Posts

ಆಲೋಚನಾ ಕೌಶಲಗಳು

  ಆಲೋಚನಾ ಕೌಶಲಗಳು ಅರ್ಥ:            ಆಲೋಚನಾ ಕೌಶಲವು ಒಂದು ಮಾನಸಿಕ ಪ್ರಕ್ರಿಯೆಯಾಗಿದೆ, ಇದನ್ನು ನಾವು ಸಮಸ್ಯೆ ಪರಿಹಾರ ಮಾಡಲು, ತೀರ್ಮಾನ ಕೈಗೊಳ್ಳಲು, ಪ್ರಶ್ನಿಸುವುದಕ್ಕೆ, ಯೋಜನೆ ತಯಾರಿಸುವುದಕ್ಕೆ, ತೀರ್ಪುಕೊಡುವುದಕ್ಕೆ, ಮಾಹಿತಿ ಸಂಘಟನೆ ಮತ್ತು ಹೊಸ ಯೋಚನೆಗಳ ಸೃಷ್ಠಿಸುವ ಮುಂತಾದ ಕಾರ್ಯಗಳನ್ನು ಮಾಡುವುದಕ್ಕೆ ಬಳಸುತ್ತೇವೆ. ವ್ಯಾಖ್ಯಾನಗಳು: ಜೆ. ಎಸ್. ರಾಸ್: ‌ “ಆಲೋಚನೆಯು ತಿಳುವಳಿಕೆಗೆ ಸಂಬಂಧಿಸಿದಂತೆ ಒಂದು ಮಾನಸಿಕ ಚಟುವಟಿಕೆಯಾಗಿದೆ.” ಜೆ.ಪಿ. ಗಿಲ್ಪೋರ್ಡ :”ಆಲೋಚನೆಯು ಒಂದು ಸಾಂಕೇತಿಕ ನಡವಳಿಕೆ, ಎಲ್ಲಾ ಆಲೋಚನೆಗಳು ಬದಲಿ ವಸ್ತುಗಳ ಜೊತೆ ವ್ಯವಹರಿಸುತ್ತದೆ.” ಕಾಲಿನ್‌ ಮತ್ತು ಜೇಮ್ಸ್ ಡ್ರೀವರ್:‌ “ಜೀವಿಯು ಸಂದರ್ಭದ ಜೊತೆಗಿನ ಜಾಗೃತ ಹೊಂದಾಣಿಕೆ ಎಂದು ವರ್ಣಿಸಲಾಗಿದೆ. ಆಲೋಚನೆಯು ಮಾನಸಿಕ ಜೀವನ, ಗ್ರಹಿಕೆ, ಮಾತ್ತು ಭಾವನೆಯ ಎಲ್ಲಾ ಹಂತಗಳಲ್ಲಿಯೂ ಸ್ಪಷ್ಟವಾಗಿ ಕಂಡು ಬರುತ್ತದೆ.” ಆಲೋಚನೆಯ ಮೇಲೆ ಪ್ರಭಾವ ಬೀರುವ ಅಂಶಗಳು: ಬಲವಾದ ಅಭಿಪ್ರೇರಣೆ: ಅಭಿಪ್ರೇರಣೆಯಿಲ್ಲದೆ ಬಲವಾದ ಮತ್ತು ವ್ಯವಸ್ಥಿತವಾದ ಆಲೋಚನೆ ಸಾಧ್ಯವಿಲ್ಲ. ಆಲೋಚನೆಯು ವ್ಯಕ್ತಿಯು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಬಲವಾದ ಅಭಿಪ್ರೇರಣೆಯು ಬಲವಾದ ಆಲೋಚನೆಗೆ ದಾರಿ ಮಾಡಿಕೊಡುತ್ತದೆ. ಆಸಕ್...

ಅಭಿಪ್ರೇರಣೆ

  ಅಭಿಪ್ರೇರಣೆ   ಅರ್ಥ:            Motivation ಎಂಬ ಪದವು ಲ್ಯಾಟಿನ್‌ ಭಾಷೆಯ Movers ಎಂಬ ಪದದಿಂದ ಬಂದಿದೆ.  Movers ಎಂದರೆ ʼಚಲಿಸುವಂತೆ ಮಾಡುʼ, ಕಾರ್ಯೋನ್ಮುಖವಾಗುವಂತೆ ಮಾಡುʼ ಎಂದರ್ಥ. ಅಭಿಪ್ರೇರಣೆ ಎಂದರೆ ಜೀವಿಯನ್ನು ಸಕ್ರೀಯವಾಗುವಂತೆ ಮಾಡುವ ಪ್ರಕ್ರಿಯೆ. ಜೀವಿಯನ್ನು ಕ್ರಿಯಾಶೀಲಗೊಳಿಸಿ, ಅವನು ಶಕ್ತಿಯುತವಾಗಿ ಕಾರ್ಯ ನಿರ್ವಹಿಸುವಂತೆ ಮಾಡುವ ಪ್ರಕ್ರಿಯೆಯೇ ಅಭಿಪ್ರೇರಣೆ. ವ್ಯಾಖ್ಯಾನಗಳು: 1. ಕ್ರೋ ಮತ್ತು ಕ್ರೋ: - “ಪ್ರೇರಣೆಯು ಕಲಿಕೆಯಲ್ಲಿ ಆಸಕ್ತಿಯನ್ನು ಹುಟ್ಟಿಸುವ ಅಂಶವಾಗಿದ್ದು ಕಲಿಕೆಗೆ ಆಧಾರವಾಗಿದೆ”. 2. ಮೋರ್‌ ಮತ್ತು ಮ್ಯಾಕ್ಸ್:- “ಅಭಿಪ್ರೇರಣೆಯು ವರ್ತನೆಯನ್ನು ಹುರಿದುಂಬಿಸುವ, ಪೋಷಿಸುವ ಮಾತ್ತು ನಿರ್ದೇಶಿಸುವ ಸಂಕೀರ್ಣ ಆಂತರಿಕ ಪ್ರಕ್ರಿಯೆಗಳ ಸಂಯೋಜನೆಯಾಗಿದೆ”. 3. ಸ್ಕಿನ್ನರ್:- “ಶಾಲಾ ಕಲಿಕೆಯಲ್ಲಿ ಅಭಿಪ್ರೇರಣೆಯು ಅಪೇಕ್ಷಿತ ವರ್ತನೆಯನ್ನು ಹುರಿದುಂಬಿಸುವ, ಕಾಪಾಡುವ, ಪೋಷಿಸುವ ಮತ್ತು ನಿರ್ದೇಶಿಸುವುದನ್ನು ಒಳಗೊಂಡಿರುತ್ತದೆ.” ಅಭಿಪ್ರೇರಣೆಯ ವಿಧಗಳು: 1. ಆಂತರಿಕ ಅಥವಾ ಸ್ವಾಭಾವಿಕ ಅಥವಾ ಸಹಜ ಅಭಿಪ್ರೇರಣೆ:       ಎಲ್ಲಾ ಮನುಷ್ಯರಿಗೂ ಆಂತರಿಕವಾಗಿ ಜನ್ಮದತ್ತವಾದ ಸಹಜ ಪ್ರವೃತ್ತಿಗಳು, ಅವಶ್ಯಕತೆಗಳು, ಆಕಾಂಷೆಗಳು, ಆಸಕ್ತಿಗಳು, ಬಯಕೆಗಳು ಇರುತ್ತವೆ. ವ್ಯಕ್ತಿಯ ಜನ್ಮಜಾತವಾಗಿ ಬಂದಂತಹ ಸಹಜ ಪ್ರವೃತ್ತಿಗಳ ಕಾರಣದ...

ಕಲಿಕೆ

  ಕಲಿಕೆ ಅರ್ಥ/ವ್ಯಾಖ್ಯಾನಗಳು:          ಕಲಿಕೆ ಎಂದರೆ ವ್ಯಕ್ತಿಯ ವರ್ತನೆಯಲ್ಲಿ ಬದಲಾವಣೆಗಳನ್ನು ತರುವುದಾಗಿದೆ. ಮಾನವರುತಮ್ಮ ಜೀವನ ಪೂರ್ತಿ ಅನೇಕ ಬದಲಾವಣೆಗಳನ್ನು ಹೊಂದುತ್ತಿರುತ್ತಾರೆ. ಮಾನವನಿಗೆ ಕಲಿಕೆ ಅನಿವಾರ್ಯ ಹಾಗೂ ಅಗತ್ಯ. ಅವನ ಭವಿಷ್ಯ, ಅವನು ಮಾಡಿಕೊಳ್ಳುವ ನಾನಾ ಬಗೆಯ ಕಲಿಕೆಯ ಮೇಲೆಯೇ ಅವಲಂಬಿಸಿರುತ್ತದೆ. ಈ ರೀತಿಯ ಕಲಿಕೆ ಜ್ಞಾನ, ಕುಶಲತೆ, ಆಸಕ್ತಿ ನಾನಾ ಬಗೆಯ ಸಾಮರ್ಥ್ಯಗಳು ಮತ್ತು ಅಭಿರುಚಿಗಳಿಗೆ ಸಂಬಂಧಪಟ್ಟಿರಬಹುದು. ಇವುಗಳನ್ನು ವ್ಯವಸ್ಥಿತ ರೀತಿಯಲ್ಲಿ ಮಕ್ಕಳಿಗೆ ಒದಗಿಸಿಕೊಡುವುದೇ ಶಿಕ್ಷಣದ ಮುಖ್ಯ ಕರ್ತವ್ಯವಾಗಿರುತ್ತದೆ. ಆದುದರಿಂದ ಶಿಕ್ಷಣದ ಯಾವುದೇ ಹಂತದಲ್ಲಿ ಕಲಿಕೆ ಮುಖ್ಯವಾಗುತ್ತದೆ. ವಿವಿಧ ಅನುಭವಗಳಿಂದ ಮಕ್ಕಳು ಕಲಿಯುತ್ತಾರೆ, ಇದರಿಂದ ಅವರ ವರ್ತನೆಯಲ್ಲಿ ಸೂಕ್ತ ಬದಲಾವಣೆಗಳಾಗುತ್ತವೆ. ಇದನ್ನೇ ಕಲಿಕೆ ಇನ್ನುತ್ತಾರೆ. ಅರ್ಥ/ವ್ಯಾಖ್ಯಾನಗಳು: 1.      “ಅನುಭವಗಳ ಮೂಲಕ ನಡವಳಿಕೆಯಲ್ಲುಂಟಾಗುವ ಬದಲಾವಣೆಯೇ ಕಲಿಕೆ”                                            ...