Posts

Showing posts from May, 2022

ಅಭಿಪ್ರೇರಣೆ

  ಅಭಿಪ್ರೇರಣೆ   ಅರ್ಥ:            Motivation ಎಂಬ ಪದವು ಲ್ಯಾಟಿನ್‌ ಭಾಷೆಯ Movers ಎಂಬ ಪದದಿಂದ ಬಂದಿದೆ.  Movers ಎಂದರೆ ʼಚಲಿಸುವಂತೆ ಮಾಡುʼ, ಕಾರ್ಯೋನ್ಮುಖವಾಗುವಂತೆ ಮಾಡುʼ ಎಂದರ್ಥ. ಅಭಿಪ್ರೇರಣೆ ಎಂದರೆ ಜೀವಿಯನ್ನು ಸಕ್ರೀಯವಾಗುವಂತೆ ಮಾಡುವ ಪ್ರಕ್ರಿಯೆ. ಜೀವಿಯನ್ನು ಕ್ರಿಯಾಶೀಲಗೊಳಿಸಿ, ಅವನು ಶಕ್ತಿಯುತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಪ್ರಕ್ರಿಯೆಯೇ ಅಭಿಪ್ರೇರಣೆ. ವ್ಯಾಖ್ಯಾನಗಳು: 1. ಕ್ರೋ ಮತ್ತು ಕ್ರೋ: - “ಪ್ರೇರಣೆಯು ಕಲಿಕೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಅಂಶವಾಗಿದ್ದು ಕಲಿಕೆಗೆ ಆಧಾರವಾಗಿದೆ”. 2. ಮೋರ್‌ ಮತ್ತು ಮ್ಯಾಕ್ಸ್:- “ಅಭಿಪ್ರೇರಣೆಯು ವರ್ತನೆಯನ್ನು ಹುರಿದುಂಬಿಸುವ, ಪೋಷಿಸುವ ಮಾತ್ತು ನಿರ್ದೇಶಿಸುವ ಸಂಕೀರ್ಣ ಆಂತರಿಕ ಪ್ರಕ್ರಿಯೆಗಳ ಸಂಯೋಜನೆಯಾಗಿದೆ”. 3. ಸ್ಕಿನ್ನರ್:- “ಶಾಲಾ ಕಲಿಕೆಯಲ್ಲಿ ಅಭಿಪ್ರೇರಣೆಯು ಅಪೇಕ್ಷಿತ ವರ್ತನೆಯನ್ನು ಹುರಿದುಂಬಿಸುವ, ಕಾಪಾಡುವ, ಪೋಷಿಸುವ ಮತ್ತು ನಿರ್ದೇಶಿಸುವುದನ್ನು ಒಳಗೊಂಡಿರುತ್ತದೆ.” ಅಭಿಪ್ರೇರಣೆಯ ವಿಧಗಳು: 1. ಆಂತರಿಕ ಅಥವಾ ಸ್ವಾಭಾವಿಕ ಅಥವಾ ಸಹಜ ಅಭಿಪ್ರೇರಣೆ:       ಎಲ್ಲಾ ಮನುಷ್ಯರಿಗೂ ಆಂತರಿಕವಾಗಿ ಜನ್ಮದತ್ತವಾದ ಸಹಜ ಪ್ರವೃತ್ತಿಗಳು, ಅವಶ್ಯಕತೆಗಳು, ಆಕಾಂಷೆಗಳು, ಆಸಕ್ತಿಗಳು, ಬಯಕೆಗಳು ಇರುತ್ತವೆ. ವ್ಯಕ್ತಿಯ ಜನ್ಮಜಾತವಾಗಿ ಬಂದಂತಹ ಸಹಜ ಪ್ರವೃತ್ತಿಗಳ ಕಾರಣದ...

ಕಲಿಕೆ

  ಕಲಿಕೆ ಅರ್ಥ/ವ್ಯಾಖ್ಯಾನಗಳು:          ಕಲಿಕೆ ಎಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿದೆ. ಮಾನವರುತಮ್ಮ ಜೀವನ ಪೂರ್ತಿ ಅನೇಕ ಬದಲಾವಣೆಗಳನ್ನು ಹೊಂದುತ್ತಿರುತ್ತಾರೆ. ಮಾನವನಿಗೆ ಕಲಿಕೆ ಅನಿವಾರ್ಯ ಹಾಗೂ ಅಗತ್ಯ. ಅವನ ಭವಿಷ್ಯ, ಅವನು ಮಾಡಿಕೊಳ್ಳುವ ನಾನಾ ಬಗೆಯ ಕಲಿಕೆಯ ಮೇಲೆಯೇ ಅವಲಂಬಿಸಿರುತ್ತದೆ. ಈ ರೀತಿಯ ಕಲಿಕೆ ಜ್ಞಾನ, ಕುಶಲತೆ, ಆಸಕ್ತಿ ನಾನಾ ಬಗೆಯ ಸಾಮರ್ಥ್ಯಗಳು ಮತ್ತು ಅಭಿರುಚಿಗಳಿಗೆ ಸಂಬಂಧಪಟ್ಟಿರಬಹುದು. ಇವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಕ್ಕಳಿಗೆ ಒದಗಿಸಿಕೊಡುವುದೇ ಶಿಕ್ಷಣದ ಮುಖ್ಯ ಕರ್ತವ್ಯವಾಗಿರುತ್ತದೆ. ಆದುದರಿಂದ ಶಿಕ್ಷಣದ ಯಾವುದೇ ಹಂತದಲ್ಲಿ ಕಲಿಕೆ ಮುಖ್ಯವಾಗುತ್ತದೆ. ವಿವಿಧ ಅನುಭವಗಳಿಂದ ಮಕ್ಕಳು ಕಲಿಯುತ್ತಾರೆ, ಇದರಿಂದ ಅವರ ವರ್ತನೆಯಲ್ಲಿ ಸೂಕ್ತ ಬದಲಾವಣೆಗಳಾಗುತ್ತವೆ. ಇದನ್ನೇ ಕಲಿಕೆ ಇನ್ನುತ್ತಾರೆ. ಅರ್ಥ/ವ್ಯಾಖ್ಯಾನಗಳು: 1.      “ಅನುಭವಗಳ ಮೂಲಕ ನಡವಳಿಕೆಯಲ್ಲುಂಟಾಗುವ ಬದಲಾವಣೆಯೇ ಕಲಿಕೆ”                                            ...