಕರವಾಗಿದೆ.
  5. ಸೃಜನಶೀಲತೆಯು ಪ್ರಾತಂಭ, ಪ್ರಕ್ರಿಯೆ ಮತ್ತು ಯಾವುದೊಂದು ಆಕರ್ಷಣೆಯೊಂದಿಗೆ ಕೊನೆಗೊಳ್ಳುತ್ತದೆ.
  6. ಸೃಜನಶೀಲತೆಯ ದಾರಿಯು ಅಪಾಯ, ಧೈರ್ಯ ಮತ್ತು ಹಠಮಾರಿತನವನ್ನು ಹೊಂದಿರುತ್ತದೆ.
  7. ಸೃಜನಶೀಲತೆಯು ಯಾವಾಗಲೂ ಉದ್ದೇಶಪೂರ್ವಕ ಮತ್ತು ಸೂಕ್ತತೆಯಿಂದ ಕೂಡಿದ ಫಲಿತಾಂಶವಾಗಿರುತ್ತದೆ.
  8. ಸೃಜನಶೀಲತೆಯು ಬುದ್ದಿವಂತಿಕೆಗಿಂತ ಭಿನ್ನವಾಗಿದೆ.

 

ಸೃಜನಶೀಲ ಮಕ್ಕಳ ಗುಣಲಕ್ಷಣಗಳು

1.     ಪ್ರತಿಪಕ್ಷ/ವೈರಿಗಳ ವಿಷಯದಲ್ಲಿ ಹೆಚ್ಚಿನ ತಾಳ್ಮೆಯನ್ನು ಹೊಂದಿರುತ್ತಾರೆ.

2.     ಅವರು ಅಚ್ಚುಕಟ್ಟು ಮತ್ತು ಸ್ವವಾಸ್ತವೀಕರಣದ ಸಾಮರ್ಥ್ಯದವರಾಗಿರುತ್ತಾರೆ.

3.     ಹೊರಗಿನವರು, ಅಮೂರ್ತ ವಸ್ತುಗಳು ಹಾಗೂ ಯೋಚನೆಗಳಿಗೆ ಯಾವುದೇ ಹೆದರಿಕೆ ಇರುವುದಿಲ್ಲ.

4.     ತಕ್ಷಣ ಕಾರ್ಯಪ್ರವೃತ್ತರಾಗುವ ಗುಣವನ್ನು ಹೊಂದಿದವರಾಗಿರುತ್ತಾರೆ.

5.     ಸದಾ ವಿಚಾರಧಾರೆಗಳು ಮನಸ್ಸಿನ್ನಲ್ಲಿ ಹರಿದಾಡುತ್ತಿರುತ್ತದೆ.

 

ಸೃಜನಶೀಲತೆಯನ್ನು ಬೆಳೆಸುವ ಮಾರ್ಗಗಳು

  1. ಸ್ವಯಂ ತೊಡಗಿಸಿಕೊಳ್ಳುವಿಕೆ ಹಾಗೂ ಸರ್ವಾಧಿಕಾರಿಯಲ್ಲದ ಕಲಿಕೆಯನ್ನು ಒದಗಿಸಬೇಕು.
  2. ಹೆಚ್ಚಿನ ಕಲಿಕೆಗೆ ಉತ್ತೇಜಿಸಬೇಕು.
  3. ಬೌದ್ಧಿಕ ನಮ್ಯತೆಯನ್ನು ಪ್ರೋತ್ಸಾಹಿಸಬೇಕು.
  4. ಹೆಚ್ಚಿನ ಪ್ರಶ್ನಿಸುವ ತಂತ್ರವನ್ನು ತರಗತಿಯಲ್ಲಿ ಬಳಸುವುದು.
  5. ವಸ್ತುಗಳನ್ನು ವಿಚಾರಗಳನ್ನು, ಪರಿಕಲ್ಪನೆಗಳನ್ನು, ಸಾಧನಗಳನ್ನು ಕುಶಲತೆಯಿಂದ ಬಳಸುವ ಅವಕಾಶ ಕಲ್ಪಿಸುವುದು.
  6. ಒಂದು ಸಮಸ್ಯೆಯನ್ನು ಪೂರ್ಣವಾಗಿ ನೋಡುವ ಹಾಗೂ ಪರಿಗಣಿಸುವುದಕ್ಕೆ ಪ್ರೋತ್ಸಾಹಿಸಬೇಕು.
  7. ವಿದ್ಯಾರ್ಥಿಯ ಪ್ರೇರಣಾ ಶಕ್ತಿ, ಮೆದುಳು ದಾಳಿ ಸಾಮರ್ಥ್ಯ ಹಾಗೂ ಸಮಸ್ಯೆಗಳ ಹೊರಗೆ ಆಲೋಚಿಸುವುದನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುವುದು.
  8. ಅನೌಪಚಾರಿಕ ಹಾಗೂ ಮುಕ್ತ ವಾತಾವರಣವನ್ನು ಒದಗಿಸಬೇಕು.
  9. ಕಲ್ಪಿತ ವಸ್ತುವಿಗಿಂತ ಸೃಜನಶೀಲ ಪ್ರಕ್ರಿಯೆಗೆ ಹೆಚ್ಚು ಪ್ರಾಮುಖ್ಯತೆ ಕೊಡುವುದು.

 

3. ಸಂವಹನ ಕೌಶಲಗಳು

     ಸಂವಹನವನ್ನು ಸಂಪರ್ಕವೆಂದು ಕರೆಯುವುದುಂಟು, ದೈನಂದಿನ ವ್ಯವಹಾರಗದಲ್ಲಿ ಸಂವಹನವು ಅತ್ಯಗತ್ಯ. ಯಾವ ಮನುಷ್ಯನಿಂದ ಈ ಸಂವಹನವು ನಡೆಯುತ್ತದೆಯೋ ಆ ವ್ಯಕ್ತಿಯ ಜ್ಞಾನ, ಭಾವನೆಗಳನ್ನು ಕಲಿಕೆ ವಿಚಾರಗಳು ಹಾಗೂ ಮಾಹಿತಿ ಮುಂತಾದವುಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಂಳ್ಳುತ್ತಾನೆಂದು ಹೇಳಬಹುದು. ಸಂವಹನ ಕ್ರಿಯೆಯಲ್ಲಿ ಸಾಮಾನ್ಯವಾಗಿ ಇಬ್ಬರು ವ್ಯಕ್ತಿಗಳಿರುತ್ತಾರೆ. ಇದರಲ್ಲಿ ಓರ್ವನು ಸಂದೇಶವನ್ನು ಕಳುಹಿಸುವವನಾದರೆ ಇನ್ನೊಬ್ಬರು ಪಡೆಯುವವರಾಗಿರುತ್ತಾರೆ. ಸಂವಹನವು ಕೇವಲ ವಿಚಾರ ವಿನಿಮಯವಾಗಿರದೇ ಮಾನವನ ವರ್ತನೆಯನ್ನು ಬದಲಾಯಿಸಲು ಸಹಾಯಕಾರಿಯಾಗಿದೆ.

 

ವ್ಯಾಖ್ಯಾನಗಳು:

  1. ಯಾವುದೇ ಒಂದು ವಿಧದ ಸಂಪರ್ಕಸಾಧನದಿಂದ ಅಥವಾ ಸಂಪರ್ಕಮಾಧ್ಯಮದ ಮೂಲಕ ಸಂದೇಶ ನೀಡುವವನಿಂದ ಸ್ವೀಕರಿಸುವವನಿಗೆ ಮಾಹಿತಿಯನ್ನು ಕಳುಹಿಸುವ ಪ್ರಕ್ರಿಯೆಯನ್ನು ಸಂವಹನ ಎನ್ನುತ್ತೇವೆ.
  2. ಒಬ್ಬ ವ್ಯಕ್ತಿಯು ಇತರ ವ್ಯಕ್ತಿಗಳ ಅಂದರೆ ಸ್ವೀಕರಿಸುವವನ ವರ್ತನೆಯಲ್ಲಿ ಬದಲಾವಣೆ ತರಲು ಮಾಡುವ ಕ್ರಿಯೆಯೇ ಸಂವಹನ.
  3. ಇಬ್ಬರು ವ್ಯಕ್ತಿಗಳ ನಡುವೆ ಮಾಹಿತಿ ವಿನಿಮಯ ಮತ್ತು ಪರಸ್ಪರ ತಿಳುವಳಿಕೆಯನ್ನುಂಟುಮಾಡುವುದನ್ನು ಸಂವಹನ ಎಂದು ಕರೆಯುತ್ತೇವೆ.

---- ಥಿಯೋ ಹೇಮನ್  

ಸಂವಹನ ಪ್ರಕ್ರಿಯೆ

      ಸಂವಹನವು ಇಬ್ಬರು ಅಥವಾ ಹೆಚ್ಚು ಜನರ ನಡುವೆ ನಡೆಯುವ ಪ್ರಕ್ರಿಯೆ. ಸಂವಹನದಲ್ಲಿ ಮಾಹಿತಿ ನೀಡಿಕೆ, ವಿಚಾರ ವಿನಿಮಯ, ಭಾವನೆಗಳ ಹಂಚಿಕೆಯು ಆಗಿರಬಹುದು. ಸಂವಹನವು ಉದ್ದೇಶಪೂರ್ವಕವಾಗಿರಬಹುದು ಅಥವಾ ಸಹಜ ಸಾಂದರ್ಭಿಕವಾಗಿ ಇರಬಹುದು. ಸಂವಹನವು ಮಾತಿನ ಮೂಲಕ, ಬರಹದ ಮೂಲಕ ಹಾಗೂ ಅಶಾಬ್ದಿಕ ಸಂಕೇತಗಳಮೂಲಕವೂ ನಡೆಯಬಹುದು. ಸಂವಹನ ಪ್ರಕ್ರಿಯೆಯಲ್ಲಿ ಈ ಮೂರು ಅಂಶಗಳು ಅನ್ಯೋನ್ಯವಾಗಿಸಮನ್ವಯಗೊಳ್ಳುತ್ತವೆ. ಸಂವಹನದಲ್ಲಿ ಮಾಹಿತಿ ನೀಡುವವರ ಹಾಗೂ ಸ್ವೀಕರಿಸುವವರುಇರಲೇಬೇಕು. ಸಂವಹನ ಪ್ರಕ್ರಿಯೆಯು ವೈಜ್ಞಾನಿಕವಾಗಿ ವಿವಿಧ ಹಂತಗಳಲ್ಲಿ ನಡೆಯುತ್ತದೆ. ಇದನ್ನು ಸಂವಹನ ಆವರ್ತ ಎನ್ನಬಹುದು.

 


 


                                                          ಸಂವಹನ ಚಕ್ರ

   ಒಂದು ನಿರ್ದಿಷ್ಟ ಉದ್ದೇಶದಿಂದ ಸಂವಹನ ನಡೆಯುವಾಗ ಈ ಪ್ರಕ್ರಿಯೆಯಲ್ಲಿ ಮಾಹಿತಿ ನೀಡುವವರು ಅಂದರೆ ಭಾಷಾ ಬೋಧನೆಯಲ್ಲಿ ಶಿಕ್ಷಕರು ಎಂದರ್ಥ ಹಾಗೆ ಮಾಹಿತಿ ರವಾನೆಯಾಗುವ ಮಾಧ್ಯಮ ಹಾಗೂ ಮಾಹಿತಿ ಸ್ವೀಕರಿಸುವವರು ಅಂದರೆ ವಿದ್ಯಾರ್ಥಿಗಳು ಇರಲೇಬೇಕು. ಮಾಹಿತಿ ನೀಡುವವರು ನೀಡಬೇಕಾದ ಮಾಹಿತಿಯನ್ನು ಅರ್ಥ ಬರುವಂತೆ ರೂಪುಗೊಳಿಸಿ ಮಾತು, ಬರಹ, ಸಂಕೇತಗಳ ಮೂಲಕ ರವಾನಿಸುತ್ತಾರೆ. ಈ ಮಾಹಿತಿಯನ್ನು ಸ್ವೀಕರಿಸುವವನು ಸಂದೇಶಗಳನ್ನು ಅರ್ಥಮಾಡಿಕೊಂಡು ಮಾಹಿತಿಯ ಅರ್ಥವನ್ನು ರೂಪಿಸಿಕೊಳ್ಳುತ್ತಾನೆ. ಸ್ವೀಕೃತಿಗಾರನು ಮಾಹಿತಿಯನ್ನು ಅರ್ಥಮಾಡಿಕೊಂಡು ಮಾಹಿತಿ ಕಳುಹಿಸುವವರಿಗೆ ಪ್ರತಿಕ್ರಿಯೆ ನೀಡುತ್ತಾನೆ. ಈ ಪ್ರಕ್ರಿಯೆಯನ್ನು ಪುನರ್ಬಲನ ಮರುಪೋಷಣೆ ಎನ್ನುತ್ತಾರೆ. ಈ ರೀತಿ ಮಾಹಿತಿ, ನೀಡಿಕೆ ಸ್ವೀಕರಸಿ ಅರ್ಥಮಾಡಿಕೊಳ್ಳುವಿಕೆ ಹಾಗೂ ಪ್ರತಿಕ್ರಿಯೆ ವ್ಯಕ್ತಪಡಿಸುವಿಕೆ ಈ ಕ್ರಿಯೆಗಳು ಅವ್ಯಾಹಿತವಾಗಿ ಸಾಗುವುದರಿಂದ ನಿರಂತರ ಸಂವಹನ ನಡೆಯುತ್ತದೆ. ಇದನ್ನು ಸಂವಹನ ಆವರ್ತ ಎನ್ನುತ್ತಾರೆ.

ಸಂವಹನದ ವಿಧಗಳು:

  1. ಏಕಮುಖ ಸಂವಹನ
  2. ದ್ವಿಮುಖ ಸಂವಹನ
  3. ಶಾಬ್ದಿಕ ಸಂವಹನ
  4. ಶಬ್ದಿಕವಲ್ಲದ ಸಂವಹನ/ಅಶಾಬ್ದಿಕ
  5. ಸಾಂಪ್ರದಾಯಿಕ ಮತ್ತು ಸಾಂಪ್ರದಾಯಕವಲ್ಲದ ಸಂವಹನ
  6. ಸಮೂಹ ಮಾಧ್ಯಮಗಳ ಮೂಲಕ ಸಂವಹನ

ಸರಾಗವಾದ ಸಂವಹನಕ್ಕಿರುವ ಅಡೆತಡೆಗಳು:

  1. ದೈಹಿಕ/ಆಂತರಿಕ ಅಡೆತಡೆಗಳು: ತೊದಲುವುದು, ಸರಿಯಾಗಿ ಕಿವಿ ಕೇಳಿಸದೇ ಇರುವುದು. ದೃಷ್ಟಿದೋಷ,
  2. ಭಾಷೆಯ ತೊಡಕು: ಬೇರೆ ಬೇರೆ ಭಾಷೆ ಮಾತಾಡುವ ಜನರ ನಡುವೆ ಸಂವಹನ ಸರಿಯಾಗಿ ಆಗುವುದಿಲ್ಲ ಕಾರಣ ಭಾಷೆಯು ಅರ್ಥವಾಗದಿರುವುದು. ದ್ವಂದ್ವಾರ್ಥ ಬರುವ ಪದಗಳು, ಉಚ್ಚಾರಣಾ ದೋಷಗಳು, ಕಠಿಣ ಭಾಷಾ ಶಬ್ದಗಳ ಬಳಕೆ, ಅಸಮರ್ಪಕ ವಾಕ್ಯ ರಚನೆ ಇತ್ಯಾದಿ ಸಂವಹನಕ್ಕೆ ತೊಂದರೆಯಾಗುತ್ತದೆ.
  3. ಮನೋವೈಜ್ಞಾನಿಕ: ಭಾವಾತಿರೇಕದ ಮಟ್ಟ, ಕೇಳುವಾಗ, ಮಾತನಾಡುವಾಗ ಗಮನವನ್ನು ಕೇಂದ್ರೀಕರಿಸದೇ ಇದ್ದಾಗ ಸಂವಹನ ಯಶಸ್ವಿಯಾಗದು. ಈ ರೀತಿಯ ಅನ್ಯ ಮನಸ್ಕತೆ ವಿದ್ಯಾರ್ಥಿಗಳಲ್ಲಿ ಕಾಣಬಹುದು. ತರಗತಿ ಬೋಧನೆಯಲ್ಲಿ ಇದು ದೊಡ್ಡ ತೊಡಕು. ಬೇಸರಗೊಂಡಾಗ, ಮಾನಸಿಕ ಸ್ಥಿತಿ ಸರಿಯಿಲ್ಲದಿದ್ದಾಗ ಮತ್ತು ಆಯಾಸವಾದಾಗಲೂ ಸಂವಹನ ಯಶಸ್ವಿಯಾಗುವುದಿಲ್ಲ.
  4. ಪರಿಸರ: ಗದ್ದಲ, ಅತಿ ಹೆಚ್ಚು ಸದ್ದು, ವಿಪರೀತ ಸೆಖೆ ಇತ್ಯಾದಿ ಹೊಸ ಪರಿಸರದಲ್ಲಿ ಮಾತಾಡಲು ಹಿಂಜರಿಕೆಯಾದಾಗ ಸಂವಹನಕ್ಕೆ ಅಡಚಣೆಯಾಗುತ್ತದೆ. ಹೊಸ ಜನರೊಡನೆ ಮಾತನಾಡಲು ಇದೇ ರೀತಿ ಆಗಬಹುದು.
  5. ವೈಯಕ್ತಿಕ ಅಡಚಣೆ:  ಮನಸ್ಸಿನ ಯಾವೂದೇ ನೋವು, ಗೊಂದಲ, ಕಸಿವಿಸಿ ಆದಾಗ ವ್ಯಕ್ತಿಯು ಮಾತನಾಡಲು ಇಚ್ಚಿಸುವುದಿಲ್ಲ, ಆದಾಗ್ಯೂ ಮಾತನಾಡಲು ತೊಡಗಿದಾಗ ಸರಿಯಾದ ಸಂವಹನವಾಗದೆ ಮನಸ್ತಾಪ ಉಂಟಾಗಬಹುದು.
  6. ಸಂದೇಶ ಸರಿಯಿಲ್ಲದಿದ್ದಾಗ: ಸಂದೇಶವು (ಲಿಖಿತ ಇಲ್ಲವೇ ಮೌಖಿಕವಾಗಿ) ಸರಿಯಾದ ಪದಗಳಲ್ಲಿರಬೇಕು, ಇಲ್ಲದಿದ್ದರೆ ಸಂವಹನವು ಯಶಸ್ವಿಯಾಗುವುದಿಲ್ಲ. ಅಸ್ಪಷ್ಟ ಅಕ್ಷರಗಳು ಸಂವಹನಕ್ಕೆ ಅಡಚಣೆಯಾಗುತ್ತದೆ.

 

ಸಂವಹನದ ಅಡೆತಡೆಗಳನ್ನು ವಿವಾರಿಸುವ ಬಗೆ

  1. ಅತಿಯಾದ ಮಾತು, ವಾಸ್ತವವಲ್ಲದ ವಿವರಣೆಯಿಂದ ದೂರವಿರಬೇಕು, ಒಂದೇ ತರಹದ ಕಥೆಯು ಪುನರಾವರ್ತನೆಯಾಗಬಾರದು.
  2. ಸೂಕ್ತ ಮಾಧ್ಯಮದ ಆಯ್ಕೆ ಸಂವಹನಕ್ಕೆ ಬಹಳ ಮುಖ್ಯವಾಗುತ್ತದೆ. ವ್ಯಾಕರಣ ದೋಷ ಮತ್ತು ಕಳಪೆ ಶಬ್ದಕೋಶವನ್ನು ತಪ್ಪಿಸಬೇಕು.
  3. ಕಳುಹಿಸುವವನ ಮತ್ತು ಸ್ವೀಕರಿಸುವವನ ಮಧ್ಯೆ ಒಂದು ಸಾಮಾನ್ಯ ಉಲ್ಲೇಖ/ನಿರ್ಣಯ ಚೌಕಟ್ಟು ಇರಬೇಕು.
  4. ಶಿಕ್ಷಕರು ಮಕ್ಕಳ ಪೂರ್ವಜ್ಞಾನ ಮತ್ತು ಅನುಭವಗಳನ್ನು ಬಳಸಿಕೊಳ್ಳಬೇಕು.
  5. ಶಿಕ್ಷಕರ ಮತ್ತು ವಿಧ್ಯಾರ್ಥಿಗಳ ನಡುವೆ ಯಾವುದೇ ನಡವಳಿಕೆ ಘರ್ಷಣೆ ಇರಬಾರದು.

 

ಯಶಸ್ವೀ ಸಂವಹನದಲ್ಲಿ ಶಿಕ್ಷಕರ ಪಾತ್ರ

  1. ಮೌಖಿಕ ಸಂವಹನದಲ್ಲಿ ಕೇಳುವುದು ಮತ್ತು ಮಾತನಾಡುವುದಕ್ಕೆ ಹೆಚ್ಚು ಮಹತ್ವವಿದೆ. ಭಾಷಾ ಕಲಿಕೆಯಲ್ಲಿ ಸರಿಯಾದ ಉಚ್ಚಾರಣೆ, ಸ್ವರಭಾರ ಇತ್ಯಾದಿ ಇರಬೇಕು.
  2. ಸ್ಪಷ್ಟ ಆಲಿಕೆಗೆ ಕಿವಿಗಳನ್ನು ತರಬೇತುಗೊಳಿಸಬೇಕು. ಶಿಕ್ಷಕನು ಮಕ್ಕಳಿಗೆ ಆದರ್ಶನಾಗಿರಬೇಕು.
  3. ಭಾಷಾ ಕಲಿಕೆಗೆ ಬೋಧನೆಯಲ್ಲಿ ಕಥೆ ಹೇಳುವುದು, ದೂರದರ್ಶನದ ಮೂಲಕ ಶಿಕ್ಷಣ, ರೇಡಿಯೋ ಮೂಲಕ ಪಾಠಗಳು ಇರಬೇಕು.
  4. ಮಕ್ಕಳಿಗೆ ಉತ್ತಮವಾಗಿ ಮಾತನಾಡುವ ಅಭ್ಯಾಸವನ್ನು ಮಾಡಿಸಬೇಕು. ಮಕ್ಕಳು ಭಾಷೆಯನ್ನು ಬಳಸುವ ಸಂದರ್ಭದಲ್ಲಿ ನಿರರ್ಗಳತೆ, ಸ್ಪಷ್ಟತೆ, ದೋಷ ರಹಿತ ಉಚ್ಚಾರಣೆಗಳಿಗೆ ಸಾಕಷ್ಟು ಗಮನ ನೀಡಬೇಕು.
  5. ಮಕ್ಕಳು ನಿರ್ಭಯದಿಂದ ಪ್ರಶ್ನೆ ಕೇಳುವುದಕ್ಕೆ ಹಾಗೂ ಚರ್ಚೆಗಳಲ್ಲಿ ಭಾಗವಹಿಸುವುದಕ್ಕೆ ಪ್ರೋತ್ಸಾಹಿಸಬೇಕು.
  6. ಭಾಷಾ ತೊಂದರೆ ಇರುವ ಮಕ್ಕಳಿಗೆ ಸಕಾಲದಲ್ಲಿ ಸೂಕ್ತ ಮಾರ್ಗದರ್ಶನ ನೀಡಬೇಕು.
  7. ಲಿಖಿತ ಸಂವಹನದಲ್ಲಿ ದುಂಡಾದ ಅಕ್ಷರ, ಕಾಗುಣಿತ, ಒತ್ತಕ್ಷರ, ಅಂದವಾದ ಬರಹಕ್ಕೆ ಪ್ರಾಮುಖ್ಯತೆ ನೀಡಬೇಕು.
  8. ಭಾಷಾ ಅಭ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬೇಕು.
  9. ತರಗತಿಯಲ್ಲಿ ದಿನ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳ ಪ್ರಬಂಧಗಳು, ವಾರ್ತಗಳನ್ನು ಓದಿಸುವುದು, ವಿವಿಧ ಕಾರ್ಯಕ್ರಮಗಳ ವರದಿಯನ್ನು ಓದಿಸುವುದು. ಕ್ರೀಡೆಗಳ ವಿವರಣೆ ನೀಡುವ ಅಭ್ಯಾಸಗಳನ್ನು ಏರ್ಪಡಿಸುವುದರಿಂದ ಮಕ್ಕಳಲ್ಲಿ ಮಾತನಾಡುವ ಸಂವಹನ ಸಾಮರ್ಥ್ಯ ಉತ್ತಮವಾಗುತ್ತದೆ.
  10. ಈ ಕಾರ್ಯಕ್ರಮಗಳಲ್ಲದೇ ರೇಡಿಯೋ, ದೊರದರ್ಶನ ಕಾರ್ಯಕ್ರಮಗಳಲ್ಲಿಯ ವರದಿಗಳು, ವಾರ್ತಗಳು, ಪ್ರದೇಶ ಸಮಾಚಾರಗಳು, ಜಾಹಿರಾತುಗಳ ಹಿನ್ನಲೆ, ವಿವರಣೆ ಸಂಭಾಷಣೆಗಳು, ಸಂದರ್ಶನಗಳು, ವಿಚಾರ ಸಂಕಿರ್ಣಗಳು, ಶಾಲಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅವಕಾಶ ನೀಡುವುದರಿಂದ ಮಾತನಾಡುವ ಕೌಶಲ್ಯವನ್ನು ಉತ್ತಮಪಡಿಸಬಹುದು.

ಬೋಧನೆಯು ಒಂದು ಸಂವಹನಾ ಕ್ರಿಯೆ

     ಶಾಲೆಯಲ್ಲಿ ಏರ್ಪಡಿಸುವ ಸಂಪರ್ಕ/ಸಂವಹನ ಹೆಚ್ಚು ಪರಿಣಾಮಕಾರಿಯಾಗಿದ್ದು ಮಕ್ಕಳಲ್ಲಿ ಉತ್ತಮ ಕಲಿಕೆಗೆ ಅವಕಾಶವಿರುತ್ತದೆ.

  1. ಮಕ್ಕಳಲ್ಲಿ ವಿವಿಧ ಜ್ಞಾನ, ತಿಳುವಳಿಕೆ, ಕೌಶಲ್ಯಗಳು, ಮನೋಗುಣಗಳು, ವ್ಯಕ್ತಿತ್ವ ಮತ್ತು ಉತ್ತಮ ಹವ್ಯಾಸಗಳನ್ನು ಅಭಿವೃದ್ದಿಗೊಳಿಸಿ ಅವುಗಳಲ್ಲಿ ತರಬೇತಿ ನೀಡಲಾಗುವುದು.
  2. ಶಾಲೆಯಲ್ಲಿ ಸಂವಹನ ಕೌಶಲ್ಯಗಳ ಅನುಷ್ಠಾನಕ್ಕಾಗಿ ಸೂಕ್ತ ವಿಧಾನಗಳನ್ನು ಹಾಗೂ ಸಂಪರ್ಕ ಸಾಧನಗಳಾದ ವಿವರಣೆ, ಬರಹ, ಸಂಕೇತಗಳು, ಚಿಹ್ನೆಗಳು, ಚಿತ್ರಪಟಗಳು, ನಕ್ಷೆಗಳು, ಪಡಸು-ಮೆದು ಸಾಧನಗಳನ್ನು ಬಳಸಿಕೊಂಡು ಉತ್ತಮ ಸಂವಹನ ಏರ್ಪಡಿಸಿ ಪರಿಣಾಮಕಾರಿ ಕಲಿಕೆಯನ್ನುಂಟುಮಾಡಲಾಗುತ್ತದೆ.
  3. ತರಗತಿಯಲ್ಲಿ ಮಕ್ಕಳಿಗೆ ಪ್ರಶ್ನೆಗಳನ್ನು ಕೇಳುವುದರ ಮೂಲಕ ಉತ್ತರಗಳನ್ನು ಪಡೆಯಬಹುದು. ಬೇಧನಾ ಕಾಲದಲ್ಲಿ ಪಾಠೋಪಕರಣಗಳನ್ನು ಬಳಸುವುದರಿಂದ ಬೇಧನೆಯು ಒಂದು ಸಂವಹನ ಕ್ರಿಯೆ ಎನ್ನಬಹುದು.
  4. ಶಾಲೆಯಲ್ಲಿ ಗುಂಪು ಅಧ್ಯಯನ, ಚರ್ಚಾಕೂಟ, ಸಹಪಠ್ಯ ಚಟುವಟಿಕೆಗಳು ಇರುವುದರಿಂದ ಬೇಧನೆಯಲ್ಲಿ ಉತ್ತಮ ಸಂಪರ್ಕಕ್ಕೆ ನೆರವು ನೀಡುತ್ತದೆ.
  5. ತರಗತಿಯಲ್ಲಿ ಉತ್ತಮ ಸಂವಹನ ಏರ್ಪಡಿಸುವುದರ ಜೊತೆಗೆ ತರಗತಿಯ ಹೊರಗೆ ಮಕ್ಕಳು ಯಾವ ಯಾವ ಮೂಲಗಳಿಂದ ಉತ್ತಮ ಸಂವಹನ ಹೊಂದಬಹುದೋ ಆ ಮೂಲಗಳಿಂದ ಮಕ್ಕಳು ಹೊಂದಲು ಸೂಕ್ತ ವ್ಯವಸ್ಥೆ ಮಾಡಿ ಮಾರ್ಗದರ್ಶನ ನೀಡಲಾಗುತ್ತದೆ.
  6. ಶಾಲೆಗೆ ವಿವಿಧ ಪರಿಸರ, ಸಂಸ್ಕೃತಿ, ಸಾಮರ್ಥ್ಯ ಮತ್ತು ಅಭಿರುಚಿಯುಳ್ಳ ಮಕ್ಕಳು ಬರುತ್ತಾರೆ. ಈ ಮಕ್ಕಳ ಸಾಮರ್ಥ್ಯ ಅಭಿರುಚಿಗೆ ತಕ್ಕಂತೆ ಬೋಧನಾ ವ್ಯವಸ್ಥೆ ಮಾಡುವುದರಿಂದ ಬೋಧನೆಯೂ ಸಹ ಒಂದು ಸಂವಹನ ಕ್ರಿಯೆ ಎಂದು ಹೇಳಬಹುದು.
  7. ಪಠ್ಯಬೋಧನೆಗೆ ಸಂಬಂಧಿಸಿದಂತೆ ಹೊಸ ಸಂಚಾರ, ಸಂದರ್ಶನ, ಪ್ರವಾಸ, ವಸ್ತುಪ್ರದರ್ಶನ, ಮುಂತಾದವುಗಳನ್ನು ಏರ್ಪಡಿಸುವುದರಿಂದ ಉತ್ತಮ ಸಂವಹನ ಉಂಟಾಗಿ ಬೋಧನೆ ಸುಲಭವಾಗುತ್ತದೆ.
  8. ಬೋಧನಾ ಕಾಲದಲ್ಲಿ ಕೆಲವು ಸಮೂಹ ಮಾಧ್ಯಮಗಳನ್ನು ಬಳಕೆ ಮಾಡುತ್ತೇವೆ.

        ಈ ಎಲ್ಲಾ ಅಂಶಗಳೂ ಬೋಧನಾ ಸಮಯದಲ್ಲಿ ಉತ್ತಮ ಸಂವಹನ ಕ್ರಿಯೆ ಏರ್ಪಡಿಸುವುದರಿಂದ ಬೋಧನೆಯು ಒಂದು ಸಂವಹನ ಕ್ರಿಯೆ ಎಂದು ಪರಿಗಣಿಸಬಹುದು.

4.ಸಹಯೋಗ ಕೌಶಲ್ಯ

     ಇಬ್ಬರು ಅಥವಾ ಹೆಚ್ಚು ಜನರು ಒಟ್ಟಿಗೆ ಕೆಲಸ ಮಾಡಿ ಕಾರ್ಯವನ್ನು ಉತ್ತಮಗೊಳಿಸಲು ಸಹಾಯ ಮಾಡುವ ನಡವಳಿಕೆಯೇ ಸಹಯೋಗ ಕೌ‍ಶಲ್ಯ. ಶಿಕ್ಷಕರು ತಮ್ಮ ವಿದ್ಯಾರ್ಥಿಗಳನ್ನು ಸಹಯೋಗ ಕೌಶಲ್ಯಗಳ ತರಬೇತಿ ಕೊಡಬಹುದಾಗಿದೆ, ಇದರಿಂದ ಅವರು ಗುಂಪು ಚಟುವಟಿಕೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವರು.

     ಸಹಯೋಗವು ಒಂದು ಸಾಮಾನ್ಯ ಗುರಿಗಾಗಿ ಒಟ್ಟಾಗಿ ಕೂಡಿ ಕೆಲಸ ಮಾಡುವ ಕ್ರಿಯೆಯಾಗಿದೆ. ಸಹಯೋಗ ಕೌಶಲ್ಯದಲ್ಲಿ ನಿಪುಣರಾಗಬೇಕಾದರೆ ವೈವಿದ್ಯಮಯ ತಂಡಗಳ ಜೊತೆ ಪರಿಣಾಮಕಾರಿಯಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ನಿರೀಕ್ಷಿಸುತ್ತದೆ. ಹಾಗೂ ಸಹಾಯ ಹಸ್ತ ನೀಡುವ ಮತ್ತು ಅಗತ್ಯ ರಾಜಿ ಸಂಧಾನ ಮಾಡಿಕೊಳ್ಳುವ ಸಾಮರ್ಥ್ಯದ ಅಗತ್ಯವಿದೆ.

 

ಸಹಯೋಗ ಕಲಿಕೆಯ ಲಾಭಗಳು

  1. ಉನ್ನತ ಮಟ್ಟದ ಆಲೋಚನೆ, ಮೌಖಿಕ ಸಂವಹನ, ಸ್ವನಿರ್ವಹಣೆ ಮತ್ತು ನಾಯಕತ್ವ ಕೌಶಲ್ಯಗಳನ್ನು ಬೆಳೆಸುತ್ತದೆ.
  2. ವಿದ್ಯಾರ್ಥಿ ಮತ್ತು ಶಿಕ್ಷಕರ ಅಂತರ ಕ್ರಿಯೆಯನ್ನು ಹೆಚ್ಚಿಸುತ್ತದೆ.
  3. ವಿದ್ಯಾರ್ಥಿಗಳ ಧಾರಣಾ ಶಕ್ತಿ, ಆತ್ಮಗೌರವ/ಸ್ವಾಭಿಮಾನ ಮತ್ತು ಜವಾಬ್ದಾರಿಯನ್ನು ಹೆಚ್ಚಿಸುತ್ತದೆ.
  4. ವೈವಿದ್ಯತೆಯಿಂದ ಕೂಡಿದ ದೃಷ್ಠಿಕೋನವನ್ನು ಅರ್ಥಮಾಡಿಕೊಳ್ಳಲು ಹಾಗೂ ಮಾನ್ಯತೆ ಹೊಂದಲು ಸಹಾಯಕವಾಗಿದೆ.

ಅಥವಾ

ಸಹಯೋಗದ ಲಾಭಗಳು

1.     ಸಮಸ್ಯೆ ಪರಿಹಾರ ಕೌಶಲ್ಯವನ್ನು ಅಭಿವೃದ್ದಿಪಡಿಸುತ್ತದೆ.

2.     ಸಾಮಾಜಿಕ ಅಂತರ ಕ್ರಿಯೆಯನ್ನು ಪೋತ್ಸಾಹಿಸುತ್ತದೆ.

3.     ವೈವಿದ್ಯತೆಯನ್ನು ಉತೇಜಿಸುತ್ತದೆ.

4.     ಸಂವಹನ ಕೌಶಲ್ಯವನ್ನು ಉತ್ತಮಗೊಳಿಸುತ್ತದೆ.

5.     ಸೃಜನ ಶೀಲತೆಗೆ ಪ್ರೇರಣೆ ನೀಡುತ್ತದೆ.

6.     ನಂಬಿಕೆಯನ್ನು ಹುಟ್ಟಿಸುತ್ತದೆ.

7.     ಆತ್ಮವಿಶ್ವಾಸವನ್ನು ಬೆಳೆಸುತ್ತದೆ/ಹೆಚ್ಚಿಸುತ್ತದೆ.

8.     ನಿಶ್ಚಿತತೆಯನ್ನು ಪ್ರೋತ್ಸಾಹಿಸುತ್ತದೆ.

9.     ಜನರು ಮನರಂಜನೆ ಹೊಂದಲು ಅನುವು ಮಾಡಿಕೊಡುತ್ತದೆ.

10.  ವಿಮರ್ಶಾತ್ಮಕ ಆಲೋಚನಾ ಕೌಶಲ್ಯವನ್ನು ಬೆಳೆಸುತ್ತದೆ.

ಸಹಯೋಗದ ಕೌಶಲ್ಯವನ್ನು ಬೆಳೆಸುವ ಬಗೆ

1.     ಸ್ಪಷ್ಟ ಗುರಿ ಮತ್ತು ಉದ್ದೇಶಗಳನ್ನು ಗೊತ್ತುಪಡಿಸಿಕೊಳ್ಳಬೇಕು.

2.     ನಿಮ್ಮ ಉದ್ದೇಶಗಳನ್ನುಸ್ಪಷ್ಟವಾಗಿ ತಿಳಿಸಬೇಕು.

3.     ರಾಜಿ ಮಾಡಿಕೊಳ್ಳಲು ಕಲಿಯುವುದು ಮತ್ತು ಆಲಿಸುವುದು.

4.     ಸವಾಲುಗಳನ್ನು ಜಯಿಸುವುದು ಹಾಗೂ ಸಮಸ್ಯೆಗಳನ್ನು ಯಾರನ್ನೂ ದೂಷಿಸದೆ ಪರಿಹರಿಸಿಕೊಳ್ಳಬೇಕು.

5.     ಮುಕ್ತ ಮನಸ್ಸನ್ನು ಹೊಂದಿರಬೇಕು.

6.     ಸಹಯೋಗವನ್ನು ಮತ್ತು ಅದರಿಂದ ಸಿಗುವ ಗೆಲುವನ್ನು ಸಂಭ್ರಮಿಸಬೇಕು.

 

Comments

Popular posts from this blog

ಬಾಲ್ಯಾವಸ್ಥೆ

ಶೈಕ್ಷಣಿಕ ಮನೋವಿಜ್ಙಾನ-ಅರ್ಥ

ಕಲಿಕೆ