ಶೈಕ್ಷಣಿಕ ಮನೋವಿಜ್ಙಾನ-ಅರ್ಥ
ಶೈಕ್ಷಣಿಕ
ಮನೋವಿಜ್ಙಾನ
ಅರ್ಥ:
ಶೈಕ್ಷಣಿಕ ಮನೋವಿಜ್ಙಾನವು ಅನ್ವಯಿಕ ಮನೋವಿಜ್ಞಾನದ ಒಂದು
ಶಾಖೆಯಾಗಿದೆ. ಇದು ಶಿಕ್ಷಣಕ್ಕೆ ಅನ್ವಯಿಸಿದ ಮನೋವಿಜ್ಞಾನವಾಗಿದೆ. ಶೈಕ್ಷಣಿಕ ಮನೋವಿಜ್ಙಾನವು ಮನೋವಿಜ್ಙಾನದ
ಸಾಮಾನ್ಯ ತತ್ವಗಳನ್ನು ಶೈಕ್ಷಣಿಕ ಅಭ್ಯಾಸಗಳಿಗೆ ಅನ್ವಯಿಸುವ ಗುರಿಯನ್ನು ಹೊಂದಿದೆ.
ಶೈಕ್ಷಣಿಕ ಮನೋವಿಜ್ಙಾನವು ಅನ್ವಯಿಕ ಮನೋವಿಜ್ಞಾನದ ಮುಖ್ಯವಾದ
ಶಾಖೆಯಾಗಿದೆ. ಇದು ಶೈಕ್ಷಣಿಕ ಸನ್ನಿವೇಶಗಳನ್ನು ಮನೋವೈಜ್ಞಾನಿಕ ದೃಷ್ಟಿಕೋನದಲ್ಲಿ ಅಭ್ಯಾಸಿಸುವುದಾಗಿದೆ.
ಇದು ಶೈಕ್ಷಣಿಕ ಸಮಸ್ಯೆಗಳನ್ನು ಮನೋವೈಜ್ಞಾನಿಕ ವಸ್ತುಸ್ಥಿತಿಗಳ ಆಧಾರದ ಮೇಲೆ ಅಭ್ಯಾಸ ಮಾಡುವುದಾಗಿದೆ.
ಶಿಕ್ಷಕನಿಗೆ ಶೈಕ್ಷಣಿಕ ಮನೋವಿಜ್ಙಾನದ
ಜ್ಞಾನದ ಅವಶ್ಯಕತೆ.
- ವೈಯಕ್ತಿಕ ಭಿನ್ನತೆಗಳಿಗನುಗುಣವಾಗಿ ಅಗತ್ಯತೆಗಳನ್ನು ಪೂರೈಸುವುದು.
- ಕಲಿಯುವನನ್ನು ಅರ್ಥಮಾಡಿಕೊಳ್ಳಲು.
- ವಿದ್ಯಾರ್ಥಿಗಳ ವಿಕಾಸಾತ್ಮಕ ಗುಣಲಕ್ಷಣಗಳನ್ನು ಅರ್ಥಮಾಡಿಕೊಳ್ಳಲು.
- ಸಮೂಹ ಗತಿಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು.
- ಪರಿಣಾಮಕಾರಿ ಬೊಧನಾ ವಿಧಾನವನ್ನು ಅಳವಡಿಸಿಕೊಳ್ಳಲು.
- ತರಗತಿಯ ಕಲಿಕೆಯ ಸ್ವಭಾವವನ್ನು ಅರ್ಥಮಾಡಿಕೊಳ್ಳಲು.
- ಪಠ್ಯಕ್ರಮ ತಯಾರಿಕೆಯಲ್ಲಿ ಸಹಾಯಕವಾಗಿದೆ.
- ಕಲಿವಿನ ಫಲಗಳನ್ನು ಅಳೆಯಲು ಸಹಾಯಕವಾಗಿದೆ.
- ಕಲಿಕಾ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಲು.
- ಮಾನಸಿಕ ಆರೋಗ್ಯದ ಬಗ್ಗೆ ಜ್ಞಾನ ಹೊಂದಲು.
ಶೈಕ್ಷಣಿಕ ಮನೋವಿಜ್ಞಾನದ ವ್ಯಾಪ್ತಿ:
- ಮಾನವನ ವರ್ತನೆ
- ಬೆಳವಣಿಗೆ ಮತ್ತು ವಿಕಾಸ
- ಕಲಿಯುವವನು
- ಕಲಿಕಾನುಭವಗಳು
- ಕಲಿಕಾ ಪ್ರಕ್ರಿಯೆಗಳು
- ಕಲಿಕಾ ಸಂದರ್ಭ ಅಥವಾ ವಾತಾವರಣ
- ಕಲಿಕಾ ಪ್ರಕಿಯೆಯ ಮೌಲ್ಯಮಾಪನ
- ವೈಯಕ್ತಿಕ ಭಿನ್ನತೆ
Comments
Post a Comment