ಆಲೋಚನಾ ಕೌಶಲಗಳು
ಆಲೋಚನಾ
ಕೌಶಲಗಳು
ಅರ್ಥ:
ಆಲೋಚನಾ ಕೌಶಲವು ಒಂದು ಮಾನಸಿಕ ಪ್ರಕ್ರಿಯೆಯಾಗಿದೆ, ಇದನ್ನು
ನಾವು ಸಮಸ್ಯೆ ಪರಿಹಾರ ಮಾಡಲು, ತೀರ್ಮಾನ ಕೈಗೊಳ್ಳಲು, ಪ್ರಶ್ನಿಸುವುದಕ್ಕೆ, ಯೋಜನೆ ತಯಾರಿಸುವುದಕ್ಕೆ,
ತೀರ್ಪುಕೊಡುವುದಕ್ಕೆ, ಮಾಹಿತಿ ಸಂಘಟನೆ ಮತ್ತು ಹೊಸ ಯೋಚನೆಗಳ ಸೃಷ್ಠಿಸುವ ಮುಂತಾದ ಕಾರ್ಯಗಳನ್ನು
ಮಾಡುವುದಕ್ಕೆ ಬಳಸುತ್ತೇವೆ.
ವ್ಯಾಖ್ಯಾನಗಳು:
- ಜೆ. ಎಸ್. ರಾಸ್: “ಆಲೋಚನೆಯು ತಿಳುವಳಿಕೆಗೆ ಸಂಬಂಧಿಸಿದಂತೆ
ಒಂದು ಮಾನಸಿಕ ಚಟುವಟಿಕೆಯಾಗಿದೆ.”
- ಜೆ.ಪಿ. ಗಿಲ್ಪೋರ್ಡ:”ಆಲೋಚನೆಯು ಒಂದು ಸಾಂಕೇತಿಕ ನಡವಳಿಕೆ,
ಎಲ್ಲಾ ಆಲೋಚನೆಗಳು ಬದಲಿ ವಸ್ತುಗಳ ಜೊತೆ ವ್ಯವಹರಿಸುತ್ತದೆ.”
- ಕಾಲಿನ್ ಮತ್ತು ಜೇಮ್ಸ್
ಡ್ರೀವರ್: “ಜೀವಿಯು
ಸಂದರ್ಭದ ಜೊತೆಗಿನ ಜಾಗೃತ ಹೊಂದಾಣಿಕೆ ಎಂದು ವರ್ಣಿಸಲಾಗಿದೆ. ಆಲೋಚನೆಯು ಮಾನಸಿಕ ಜೀವನ, ಗ್ರಹಿಕೆ,
ಮಾತ್ತು ಭಾವನೆಯ ಎಲ್ಲಾ ಹಂತಗಳಲ್ಲಿಯೂ ಸ್ಪಷ್ಟವಾಗಿ ಕಂಡು ಬರುತ್ತದೆ.”
ಆಲೋಚನೆಯ
ಮೇಲೆ ಪ್ರಭಾವ ಬೀರುವ ಅಂಶಗಳು:
- ಬಲವಾದ ಅಭಿಪ್ರೇರಣೆ: ಅಭಿಪ್ರೇರಣೆಯಿಲ್ಲದೆ ಬಲವಾದ ಮತ್ತು
ವ್ಯವಸ್ಥಿತವಾದ ಆಲೋಚನೆ ಸಾಧ್ಯವಿಲ್ಲ. ಆಲೋಚನೆಯು ವ್ಯಕ್ತಿಯು ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ
ಒಂದು ಪ್ರಕ್ರಿಯೆಯಾಗಿದೆ. ಬಲವಾದ ಅಭಿಪ್ರೇರಣೆಯು ಬಲವಾದ ಆಲೋಚನೆಗೆ ದಾರಿ ಮಾಡಿಕೊಡುತ್ತದೆ.
- ಆಸಕ್ತಿ ಮತ್ತು ಅನ್ವಯ: ಇವೆರಡೂ ಯಾವ ಸಮಸ್ಯೆಗೆ ಪರಿಹಾರವನ್ನು
ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆಯೋ ಅಂತಹ ಸಮಸ್ಯೆ ಪರಿಹಾರಕ್ಕೆ ಗಮನಾರ್ಹವಾದ ಕೊಡುಗೆಯನ್ನು
ಕೊಟ್ಟಿದೆ. ಸಮಸ್ಯೆ ಕಾಣಿಸಿಕೊಂಡಾಗ ಆಸಕ್ತಿ ಮತ್ತು ಅನ್ವಯಗಳು ತನ್ನದೇ ಆದ ರೀತಿಯಲ್ಲಿ ಕೆಲಸ
ಮಾಡಲು ಪ್ರಾರಂಭಿಸುತ್ತದೆ. ಭಾವನೆಗಳ ಅಭಿವ್ಯಕ್ತಿಯೂ ಸಮಸ್ಯೆ ಪರಿಹರಿಸುವಲ್ಲಿ ಸಹಾಯಕವಾಗಿದೆ.
ಸಮಸ್ಯೆ ಪರಿಹರಿಸಿಕೊಳ್ಳುವಲ್ಲಿ ಹೆಚ್ಚಿನ ಅನ್ವಯಿಸುವಿಕೆಯ ಜೊತೆ ಕೆಲಸ ಮಾಡಿದಾಗ ಅದು ನಮಗೆ
ಆಸಕ್ತಿ ಇರುವ ವಿಷಯದೊಂದಿಗೆ ಅತೀ ಹತ್ತಿರದ ಸಂಬಂಧ ಹೊಂದಿರುತ್ತದೆ.
- ಜಾಗರೂಕತೆ ಮತ್ತು
ನಮ್ಯತೆ: ಅನುಭವಯುಕ್ತ
ಆಲೋಚನೆಯ ಮುಂದೆ ನಮ್ಮ ಕಿರಿಕಿರಿಯನ್ನು ಪ್ರದರ್ಶಿಸಿದಾಗ ಮತ್ತು ಯಶಸ್ವಿಯಲ್ಲದ ಕಾರ್ಯಗಳು ಹೆಚ್ಚಿನ,
ಸೂಕ್ತ, ಹೊಸ ತಂತ್ರಗಳನ್ನು ಸಮಸ್ಯೆ ಪರಿಹಾರಕ್ಕಾಗಿ ಬಳಸುವಂತೆ ಮಾಡುತ್ತದೆ. ಗಮ್ಯತೆಯು ನಮ್ಮ
ಮನಸನ್ನು ಸಂರಕ್ಷಣ ಮತ್ತು ಕುರುಡು ನಂಬಿಕೆಗಳಿಂದ ಹೊರ ತರುತ್ತದೆ.
- ಸಮಯದ ನಿರ್ಬಂಧ: ಆಲೋಚನೆಯು ಸಮಯವನ್ನು ಒಳಗೊಂಡಿರುತ್ತದೆ.
ಆಲೋಚನೆ ಪ್ರಕ್ರಿಯೆ ನಡೆಯುವ ಸಂದರ್ಭದಲ್ಲಿ ಸಮಯವು ಕಳೆದಿರುತ್ತದೆ. ಸಮಸ್ಯೆಗೆ ಪರಿಹಾರವನ್ನು
ಕಂಡುಹಿಡಿಯುವ ಸಂದರ್ಭದಲ್ಲಿ ಸಮಯದ ವಿಷಯದಲ್ಲಿ ಹೆಚ್ಚಿನ ಬಿಗಿ ಇರಬಾರದು. ಸಮಯದ ಮಿತಿಯು ಯಾವುದೇ
ಕಾರಣಕ್ಕೂ ಬಿಗಿತ ಇರಬಾರದು.
- ಬುದ್ದಿವಂತಿಕೆ ಮತ್ತು
ಜ್ಞಾನದ ವ್ಯಾಪಕ ವ್ಯಾಪ್ತಿ:
ಆಲೋಚನೆಗಳು ಅಂತಃದೃಷ್ಠಿ ಮತ್ತು ದೂರ ದೃಷ್ಠಿಯ ಅಗತ್ಯವಿದೆ. ಮನಸ್ಸಿನ ಅಗತ್ಯ ಸೌಲಭ್ಯಗಳ ಸರಿಯಾದ
ವಿಕಾಸವು, ಸಮಸ್ಯೆಗಳನ್ನು ಬಿಡಿಸುವಲ್ಲಿ ಸಹಾಯಕವಾಗಿದೆ. ಕೆಲವು ಜ್ಞಾನಿಗಳು ಬುದ್ದಿಶಕ್ತಿ
ಮತ್ತು ಆಲೋಚನೆಗಳು ಎರಡೂ ಒಂದೇ ಎಂದು ಗುರ್ತಿಸಿದ್ದಾರೆ. ಆದರೆ ಬುದ್ದಿಶಕ್ತಿಯು ಆಲೋಚನೆಗೆ
ಪೂರ್ವ ಅಗತ್ಯತೆಯಾಗಿದೆ. ಅತೀ ಬುದ್ದಿವಂತ ಜನರು ಆಲೋಚನೆಯ ಹೆಚ್ಚಿನ ಯಶಸ್ಸಿನಲ್ಲಿ ಪಾಲ್ಗೋಳ್ಳುತ್ತಾರೆ.
- ಭಾವನೆಗಳ ಗೈರು: ಭಾವನೆಗಳ ಉತ್ಸಾಹದಲ್ಲಿ ಆಲೋಚನೆಗಳು
ನಡೆಯುವುದಿಲ್ಲ. ಉದಾಹರಣೆಗೆ ಅತೀ ಕೋಪ, ಭಯದಲ್ಲಿರುವಾಗ ಆಲೋಚನೆ ಸಾಧ್ಯವಾಗುವುದಿಲ್ಲ. ಅಂತಹ
ಸಂದರ್ಭದಲ್ಲಿ ಆಲೋಚನೆ ಮಾಡಿದಾಗ ನಿಷ್ಪಕ್ಷಪಾತವಿಲ್ಲದೆ ಪೂರ್ವಗ್ರಹಪೀಡಿತರಾಗಿರುತ್ತಾರೆ.
- ಮೂಢನಂಬಿಕೆಗಳ ಪರಿಣಾಮ: ಶುದ್ಧ ಆಲೋಚನೆಯು ಅಗತ್ಯವಾಗಿ ಮೂಢನಂಬಿಕೆಗಳ,
ಕಳೆದ ಅನುಭವಗಳಿಂದ, ಹಾಗೂ ಪೂರ್ವಗ್ರಹಪೀಡಿತದ ಪ್ರಭಾವದಿಂದ ಮುಕ್ತವಾಗಿರಬೇಕು, ಕಾರಣ ಪೂರ್ವಗ್ರಹಿತವು
ಆಲೋಚನೆಯನ್ನು ವಿರೂಪಗೊಳಿಸುತ್ತದೆ. ಉದಾ: ಒಬ್ಬ ಆದರ್ಶ ವ್ಯಕ್ತಿಯ ನೂನ್ಯತೆಗಳನ್ನು ಎಂದಿಗೂ
ಗಣನೆಗೆ/ಗ್ರಹಿಸುವಿಕೆಗೆ ಒಳಪಡಿಸುವುದಿಲ್ಲ.
- ಪರಿಕಲ್ಪನೆ: ಪರಿಕಲ್ಪನೆಗಳ ರಚನೆಯಾಗದೆ ಆಲೋಚನೆಯು
ಅಸಾಧ್ಯ. ಪರಿಕಲ್ಪನೆ ಎಂದರೆ ಒಂದು ವಸ್ತುವಿನ ಮೇಲೆ ಇರುವ ಸಂಪೂರ್ಣ ಜ್ಞಾನ. ಪರಿಕಲ್ಪನೆಗಳ
ವಿಕಾಸ ಮತ್ತು ಬೆಳವಣಿಗೆಯು ವಸ್ತುವಿನೊಂದಿಗೆ ನೇರ ಅನುಭವದಿಂದ ಉಂಟಾಗುತ್ತದೆ.
ಆಲೋಚನೆಯ ವಿಧಗಳು:
- ವಿಮರ್ಶಾತ್ಮಕ
ಆಲೋಚನೆ/ನಿರ್ಣಾಯಕ ಆಲೋಚನೆ:
ವಿಮರ್ಶಾತ್ಮಕ ಆಲೋಚನೆಯು ಎಚ್ಚರಿಕೆಯಿಂದ ವಿಶ್ಲೇಷಿಸಿದ
ಒಂದು ವಿಷಯ ವಸ್ತುವಿನ ಬಗ್ಗೆ ಅರ್ಥೈಸುವುದಕ್ಕೆ ಕೇಂದ್ರೀಕರಿಸುತ್ತದೆ. ಇದು ಒಮ್ಮುಖವಾಗಿರುವ ಆಲೋಚನೆಯಾಗಿದೆ.
ಇದು ಯಾವುದೇ ಒಂದು ವಾಸ್ತವಾಂಶದ ಮೌಲ್ಯ ಮತ್ತು ಸಿಂಧುತ್ವವನ್ನು ಮೌಲ್ಯಮಾಪನ ಮಾಡುತ್ತದೆ. ಇದು ನಿಖರತೆ,
ನಿರಂತರತೆ, ವಸ್ತುನಿಷ್ಠ ವಿಶ್ಲೇಷಣೆಯನ್ನಯ ಒಂಗೊಂಡಿರುತ್ತದೆ.
ವಿಮರ್ಶಾತ್ಮಕ ಆಲೋಚನೆಯನ್ನು
ಪ್ರೋತ್ಸಾಹಿಸುವ ತಂತ್ರಗಳು:
- ಸಾದೃಶಗಳ
ಬಳಕೆ
- ವಿದ್ಯಾರ್ಥಿಗಳ
ನಡುವಿನ ಅಂತರಕ್ರಿಯೆಯನ್ನು ಉತ್ತೇಜಿಸುವುದು.
- ಅನಿರ್ಬಂಧಿತ/
ಮುಕ್ತ ಉತ್ತರ ಬಯಸುವ ಪ್ರಶ್ನೆಗಳನ್ನು ಕೇಳುವುದು.
- ಪ್ರತಿಫಲನ
ಸಮಯಕ್ಕೆ ಅವಕಾಶ ಕಲ್ಪಿಸುವುದು.
- ನೈಜ/
ನಿಜ ಜೀವನದ ಸಮಸ್ಯೆಗಳನ್ನು ಬಳಸುವುದು.
ಮಕ್ಕಳಲ್ಲಿ ವಿಮರ್ಶತ್ಮಕ ಆಲೋಚನೆಯನ್ನು ಬೆಳೆಸುವುದು
- ಯೋಜನಾಧಾರಿತ
ಕಲಿಕೆಯನ್ನು ಪ್ರೋತ್ಸಾಹಿಸುವುದ.
- ಕಲಿಕೆಗೆ
ಸ್ವಾತಂತ್ರ್ಯ ನೀಡುವುದು. ಅಥವಾ ಸ್ವತಂತ್ರವಾಗಿ ಕಲಿಯಲು ಅವಕಾಶ ಕಲ್ಪಿಸುವುದು.
- ಸಂಬಂಧಿತ
ಕಲ್ಫನೆಗಳಿಗೆ ಕಥೆಗಳನ್ನು ಜೋಡಿಸುವುದು.
- ಕಲ್ಪನೆಗಳನ್ನು
ವಿಶ್ಲೇಷಣೆ ಮತ್ತು ಮೌಲ್ಯಮಾಪನ ಮಾಡಲು ಪ್ರಾರಂಭಿಸುವುದು.
- ಸಕ್ರಿಯ
ಕಲಿಕೆಯನ್ನು ಅಳವಡಿಸುವುದು
- ಸೃಜನಶೀಲ
ಆಲೋಚನೆ
ಇದು ವೈವಿದ್ಯತೆಯಿಂದ ಕೂಡಿದ ಆಲೋಚನೆಯಾಗಿದೆ. ಇದು ಯಾವುದೊಂದು
ಹೊಸ ಅಥವಾ ಭಿನ್ನವಾದುದನ್ನು ಉತ್ಪಾದಿಸುತ್ತದೆ. ಇದು ವಿಭಿನ್ನ ಕಲ್ಪನೆಯನ್ನು ಒಳಗೊಂಡಿರುತ್ತದೆ.
ಅದು ಮೊದಲಿಗಿಂತಲೂ ಉತ್ತಮವಾಗಿ ಕೆಲಸ ಮಾಡುತ್ತದೆ. ಸೃಜನಶೀಲ ಆಲೋಚನೆಯು ಹೊಸದಾದ ಹಾಗೂ ವಿಭಿನ್ನ ದೃಷ್ಠಿಕೋನದಿಂದ
ವಸ್ತುವಿಷಯಗಳನ್ನು ಪರಿಗಣಿಸುವ ಮತ್ತು ವಿವಿಧ ಕೋನಗಳಲ್ಲಿ ವೀಕ್ಷಿಸುವ ಕೌಶಲ್ಯಯುಕ್ತ ಆಲೋಚನೆಯಾಗಿದೆ.
ಇದು ಸೃಜನಶೀಲ ಯೋಚಿಸುವ ಪ್ರಕ್ರಿಯೆಯಾಗಿದೆ ಇದರ ಫಲಿತಾಂಶವು
ಅನಿರೀಕ್ಷಿತ ತೀರ್ಮಾನ ಹಾಗೂ ಕೆಲಸಗಳನ್ನು ಹೊಸರೀತಿಯಲ್ಲಿ ಮಾಡುವುದಾಗಿದೆ. ಸೃಜನಶೀಲ ಆಲೋಚನೆಯನ್ನು
ಮೆದುಳು ದಾಳಿಯ ಚಟುವಟಿಕೆಯ ಮೂಲಕ ಬೆಳೆಸಬಹುದು.
ಸೃಜನಶೀಲ ಆಲೋಚನೆಯು ಯಾವುದಾದರೊಂದನ್ನು ಹೊಸ ರೀತಿಯಲ್ಲಿ
ಪರಿಗಣಿಸುವ ಸಾಮರ್ಥ್ಯವಾಗಿದೆ. ಇದು ಸಮಸ್ಯೆಗೆ ಒಂದು ಹೊಸ ವಿಧಾನ, ಇದರಿಂದ ಪರಿಹಾರ ಕಂಡುಕೊಳ್ಳಲು
ಸುಲಭವಾಗುತ್ತದೆ.
ಸೃಜನಶೀಲ
ಆಲೋಚನೆಯನ್ನು ಸುಧಾರಿಸುವ ಕ್ರಮಗಳು
- ನಿಮ್ಮ
ಸ್ವಂತ 3 ʼರೆʼ ಗಳನ್ನು ಸೃಷ್ಠಿಸಿ.
ಉದಾಹರಣೆ:
·
ಇದನ್ನು
ನಾನು ಬದಲಾಯಿಸಿದ ʼರೆʼ ಏನಾಗುತ್ತದೆ?
·
ನಾನು
ಏನನ್ನು ಬದಲಾಯಿಸಬಹುದು ಅಥವಾ ಈ ವಸ್ತುವನ್ನು ಸುಧಾರಿಸಬಹುದು, ನಾನು ಇದನ್ನು 10 ವರ್ಷಗಳ ಕಾಲ ಬಳಸಲು
ಇಷ್ಟಪಟ್ಟʼರೆʼ?
·
ಉದನ್ನು
ಸುಧಾರಿಸಲು 1 ಮಿಲಿಯಾನ್ ಡಾಲರ್ ಹೂಡಿಕೆ ನನ್ನಲ್ಲಿದ್ದʼರೆʼ? ನಾನು ಏನು ಮಾಡಬಹುದಾಗಿದೆ.
- ಕನಸು
ಕಾಣುವುದನ್ನು ಅಭ್ಯಾಸಮಾಡುವುದು.
- ಸಂಘಟನೆಮುಕ್ತ
ಆಲೋಚನೆ ಮಾಡಲು ಸಮಯ ಹೊದಿಸುವುದು.
- ಕಲ್ಪನೆಯನ್ನುಕಾರ್ಯಗತಗೊಳಿಸಿ
ಮೇಲಕ್ಕೆತ್ತುವುದನ್ನು ಕಲಿಯುವುದು.
- ಬೇರೆಯವರ
ಕಲ್ಪನೆಗಳನ್ನು ಗೌರವಿಸುವುದು.
- ಒಮುಖ ಆಲೋಚನೆ
ಒಂದು
ಸಮಸ್ಯೆಗೆ ಒಂದು ಅತ್ಯುತ್ತಮ ಪರಿಹಾರ ಕಂಡುಹಿಡಿಯುವ ಪ್ರಕ್ರಿಯೆಯೇ ಒಮ್ಮುಖ ಆಲೋಚನೆಯಾಗಿದೆ. ಈ ವಿಧದ
ಆಲೋಚನೆಯು ಒಂದು ಸಾಮಾನ್ಯ ಅಂಶದ ಸುತ್ತಾ ಮಾಹಿತಿಯ ತಿಳುವಳಿಕೆ ಪ್ರಕ್ರಿಯೆಯಾಗಿದೆ. ಅನೇಕ ಯೋಜನೆಗಳನ್ನು
ಒಂದೆಡೆ ತಂದು, ಒಂದು ಸಾಮಾನ್ಯ ತೀರ್ಮಾನಕ್ಕೆ ಎಡೆಮಾಡಿಕೊಡುತ್ತದೆ.
ಒಮ್ಮಖ ಆಲೋಚನೆ ಎಂಬ ಪದವನ್ನು ಪೌಲ್ ಗಿಲಪೋರ್ಡ್
ಎಂಬ ಮನೋವಿಜ್ಞಾನಿ ಪರಿಚಯಿಸಿದನು. ಇದು ವ್ಯವಿಧ್ಯಮಯ ಆಲೋಚನೆಗೆ ವಿರುದ್ಧವಾದುದು. ಸಾಮಾನ್ಯವಾಗಿ
ಒಂದು ಅತ್ಯುತ್ತಮ ಪ್ರಶ್ನೆಗೆ ಸರಿಯಾದ ಉತ್ತರವನ್ನು ಕೊಡುವ ಸಾಮರ್ಥ್ಯವಾಗಿದೆ. ಇದಕ್ಕೆ ಗಮನಾರ್ಹವಾದ
ಸೃಜನಶೀಲತೆಯ ಅಗತ್ಯವಿಲ್ಲ.
ಉದಾಹರಣೆ: ಶಾಲೆಯಲ್ಲಿ ಹೆಚ್ಚಿನ
ಕಾರ್ಯಗಳು ಮತ್ತು ಬುದ್ದಿಶಕ್ತಿಯ ಆದರ್ಶೀಕೃತ ಬಹು ಆಯ್ಕೆ ಪರೀಕ್ಷೆ.
- ವೈವಿದ್ಯಮಯ ಆಲೋಚನೆ
ಈ ರೀತಿಯ ಆಲೋಚನೆಯು ಒಂದು ನಿರ್ದಿಷ್ಠ ಅಂಶದೊಂದಿಗೆ ಪ್ರಾರಂಭಿಸುತ್ತದೆ.
ಹಾಗೂ ವ್ಯವಿದ್ಯಮಯ ದೃಷ್ಠಿಕೊನದೆಡೆಗೆ ಸಾಗುತ್ತದೆ. ವೈವಿದ್ಯಮಯ ದೃಷ್ಠಿಕೊನದೆಡೆ ಸಾಗುತ್ತದೆ. ವೈವಿದ್ಯಮಯ
ಆಲೋಚನೆಯ ಗುರಿ ಎಂದರೆ, ಒಂದು ವಿಷಯದ ಮೇಲಿನ ಕಡಿಮೆ ಸಮಯದಲ್ಲಿ ವಿವಿಧ ಕಲ್ಪನೆಗಳನ್ನು ಉತ್ಪಾದಿಸುವುದಾಗಿದೆ.
ಇದು ಸ್ವಾಭಾವಿಕವಾಗಿ, ಸಹಜವಾಗಿ, ಸರಳವಾಗಿ ಹರಿಯುವ
ರೀತಿ ಅಂದರೆ ಕಲ್ಪನೆಗಳು ಯಾದೃಚ್ಛಿಕವಾಗಿ ಗೊತ್ತುಗುರಿಯಿಲ್ಲದೆ, ಅಸಂಘಟಿತ ರೀತಿಯಲ್ಲಿ ಬುರವಂತಹ
ಆಲೋಚನೆಯಾಗಿದೆ.
ವಿದ್ಯಾರ್ಥಿಗಳಲ್ಲಿ
ಆಲೋಚನಾ ಕೌಶಲ್ಯವನ್ನು ಬೆಳೆಸುವ ಕ್ರಮ
- ಮೂಲಭೂತ,
ತಳಮಟ್ಟದ ನಿಯಮಗಳನ್ನು ಮುಂಚಿತವಾಗಿ ರೂಪಿಸುವುದು.
- ಸೂಕ್ತ
ಯೋಜನಾ ಬದ್ಧ ಚಟುವಟಿಕೆಗಳನ್ನು ಒದಗಿಸುವುದರಿಂದ
- ಪ್ರತಿಯೊಬ್ಬ
ವಿದ್ಯಾರ್ಥಿಯನ್ನು ಗೌರವಯುತವಾಗಿ ನಡೆಸಿಕೊಳ್ಳುವುದರಿಂದ
- ಹೆದರಿಕೆಯಿಲ್ಲದ
ಚಟುವಟಿಕೆಗಳನ್ನು ಒದಗಿಸುವುದರ ಮೂಲಕ
- ಕಟ್ಟುನಿಟ್ಟಾಗಿ
ಇರದೆ ಹೊಂದಿಕೊಳ್ಳುವ ಮನೊಭಾವದಿಂದಿರುವುದರಿಂದ
- ವೈಯಕ್ತಿಕ
ಭಿನ್ನತೆಯನ್ನು ಒಪ್ಪಿಕೊಂಡು ಕಲಿಸುವುದರಿಂದ
- ಧನಾತ್ಮಕ
ಮನೋಭಾವವನ್ನು ತೋರಿಸುವುದರ ಮೂಲಕ
- ಪ್ರತಿಯೊಂದು
ಪ್ರತಿಕ್ರಿಯೆಯನ್ನು ಗುರ್ತಿಸಿ ಸ್ವಾಗತಿಸುವುದರಿಂದ
- ತರಗತಿಯಲ್ಲಿ
ವಿದ್ಯಾರ್ಥಿಗಳು ಸಕ್ರಿಯವಾಗಿ ಚಟುವಟಿಕೆಗಳಲ್ಲಿ ಭಾಗವಹಿಸುವುದಕ್ಕೆ ಅನುವುಮಾಡಿಕೊಡುವುದರ ಮೂಲಕ
- ವಿವಿಧ
ರೀತಿಯ ಬೋಧನಾ ವಿಧಾನಗಳು ಮತ್ತು ತಂತ್ರಗಳನ್ನು ಬಳಸಿಕೊಂಡು ಬೊಧಿಸುವುದರಿಂದ ಮಕ್ಕಳಲ್ಲಿ ಆಲೋಚನಾ
ಕೌಶಲ್ಯವನ್ನು ಬೆಳೆಸಬಹುದಾಗಿದೆ.
Comments
Post a Comment