ಹದಿಹರೆಯದವರು
ಹದಿಹರೆಯದವರು
ತಾರುಣ್ಯಾವಸ್ಥೆಯ ಹಂತವನ್ನು ‘Adolescence’ ಎಂದು ಕರೆಯುತ್ತಾರೆ. ಈ ಪದವು ಲ್ಯಾಟಿನ್ ಭಾಷೆಯ (Adolescere) ಪದದಿಂದ ಬಂದಿದೆ. ಎಂದರೆ ಪ್ರೌಢತೆಯ ಹಂತಕ್ಕೆ ಬೆಳೆಯುವುದು ಎಂದರ್ಥ. ಈ ಹಂತವು ಬಾಲಕರ ಅಥವಾ ಬಾಲಕಿಯರು ವಯಸ್ಕರಾಗುವ ಮಧ್ಯದ ಸ್ಥಿತ್ಯಂತರದ ಹಂತ. ಈ ಹಂತದಲ್ಲಿ ದೇಹದ ಅಂಗಾಂಗಳು ಗರಿಷ್ಟ ಮಟ್ಟದ ಬೆಳೆವಣಿಗೆಯ ಹಂತವನ್ನು ಮುಟ್ಟುವುದರಿಂದ ಈ ಹಂತಕ್ಕೆ “ಬೆಳೆವಣಿಗೆಯ ಬುಗ್ಗೆ” ಎಂದು ಕರೆಯುತ್ತಾರೆ.
ಸ್ಟಾನ್ ಲೀ ಹಾಲ್ ರವರು “ತಾರುಣ್ಯಾವಸ್ಥೆಯ ಹಂತವನ್ನು
ಒತ್ತಡ ಮತ್ತು ದಣಿವು ಚಂಡಮಾರುತ ಮತ್ತು ಸಂಘರ್ಷದ ಹಂತ “ಎಂದಿದ್ದಾರೆ. ತಾರುಣ್ಯಾವಸ್ಥೆಯಲ್ಲಿರುವವರು
ತೀವ್ರ ದೈಹಿಕ ಮತ್ತು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಅವರ ಜೀವನದಲ್ಲಿ ಒಂದು ಚಂಡಮಾರುತ ಎದ್ದಂತಹ
ರೀತಿಯಲ್ಲಿ ವರ್ತಿಸುತ್ತಾರೆ. ಮಾನಸಿಕ ಪ್ರಕ್ಷುಬ್ದತೆಯಿಂದ, ಹಿರಿಯರೊಂದಿಗೆ ಸಂಘರ್ಷಕ್ಕೆ ಇಳಿಯುತ್ತಾರೆ.
ಹದಿಹರೆಯದವರ/
ತಾರುಣ್ಯಾವಸ್ಥೆಯ ಗುಣಲಕ್ಷಣಗಳು
- ತಾರುಣ್ಯಾವಸ್ಥೆಯು
ಕ್ಷಿಪ್ರ ಕ್ರಾಂತಿಕಾರಿ ಬದಲಾವಣೆಯ ಅವಧಿಯಾಗಿದೆ.
- ಇದು
ಹೊಸತನ, ಹೊಸ ಕಲಿಕೆಯ ಅವಧಿಯಾಗಿದೆ.
- ತಾರುಣ್ಯಾವಸ್ಥೆಯು
ಆತಂಕ ಮತ್ತು ಚಿಂತೆಗಳ ಅವಧಿಯಾಗಿದೆ.
- ಇದು
ಚಂಡಮಾರುತ ಮತ್ತು ಸಂಘರ್ಷದ ಹಂತವಾಗಿದೆ.
- ತಾರುಣ್ಯಾವಸ್ಥೆಯಲ್ಲಿ
ಹದಿಹರೆಯದವರು ತಮ್ಮನ್ನು ತಾವು ಕೀಳಾಗಿ ಭಾವಿಸುವ ಹಂತವಾಗಿದೆ.
- ʼಸ್ವಯಂ
ಪ್ರಜ್ಞೆʼ ಜಾಗೃತವಾಗುವ ಕಾರಣದಿಂದ ಅಂದ, ಅಲಂಕಾರಗಳ ಕಡೆಗೆ ಹೆಚ್ಚಿನ ಗಮನ ಕೊಡುತ್ತಾರೆ.
- ಕಲ್ಪಿತ
ಸಮಸ್ಯೆಗಳ ಕಾರಣದಿಂದ ಸುಸ್ತು, ನಿಶ್ಯಕ್ತಿ, ಬಳಲುವಿಕೆಯಿಂದ ತೊಂದರೆ ಅನುಭವಿಸುತ್ತಾರೆ.
- ಹೆಚ್ಚಿನ
ಸ್ವಾತಂತ್ರ್ಯ ಮತ್ತು ಸ್ವಾವಲಂಬನೆಗಾಗಿ ಹಾತೊರೆಯುತ್ತಾರೆ.
- ತಾರುಣ್ಯಾವಸತ್ಥೆಯು
ಸ್ವಯಂ ಪ್ರತಿಪಾದನೆ ಹಾಗೂ ಧೈರ್ಯ/ಶೂರತನದ ಹಂತವಾಗಿದೆ.
- ಆರ್ಥಿಕ
ಸ್ವಾತಂತ್ರ್ಯ ಹೊಂದಬೇಕೆಂಬ ಆಕಾಂಷೆ ಹೊಂದಿರುತ್ತಾರೆ.
- ಹೊಸ
ಜೀವಿಯ ಹುಟ್ಟಿಗೆ ಕಾರಣವಾಗು ಹಂತವಾಗಿದೆ.
- ಈ
ಹಂತವು ಒಂದು ರೀತಿಯಲ್ಲಿ ದೊಡ್ಡವರಿಗೆ ದೊಡ್ಡವರಲ್ಲದ, ಚಿಕ್ಕವರಿಗೆ ಚಿಕ್ಕವರಲ್ಲದ ಹಂತವಾಗಿದೆ,
ಇದರಿಂದ ತಾರುಣ್ಯದಲ್ಲಿರುವವರು ತಮ್ಮನ್ನು ಯಾರೊಂದಿಗೆ ಗುರ್ತಿಸಿಕೊಳ್ಳಬೇಕು ಎಂದು ತಿಳಿಯದೆ
ಗೊಂದಲಕ್ಕೆ ಒಳಗಾಗುತ್ತಾರೆ.
- ಈ
ಹಂತದಲ್ಲಿ ವಾಸ್ತವಿಕವಾಗಿ ಚಿಂತಿಸದೆ ಭ್ರಮೆಗಳನ್ನು ಹೊಂದಿರುತ್ತಾರೆ.
- ಹಗಲು
ಗನಸು ಕಾಣುವಾ ಪ್ರವೃತ್ತಿ ಹೊಂದಿರುತ್ತಾರೆ.
- ಆದರ್ಶವಾದಿಗಳಂತೆ
ವರ್ತಿಸುತ್ತಾರೆ. ಸಮಾಜದಲ್ಲಿ ಕಾಣುವ ಶೊಷಣೆ, ಅನ್ಯಾಯದ ವಿರುದ್ಧ ದ್ವನಿ ಎತ್ತುತ್ತಾರೆ.
ತಾರುಣ್ಯದ
ಬೌದ್ಧಿಕ, ದೈಹಿಕ, ಸಾಮಾಜಿಕ, ಸಂವೇಗಾತ್ಮಕ ಮತ್ತು ನೈತಿಕ ವಿಕಾಸದ ಕಲಿಕಾ ಕ್ರಮಗಳು
ಬೌದ್ಧಿಕ
ವಿಕಾಸ:
ವ್ಯಕ್ತಿಯ
ದೈಹಿಕ ವಿಕಾಸದ ಜೊತೆಗೆ ಬೌದ್ಧಿಕ ವಿಕಾಸವು ಹಿಚ್ಚಾಗುತ್ತಾ ಸಾಗುತ್ತದೆ. ದೈಹಿಕ ವಯಸ್ಸು ಹೆಚ್ಚಾದಂತೆ
ಮಾನಸಿಕ ವಿಕಾಸವೂ ಹೆಚ್ಚಾಗುತ್ತದೆ. ಈ ಹಂತದಲ್ಲಿ ಕಂಡು ಬರುವ ಕೆಲವು ಪ್ರಮುಖ ಜ್ಞಾನಾತ್ಮಕ ಬದಲಾವಣೆಗಳೆಂದರೆ,
- ನೈಜ ಸಂಗತಿಗಳನ್ನು ಸಾಮಾನ್ಯೀಕರಣಗೊಳಿಸುವ
ಸಾಮರ್ಥ್ಯ:
ಮಕ್ಕಳು ಸಾಮಾನ್ಯವಾಗಿ ಸರಳ ವಸ್ತುಗಳಿಗೆ ಸಂಬಂದಿಸಿದಂತೆ ಮಾತ್ರಾ ಸಾಮಾನ್ಯೀಕರಣಗೊಳಿಸಬಲ್ಲರು.
ಬಾಲ್ಯಾವಸ್ಥೆಯಲ್ಲಿ ಬೌದ್ಧಿಕ ವಿಕಾಸ ಕೇವಲ ಪ್ರತ್ಯಕ್ಷಾನುಭವದ ಮಟ್ಟದಲ್ಲಿರುತ್ತದೆ. ಆದರೆ
ತಾರುಣ್ಯಾವಸ್ಥೆಯಲ್ಲಿ ಸಾಮಾನ್ಯೀಕರಣ ಪರಿಕಲ್ಪನಾ ಮಟ್ಟದಲ್ಲಿರುತ್ತದೆ. ಹದಿಹರೆಯದವರು ಸಂಕೀರ್ಣ
ಪರಿಕಲ್ಪನೆಗಳನ್ನು ಸಹ ಸಾಮಾನ್ಯೀಕರಣಗೊಳಿಸುವ ಸಾಮರ್ಥ್ಯ ಹೊಂದಿರುತ್ತಾರೆ.
- ಗ್ರಹಿಕೆಯ ಸಾಮರ್ಥ್ಯದಲ್ಲಿ ಹೆಚ್ಚಳ: ಈ ಹಂತದ ಮಕ್ಕಳು ಕ್ಲಿಷ್ಟವಾದ ಮತ್ತು
ಸಂಕೀರ್ಣವಾದ ಸಮಸ್ಯೆಗಳಲ್ಲಿ ಅಗತ್ಯವಾದ ಸಂಬಂಧವನ್ನು ಗುರ್ತಿಸಿ, ಸಮಸ್ಯೆಗಳನ್ನು ಅರ್ಥಮಾಡಿಕೊಂಡು,
ಹಲವಾರು ರೀತಿಯಲ್ಲಿ ಪರಿಹಾರಗಳನ್ನು ಆಲೋಚಿಸಿ ಸಮಸ್ಯೆಗಳನ್ನು ಬಿಡಿಸುವ ಸಾಮರ್ಥ್ಯವನ್ನು ಗಳಿಸಿಕೊಳ್ಳುತ್ತಾರೆ.
- ಹದಿಹರೆಯದ
ಮಕ್ಕಳಲ್ಲಿ ಅಮೂರ್ತ ಆಲೋಚನಾ ಸಾಮರ್ಥ್ಯ ಬೆಳೆಯುತ್ತದೆ. ಸಂಜ್ಞೆಗಳ ಮೂಲಕ ವ್ಯವಹರಿಸುವ ಸಾಮರ್ಥ್ಯ
ಗಳಿಸಿಕೊಳ್ಳುತ್ತಾರೆ. ಈ ಹಂತದ ಕೊನೆಯ ಹೊತ್ತಿಗೆ ಮಾನಸಿಕ ಪರಿಪಕ್ವತೆಯನ್ನು ಕಾಣಬಹುದು.
- ಪದಸಂಪತ್ತಿನೊಂದಿಗೆ
ಈ ಹಂತದ ತರುಣ-ತರುಣಿಯರಲ್ಲಿ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ. ಈ ಹಂತದ ಕಲಿಕೆ ಅರ್ಥಪೂರ್ಣವಾಗಿರುವುದರಿಂದ
ದೀರ್ಘಕಾಲದ ಸ್ಮೃತಿ ಹೆಚ್ಚಾಗುತ್ತದೆ. ಕಲ್ಪನಾ ಸಾಮರ್ಥ್ಯ ಮತ್ತು ಸೃಜನಶೀಲ ಸಾಮರ್ಥ್ಯಗಳು ವಿಕಾಸವಾಗುತ್ತವೆ.
ಪ್ರೌಢಶಾಲಾ ಹಂತದಲ್ಲಿರುವ ವಿದ್ಯಾರ್ಥಿಗಳು ವಿಜ್ಞಾನ ಮತ್ತು ಕಲಾ ವಸ್ತುಪ್ರದರ್ಶನಗಳಲ್ಲಿ ತಮ್ಮ
ಸೃಜನಶೀಲ ಮತ್ತು ಕಲಾ ಸಾಮರ್ಥ್ಯಗಳನ್ನು ಅಭಿವ್ಯಕ್ತಪಡಿಸುತ್ತಾರೆ.
- ಈ
ಹಂತದ ತರುಣ-ತರುಣಿಯರು ತಮ್ಮ ಸಮಸ್ಯೆಗಳ ಬಗ್ಗೆ ಮಾತ್ರವಲ್ಲದೇ ರಾಷ್ಟೀಯ ಹಾಗೂ ಅಂತರ ರಾಷ್ಟೀಯ
ಸಮಸ್ಯೆಗಳ ಬಗ್ಗೆಯೂ ಚರ್ಚಿಸಬಲ್ಲರು. ತಮ್ಮ ಸಮಸ್ಯೆಗಳನ್ನು ವಿಶ್ಲೇಷಿಸಿ ಅವುಗಳನ್ನು ಬಿಡಿಸಿಕೊಳ್ಳುವ
ಸಾಮರ್ಥ್ಯ ವೃದ್ದಿಯಾಗುತ್ತದೆ.
- ಇತರರೊಂದಿಗೆ
ಸಮರ್ಪಕವಾಗಿ ಸಂಪರ್ಕಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ. ಮನೆಯಲ್ಲಿ ಹಿರಿಯರೊಡನೆ, ಶಾಲೆಯಲ್ಲಿ
ಶಿಕ್ಷಕರೊಡನೆ ಮತ್ತೆ ಸಮಾಜದಲ್ಲಿ ಇತರರೊಡನೆ ಸಂದರ್ಭೂಚಿತವಾಗಿ ಮಾತನಾಡುವ ಕಲೆಯನ್ನು ರೂಢಿಸಿಕೊಳ್ಳುತ್ತಾರೆ.
ಸ್ನೇಹಿತರೊಡನೆ ಚರ್ಚಿಸಲು ಬಯಸುವುದು ಈ ಹಂತದಲ್ಲಿ ಸಹಜ. ಸಮಾನ್ಯವಾಗಿ ಈ ಹಂತದ ತರುಣರು ರಸ್ತೆಗಳಲ್ಲಿ,
ಕಾಫಿ ಬಾರ್ ಇತರೆಡೆಗಳಲ್ಲಿ ತಮಗೆ ಇಷ್ಟವಾದ ವಿಷಯಗಳ ಬಗ್ಗೆ ಗಂಟೆಗಟ್ಟಲೆ ಚರ್ಚಿಸುವುದನ್ನು
ಕಾಣಬಹುದು.
- ತರುಣ-ತರುಣಿಯರು
ಸಮಾಜದಲ್ಲಿ ತಮ್ಮ ಸ್ಥಾನವನ್ನು ಗುರ್ತಿಸಿಕೊಳ್ಳುತ್ತಾರೆ. ಮನೆಯಲ್ಲಿ ಮತ್ತು ಹೊರಗಿನ ಪ್ರಪಂಚದಲ್ಲಿ
ತಮ್ಮ ಪಾತ್ರವನ್ನು ಅರ್ಥಮಾಡಿಕೊಳ್ಳುತ್ತಾರೆ.
- ನಿರ್ಧಾರ ಕೈಗೊಳ್ಳುವ ಸಾಮರ್ಥ್ಯ: ತಮ್ಮ ದಿನ ನಿತ್ಯದ ಜೀವನದಲ್ಲಿ ಸಮರ್ಪಕವಾದ
ಹೊಂದಾಣಿಕೆ ಮಾಡಿಕೊಳ್ಳಲು ಬೇಕಾದ ಹಲವಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತಮ್ಮ ಅಭಿಪ್ರಾಯಗಳ
ಬಗ್ಗೆ ಆತ್ಮ ವಿಶ್ವಾಸ ಹೊಂದಿರುತ್ತಾರೆ. ಸ್ವತಂತ್ರ ಆಲೋಚನಾ ಸಾಮರ್ಥ್ಯ ಬೆಳೆಯುತ್ತದೆ. ಆದರ್ಶ
ಮತ್ತು ವಾಸ್ತವಿಕತೆಗಳ ವ್ಯತ್ಯಾಸ ತಿಳಿಯಬಲ್ಲರು. ಹದಿಹರೆಯದವರು ತಮ್ಮ ಸಾಮರ್ಥ್ಯಗಳು ಮತ್ತು
ಮಿತಿಗಳನ್ನೂ ಸಹಾ ಅರ್ಥ ಮಾಡಿಕೊಳ್ಳಬಲ್ಲರು.
- ನೈತಿಕ ಪರಿಕಲ್ಪನೆಗಳ ಬೆಳವಣಿಗೆ: ಬಾಲ್ಯದಲ್ಲಿ ಹಿರಿಯರು ಹೇರುವ ನಿಯಮಗಳನ್ನು ಮಗು ಯಾಂತ್ರಿಕವಾಗಿ
ಒಪ್ಪಿಕೊಳ್ಳುತ್ತಾನೆ. ಆದರೆ ತಾರುಣ್ಯದಲ್ಲಿ ನೈತಿಕತೆಯ ಪರಿಕಲ್ಪನೆ ಬದಲಾಗುತ್ತದೆ. ಹಿರಿಯರು
ಹೇರುವ ನೀತಿ ನಿಯಮಗಳನ್ನು ಪರಿಕ್ಷಿಸುತ್ತಾನೆ ಮತ್ತು ಪ್ರಶ್ನಿಸುತ್ತಾನೆ. ಸನ್ನಿವೇಶಗಳನ್ನು
ಗಮನದಲ್ಲಿಟ್ಟುಕೊಂಡು ಸರಿತಪ್ಪುಗಳನ್ನು ನಿರ್ಧರಿಸಬೇಕೆಂಬ ಅರಿವು ಮೂಡುತ್ತದೆ.
- ವೈಜ್ಞಾನಿಕ
ಚಿಂತನೆ ಮತ್ತು ವೈಜ್ಞಾನಿಕ ಮನೋಭಾವಗಳ ಬೆಳವಣಿಗೆಯಾಗುತ್ತದೆ.
ದೈಹಿಕ
ವಿಕಾಸ
ಈ ಹಂತದ
ವಿಕಾಸದಲ್ಲಿ ಹಲವಾರು ಶಾರೀರಿಕ ಬದಲಾವಣೆಗಳನ್ನು ಕಾಣುತ್ತೇವೆ. ಈ ಬದಲಾವಣೆಗಳು ಅವರ ವರ್ತನೆಯ ಮೇಲೆ
ಹೆಚ್ಚಿನ ಪ್ರಭಾವ ಬೀರುತ್ತವೆ. ದೈಹಿಕ ವಿಕಾಸದಲ್ಲಿ ಕಂಡುಬರುವ ಪ್ರಮುಖ ಬದಲಾವಣೆಗಳೆಂದರೆ-
- ಎತ್ತರ ಮತ್ತು ತೂಕಗಳಲ್ಲಾಗುವ
ಬದಲಾವಣೆ: ಈ
ಹಂತದ ಬೆಳವಣಿಗೆಯನ್ನು ಬೆಳವಣಿಗೆಯ ಬುಗ್ಗೆ ಎಂತಲೂ ಕರೆಯುವರು. ಅವರ ಎತ್ತರದಲ್ಲಿ ಹೆಚ್ಚಿನ
ಬೆಳವಣಿಗೆ ಕಂಡು ಬರುತ್ತದೆ. ಗರಿಷ್ಟ ಮಟ್ಟದ ಬೆಳವಣಿಗೆಯ ವಯಸ್ಸು ಒಬ್ಬರಿಂದ ಒಬ್ಬರಿಗೆ ಭಿನ್ನವಾಗಿರುತ್ತದೆ.
ಸಾಮಾನ್ಯವಾಗಿ ಹುಡುಗಿಯರು 17-18 ನೇ ವಯಸ್ಸಿನಲ್ಲಿ ಹುಡುಗರು ತಮ್ಮ 18-19 ನೇ ವಯಸ್ಸಿನಲ್ಲಿ
ಎತ್ತರದ ಗರಿಷ್ಟ ಮಿತಿಯನ್ನು ತಲುಪುತ್ತಾರೆ. ಎತ್ತರಕ್ಕೆ ಅನುಗುಣವಾಗಿ ತೂಕದಲ್ಲಿ ಬದಲಾವಣೆ
ಕಾಣಬಹುದು. ಎತ್ತರ ಮತ್ತು ತೂಕಗಳಲ್ಲಿ ಲಿಂಗ ವ್ಯತ್ಯಾಸ ಕಂಡು ಬರುತ್ತದೆ. ಪೂರ್ವ ಬಾಲ್ಯದಲ್ಲಿ
ಹುಡುಗರ ಎತ್ತರ ಮತ್ತು ತೂಕ ಅದೇ ವಯಸ್ಸಿನ ಹುಡುಗಿಯರಿಗಿಂತ ಹೆಚ್ಚಾಗಿರುತ್ತದೆ. ಆದರೆ 13 ನೇ
ವಯಸ್ಸಿನಲ್ಲಿ ಹುಡುಗಿಯರು ಹುಡುಗರಿಗಿಂತ ಹೆಚ್ಚಿನ ಎತ್ತರ ಮತ್ತು ತೂಕ ಪಡೆಯುತ್ತಾರೆ. ತಾರುಣ್ಯಾವಸ್ಥೆಯ
ಕೊನೆಗೆ ಮತ್ತೆ ಹುಡುಗರು ಹುಡುಗಿಯರಿಗಿಂತ ಹೆಚ್ಚು ಎತ್ತರ ಮತ್ತು ತೂಕ ಹೊಂದಿರುತ್ತಾರೆ.
- ದೇಹದ ಅಂಗಂಗಗಳ ಪ್ರಮಾಣದಲ್ಲಿ
ಬದಲಾವಣೆಗಳು:
ಎತ್ತರ ಮತ್ತು ತೂಕಗಳ ಬದಲಾವಣೆ ಜೊತೆಗೆ ದೇಹದ ವಿವಿಧ ಅಂಗಗಳ ಪ್ರಮಾಣಗಳಲ್ಲಿಯೂ ಬದಲಾವಣೆ ಕಾಣುತ್ತೇವೆ.
ದೇಹದ ವಿವಿಧ ಅಂಗಗಳು ತಮ್ಮದೇ ಆದ ವೇಗಗಳಲ್ಲಿ ಬೆಳೆಯುತ್ತವೆ ಮತ್ತು ವಿಭಿನ್ನ ಸಮಯಗಳಲ್ಲಿ ಗರಿಷ್ಟ
ವಿಕಾಸವನ್ನು ಪಡೆಯುತ್ತವೆ. ಹೆಣ್ಣು ಮಕ್ಕಳಲ್ಲಿ ಪೆಲ್ವಿಸ್ ಮೂಳೆ ಅಗಲವಾಗುತ್ತದೆ ಮತ್ತು ಮಣಿಕಟ್ಟು
ದುಂಡಾಗುತ್ತದೆ. ಕೈಕಾಲುಗಳು ಉದ್ದನಾಗಿಬೆಳೆಯುತ್ತವೆ. ಹುಡುಗರ ಸ್ನಾಯುಗಳು ದೊಡ್ಡದಾಗಿ ಬೆಳೆಯುತ್ತವೆ.
ಆದ್ಧರಿಂದ ಅವರು ಹುಡುಗಿಯರಿಗಿಂತ ಹೆಚ್ಚು ಬಲ ಪಡೆಯುತ್ತಾರೆ. ಹದಿಹರೆಯದವರು ಅಂತಿಮವಾಗಿ ಪಡೆಯುವ
ಮೈಕಟ್ಟು ಲೈಂಗಿಕ ಪಕ್ವತೆ ಆಗುವ ವಯಸ್ಸನ್ನು ಆಧರಿಸುತ್ತದೆ. ಬೇಗನೆ ದೈಹಿಕ ಪರಿಪಕ್ವತೆ ಹೊಂದುವರು
ಗಿಡ್ಡನಾದ ದುಂಡನೆಯ ಮೈಕಟ್ಟನ್ನು ಮತ್ತು ತಡವಾಗಿ ಪರಿಪಕ್ವತೆ ಹೊಂದುವರು. ತೆಳ್ಳನೆಯ ಉದ್ದನೆಯ
ಮೈಕಟ್ಟನ್ನು ಹೊಂದುತ್ತಾರೆ. ಬೇಗನೆ ಪಕ್ವವಾಗುವ ಹುಡುಗರು ಹೆಣ್ಣಿನಂತೆ ಮೃದು ಸ್ವಭಾವವನ್ನು
ಮತ್ತು ತಡವಾಗಿ ಪಕ್ವವಾಗುವ ಹುಡುಗಿಯರು ಹುಡುಗರಂತೆ ಹೆಚ್ಚು ಗಡುಸಾಗಿರುತ್ತಾರೆ.
- ಧ್ವನಿ ಬದಲಾವಣೆ: ತಾರುಣ್ಯಾವಸ್ಥೆಯ ವಿಕಾಸದಲ್ಲಿ ಗುರ್ತಿಸಬಹುದಾದಂತಹ
ಒಂದು ಪ್ರಮುಖ ಬದಲಾವಣೆ ಎಂದರೆ, ಹುಡುಗರ ಧ್ವನಿಯ ಬದಲಾವಣೆ, ಇದು ನಿರ್ದಿಷ್ಟ ವಯಸ್ಸಿನಲ್ಲಿ
ಕಂಡುಬರುವುದಿಲ್ಲ ಆದರೆ ಪರಿಪದ್ವತೆಯ ಬದಲಾವಣೆಗಳೊಂದಿಗೆ ಸಂಬಂಧಿಸಿರುತ್ತದೆ. ಈ ಹಂತದಲ್ಲಿ
ಹುಡುಗರ ಧ್ವನಿ ಹೆಚ್ಚು ಗಡುಸಾಗುತ್ತದೆ ಮತ್ತು ಧ್ವನಿಯಲ್ಲಿ ಒಡಕು ಕಂಡು ಬರುತ್ತದೆ. ಹುಡುಗಿಯರ
ಧ್ವನಿ ಹೆಚ್ಚು ಮಧುರವಾಗುತ್ತದೆ. ಧ್ವನಿಯ ಬದಲಾವಣೆ ಹದಿಯರೆಯದವರ ವರ್ತನೆಯ ಮೇಲೆ ಪ್ರಭಾವ ಬೇರುತ್ತದೆ.
- ಪ್ರಧಾನ ಹಾಗೂ ಅನುಷಂಗಿಕ
ಲೈಂಗಿಕ ಲಕ್ಷಣಗಳ ಬೆಳವಣಿಗೆ:
ಪ್ರಧಾನ ಜನನೇಂದ್ರಿಯಗಳು ಬೆಳವಣಿಗೆಯಾಗುವುದರೊಂದಿಗೆ ತಮ್ಮ ಕ್ರಿಯಾಶಕ್ತಿಯ ಪರಿಪೂರ್ಣ ಸ್ಥಿತಿಯನ್ನು
ತಲುಪುತ್ತವೆ. ತರುಣಿಯರಲ್ಲಿ ಪ್ರಧಾನ ಜನನೇಂದ್ರಿಯವಾದ ಅಂಡಾಶಯಗಳು ಈ ಹಂತದಲ್ಲಿ ಅಂಡಾಣುವನ್ನು
ಉತ್ಪತ್ತಿ ಮಾಡುವ ಸಾಮರ್ಥ್ಯವನ್ನು ಪಡೆಯುತ್ತವೆ. ಅದೇ ರೀತಿ ತರುಣರಲ್ಲಿ ಪ್ರಧಾನ ಜನನೇಂದ್ರಿಯವಾದ
ವೃಷಣಗಳು ಪರಿಪಕ್ವತೆಯನ್ನು ಪಡೆಯುತ್ತವೆ ಮತ್ತು ವೀರ್ಯಾಣುಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು
ಪಡೆಯುತ್ತವೆ. ತರುಣರಲ್ಲಿ ಕಂಡುಬರುವ ಅನುಷಂಗಿಕ ಲೈಂಗಿಕ ಲಕ್ಷಣಗಳೆಂದರೆ ಗಡ್ಡ, ಮೀಸೆಗಳ ಬೆಳವಣಿಗೆ,
ರೋಮಗಳ ಬೆಳವಣಿಗೆ ಮತ್ತು ಧ್ವನಿಯ ಬದಲಾವಣೆಗಳು. ತರುಣಿಯರಲ್ಲಿ ಸ್ತನ್ಯ ಗ್ರಂಥಿಗಳು ಕ್ರಿಯಾಶೀಲವಾಗುವುದರಿಂದ
ಸ್ತನಗಳ ಬೆಳವಣಿಗೆ ಪ್ರಾರಂಭವಾಗುತ್ತದೆ. ಪೆಲ್ವಿಸ್ ಮೂಳೆ ಅಗಲವಾಗುವುದು, ಗುಪ್ತರೋಮಗಳ ಬೆಳವಣಿಗೆ
ಮತ್ತು ನಡಿಗೆಯಲ್ಲಿ ಗಮನಾರ್ಹ ಬದಲಾವಣೆಗಳು ಕಂಡುಬರುತ್ತವೆ.
- ಶಾರೀರಿಕ ಬದಲಾವಣೆಗಳು:
ಈ ಹಂತದ ಕೊನೆಯ
ಹೊತ್ತಿಗೆ ದೇಹದ ಬೆಳವಣಿಗೆಯಲ್ಲಿ ಒಳ ಅಂಗಾಂಗಗಳ ವ್ಯೂಹಗಳು ಪರಿಪೂರ್ಣತೆಯನ್ನು ಪಡೆಯುತ್ತವೆ.
ಜೀರ್ಣಾಂಗವ್ಯೂಹ, ಶ್ವಾಸಾಂಗವ್ಯೂಹ, ರಕ್ತ ಪರಿಚಲನಾ ವ್ಯೂಹಗಳು ಪರಿಪೂರ್ಣವಾಗಿ ಬೆಳೆದು ಪರಿಪಕ್ವತೆಯನ್ನು
ಹೊಂದುತ್ತವೆ. ಸುಮಾರು 18 ವರ್ಷಗಳಾಗುವುದರೊಳಗಾಗಿ ಹೃದಯ ಮತ್ತು ಮೆದುಳು ಪರಿಪೂರ್ಣ ಬೆಳವಣಿಗೆಯನ್ನು
ಕಾಣುತ್ತೇವೆ.
ಜೀರ್ಣಾಂಗವ್ಯೂಹದ ಬೆಳವಣಿಗೆಯಲ್ಲಿ ಜಠರ ಉದ್ದವಾಗುತ್ತದೆ.
ಜಠರ ಮತ್ತು ಕರುಳಿನ ಸ್ನಾಯುಗಳು ದಪ್ಪವಾಗಿ ಬಲವಾಗುತ್ತವೆ. ಕರುಳಿನ ಉದ್ದ ಮತ್ತು ಸುತ್ತಳತೆ ಹೆಚ್ಚುತ್ತದೆ.
ಪಿತ್ತಕೋಶದ ತೂಕ ಹೆಚ್ಚುತ್ತದೆ ಹಾಗೂ ಅನ್ನನಾಳ ಉದ್ದವಾಗುತ್ತದೆ.
ರಕ್ತ
ಪರಿಚಲನಾವ್ಯೂಹದಲ್ಲಿ ಹೃದಯ ತೀವ್ರಗತಿಯಿಂದ ಬೆಳೆಯುತ್ತದೆ. 17-18 ನೇ ವಯಸ್ಸಿನಲ್ಲಿ ಹೃದಯದ ತೂಕ
ಶೈಶವದ ಹೃದಯದ ತೂಕದ 12 ಪಟ್ಟು ಹೆಚ್ಚು ಇರುತ್ತದೆ. ಹೃದಯದ ಜೊತೆಗೆ ರಕ್ತನಾಳಗಳೂ ಸಹ ಪರಿಪಕ್ವತೆಯನ್ನು
ಪಡೆಯುತ್ತವೆ. ಶ್ವಾಸಾಂಗವ್ಯೂಹದ ಬೆಳವಣಿಗೆಯಲ್ಲಿ ಶ್ವಾಸಕೋಶಗಳು ಹುಡುಗಿಯರಲ್ಲಿ ಸುಮಾರು 17ನೇ ವಯಸ್ಸಿಗೆ
ಪರಿಪೂರ್ಣ ಹೊಂದಿರುತ್ತವೆ. ಆದರೆ ಹುಡುಗರಲ್ಲಿ ವಯಸ್ಕರಾದ ಬಳಿಕ ಇವು ಪರಿಪೂರ್ಣವಾಗುತ್ತವೆ.
ನಿರ್ನಾಳ ಗ್ರಂಥಿಗಳಿಂದ ಸ್ರವಿಸುವಿಕೆ ತೀವ್ರವಾಗಿರುತ್ತದೆ.
ನಿರ್ನಾಳ ಗ್ರಂಥಿಗಳಿಂದ ಬಿಡುಗಡೆಯಾಗುವ ಹಾರ್ಮೋನುಗಳು ವ್ಯಕ್ತಿಯ ದೈಹಿಕ ಬೆಳವಣಿಗೆಯ ಮೇಲೆ ಪ್ರಭಾವ
ಬೀರುತ್ತವೆ.
- ಲೈಂಗಿಕ ಪರಿಪಕ್ವತೆಯ
ವಯಸ್ಸು: ಉಷ್ಣವಲಯದ
ದೇಶಗಳಲ್ಲಿ ಹದಿಹರೆಯದವರು ಶೀತ ವಲಯದ ದೇಶಗಳಿಗಿಂತ ಮೊದಲು ಲೈಂಗಿಕ ಪರಿಪಕ್ವತೆಯನ್ನು ಪಡೆಯುತ್ತಾರೆ.
ಸಾಮಾನ್ಯವಾಗಿ 13 ರಿಂದ 16 ವರ್ಷಗಳ ಮಧ್ಯೆ ಲೈಂಗಿಕ ಪರಿಪಕ್ವತೆಯನ್ನು ಕಾಣುತ್ತಾರೆ. ಹುಡುಗರಲ್ಲಿ
ಅನೈಚ್ಛಿಕ ವೀರ್ಯಸ್ಖಲನದ ಮುಖಾಂತರ ಲೈಂಗಿಕ ಪರಿಪಕ್ವತೆ ಕಂಡುಬಂದರೆ, ಹುಡುಗಿಯರಲ್ಲಿ ಋತುಚಕ್ರ
ಪ್ರಾರಂಭವಾಗುವ ಮೂಲಕ ಲೈಂಗಿಕ ಪರಿಪಕ್ವತೆ ಕಂಡುಬರುತ್ತದೆ.
- ದೈಹಿಕ ಮತ್ತು ಮಾನಸಿಕ
ಬೆಳವಣಿಗೆಯ ನಡುವಿನ ಸಂಬಂಧ:
ದೈಹಿಕ ಬೆಳವಣಿಗೆ ಮತ್ತು ಮಾನಸಿಕ ಸಾಮರ್ಥ್ಯಗಳ ನಡುವಣ ಧನಾತ್ಮಕ ಸಹಸಂಬಂಧ ಇರುವುದು ಕಂಡು ಬಂದಿದೆ.
ಹದಿಹರೆಯದವರ ದೈಹಿಕ ಮತ್ತು ಶಾರೀರಿಕ ವಿಕಾಸ ಅವರ ಆಸಕ್ತಿಗಳು ಮತ್ತು ವರ್ತನಾ ವಿನ್ಯಾಸಗಳಿಗೆ
ಸಂಬಂಧಿಸಿದೆ. ತರುಣ-ತರುಣಿಯರ ಸಾಮಾಜಿಕ ವಿಕಾಸದ ಮೇಲೆ ಅವರ ದೈಹಿಕ ಬೆಳವಣಿಗೆ ಪ್ರಭಾವ ಬೀರುತ್ತದೆ.
ಉದಾಹರಣೆಗೆ- ಒಬ್ಬ ಹುಡುಗಿ ಕುರೂಪಿಯಾಗಿದ್ದರೆ ಮತ್ತು ಉತ್ತಮ ದೈಹಿಕ ಬೆಳವಣಿಗೆಯಿಲ್ಲದಿದ್ದಲ್ಲಿ
ಅವಳು ಸಾಮಾಜಿಕ ಸನ್ನಿವೇಶಗಳಿಂದ ದೂರವಿರಲು ಬಯಸುತ್ತಾಳೆ. ಹೀಗೆಯೇ ಹುಡುಗ ಅಂಗವಿಕಲನಾದಲ್ಲಿ
ಅದು ಅವನ ಮಾನಸಿಕ ಮತ್ತುಸಾಮಾಜಿಕ ವಿಕಾಸಕ್ಕೂ ಅಡ್ಡಿಯಾಗುತ್ತದೆ. ಅಂದರೆ ವಿಕಾಸದ ಎಲ್ಲಾ ಅಂಶಗಳಲ್ಲಿ
ಒಂದನೊಂದು ಪೂರಕವಾಗಿರುತ್ತವೆ.
- ಗತಿ ಸಾಮರ್ಥ್ಯ: ಗತಿ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ
ಹುಡುಗರು ಸ್ನಾಯುಶಕ್ತಿ ಮತ್ತು ವೇಗದ ಚಟುವಟಿಕೆಗಳಲ್ಲಿ ಉತ್ತಮ ಸಾಮರ್ಥ್ಯ ತೋರುತ್ತಾರೆ. ಆದರೆ
ಹುಡುಗಿಯರು ದೈಹಿಕ ಚಟುವಟಿಕೆಗಳಲ್ಲಿ ಕಡಿಮೆ ಆಸಕ್ತಿ ತೋರುತ್ತಾರೆ. ಹುಡುಗಿಯರು ಕೌಶಲ್ಯದ ಚಟುವಟಿಕೆಗಳಲ್ಲಿ
ಹುಡುಗರಿಗಿಂತ ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಈ ಹಂತದಲ್ಲಿ ಭಿನ್ನ ಲಿಂಗಗಳ ಸ್ನೇಹ ಪಡೆಯಲು
ಬಯಸುತ್ತಾರೆ. ಕ್ರೀಡೆಗಳು, ಸಾಂಸ್ಕೃತಿಕ ಚಟುವಟಿಕೆಗಳು ಧನಾತ್ಮಕ ಪ್ರಭಾವ ಬೀರುತ್ತವೆ.
ಸಾಮಾಜಿಕ
ವಿಕಾಸ
ಮಾನವನ ಮೂಲತಃ ಸಮಾಜ ಜೀವಿ, ಸಮಾಜವಿಲ್ಲದೆ ಅವನು ಬಾಳಲಾರ.
ಇವನು ಸಮಾಜದಲ್ಲಿಯೇ ಜನಿಸಿ, ವಿಕಾಸ ಹೊಂದಿ, ಸಮಾಜದ ಪ್ರಗತಿಗಾಗಿಯೇ ಕಾರ್ಯ ನಿರ್ವಹಿಸುವವನಾಗಿದ್ದಾನೆ.
ತಾನು ಬಾಳುವ ಸಮಾಜದೊಡನೆ ಹೊಂದಾಣಿಕೆ ಮಾಡಿಕೊಳ್ಳಲು ಸಾಮಾಜಿಕ ವಿಕಾಸ ಅತೀ ಅಗತ್ಯ. ಸಾಮಾಜಿಕ ವಿಕಾಸದ
ತಳಹದಿ ಮನೆಯಲ್ಲಿ ಪೋಷಕರಿಂದಲೇ ಪ್ರಾರಂಭವಾಗುತ್ತದೆ. ತಾರುಣ್ಯಾವಸ್ಥೆಯಲ್ಲಿ ಸಾಮಾಜಿಕ ಜವಾಬ್ದಾರಿಯ
ಒಂದು ಹೊಸ ಕ್ಷೇತ್ರವನ್ನು ಪ್ರವೇಶಿಸುತ್ತಾರೆ. ಈ ಹಂತದಲ್ಲಿ ಸಮಾಜ ಮತ್ತು ಪೋಷಕರು ಇವರಿಂದ ಜವಾಬ್ದಾರಿಯುತ
ವರ್ತನೆ ಬಯಸುತ್ತಾರೆ ಮತ್ತು ಹೊಸ ಬೇಡಿಕೆಗಳನ್ನು ಇವರ ಮುಂದೆ ಇಡುತ್ತಾರೆ. ಹೊಸ ಪಾತ್ರಗಳಲ್ಲಿ ಯಶಸ್ವಿಯಾಗಿ
ಹೊಂದಾಣಿಕೆ ಮಾಡಿಕೊಳ್ಳುವಲ್ಲಿ ಕೆಲವೊಮ್ಮೆ ತೊಂದರೆ ಎದುರಿಸುತ್ತಾರೆ.
ಹದಿಹರೆಯದವರ ಸಾಮಾಜಿಕ ವಿಕಾಸದಲ್ಲಿ ಕಂಡುಬರುವ ಪ್ರಮುಖ
ಅಂಶಗಳೆಂದರೆ-
- ಸಮವಯಸ್ಕರ ಹೆಚ್ಚಾದ
ಪ್ರಭಾವ:
ತಾರುಣ್ಯಾವಸ್ಥೆಯಲ್ಲಿ ಮಕ್ಕಳು ಬೆಳೆದಂತೆ ಸ್ನೇಹಿತರೊಡನೆ
ಮನೆಯ ಹೊರಗೆ ಹೆಚ್ಚು ಕಾಲ ಕಳೆಯಲು ಬಯಸುತ್ತಾರೆ. ಇವರ ಸಾಮಾಜಿಕ ವರ್ತನೆ ಅವರು ಎಂತಹ ಸ್ನೇಹಿರು ಅಥವಾ
ಸಮವಯಸ್ಕರೊಂದಿಗೆ ಇದ್ದಾರೆ ಎಂಬುದರ ಮೇಲೆ ರೂಪುಗೊಳ್ಳುತ್ತದೆ. ಇವರ ಆಸಕ್ತಿಗಳು, ಮನೋಧೋರಣೆಗಳು ಮತ್ತು
ಮೌಲ್ಯಗಳು ಸಮವಯಸ್ಕರಿಂದ ಪ್ರಭಾವಿತರಾಗಿರುತ್ತಾರೆ. ಅದ್ಯಯನಗಳು, ಪಟ್ಟಣ ಪ್ರದೇಶದ ತರುಣ-ತರುಣಿಯರು
ಹೆಚ್ಚಾಗಿ ಸಮವಯಸ್ಕ ಗುಂಪಿನಿಂದ ಪ್ರಭಾವಿತರಾಗಿರುತ್ತಾರೆ ಮತ್ತು ಗ್ರಾಮೀಣ ಪ್ರದೇಶದ ಮಕ್ಕಳು ಸಮವಯಸ್ಕರಲ್ಲದೇ
ಪೋಷಕರು ಮತ್ತು ಹಿರಿಯರಿಂದ ಪ್ರಭಾವಿತರಾಗಿರುತ್ತಾರೆ ಎಂದು ವರದಿ ಮಾಡಿವೆ.
- ಸಾಮಾಜಿಕ ವರ್ತನೆಯ
ಬದಲಾವಣೆಗಳು:
ಕುಟುಂಬದಲ್ಲಿ ತರುಣ-ತರುಣಿಯರ ಸ್ಥಾನದಲ್ಲಿ ಬದಲಾವಣೆ ಕಂಡು ಬರುತ್ತದೆ. ಇವರ ಬಗ್ಗೆ ಪೋಷಕರ
ಮನೋಧೋರಣೆ ಬದಲಾಗುತ್ತದೆ ಮತ್ತು ಪೋಷಕರು ಇವರಿಗೆ ಹೆಚ್ಚಿನ ಜವಾಬ್ದಾರಿಯುತ ಕಾರ್ಯಗಳನ್ನು ವಹಿಸುತ್ತಾರೆ.
ಮನೆಯಲ್ಲಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳುವಾಗ ಇವರನ್ನು ವಿಶ್ವಾಸಕ್ಕೆ ತೆಗ್ದುಕೊಳ್ಳುತ್ತಾರೆ.
ಈ ಹಂತದಲ್ಲಿ ಸ್ನೇಹಿತರ ಗುಂಪು ಚಿಕ್ಕದಾಗಿರುತ್ತದೆ. ವಿಶೇಷ ಆಸಕ್ತಿಗಳನ್ನು ಬೆಳೆಸಿಕೊಳ್ಳುತ್ತಾರೆ.
ಇವನು ವಯಸ್ಕರೊಡನೆ ಗುರ್ತಿಸಿಕೊಳ್ಳಲು ಪ್ರಾರಂಭಿಸುತ್ತಾನೆ ಮತ್ತು ವಯಸ್ಕರಂತಹ ಪಾತ್ರಗಳನ್ನು ನಿರ್ವಹಿಸಲು
ಪ್ರಯತ್ನಿಸುತ್ತಾನೆ.
ಇನ್ನೋಂದು ಪ್ರಮುಖ ಬದಲಾವಣೆಯೆಂದರೆ, ತರುಣ-ತರುಣಿಯರು
ಸಮಾನ ಆಸಕ್ತಿಗಳು ಮತ್ತು ಗುಂಪುಗಳ ಆಧಾರದ ಮೇಲೆ ತಮ್ಮದೇ ಆದ ಸಾಮಾಜಿಕ ಗುಂಪುಗಳನ್ನು ರಚಿಸಿಕೊಳ್ಳುತ್ತಾರೆ.
ಹುಡುಗರ ಸಾಮಾಜಿಕ ಗುಂಪುಗಳು ಹುಡುಗಿಯರ ಸಾಮಾಜಿಕ ಗುಂಪುಗಳಿಗಿಂತ ದೊಡ್ಡದಾಗಿರುತ್ತದೆ. ನಮ್ಮ ಸಮಾಜದಲ್ಲಿ
ಹುಡುಗರಿಗೆ ಹುಡುಗಿಯರಿಗಿಂತ ಹೆಚ್ಚಿನ ಸ್ವಾತಂತ್ರ್ಯ ನೀಡಿರುವುದು ಇದಕ್ಕೆ ಕಾರಣವಿರಬಹುದು. ತಾರುಣ್ಯದಲ್ಲಿ
ಹಲವಾರು ರೀತಿಯ ಸಾಮಾಜಿಕ ಗುಂಪುಗಳನ್ನು ಕಾಣುತ್ತೇವೆ.
- ಸ್ನೇಹ: ಸ್ನೇಹಿತರನ್ನು ಆಯ್ಕೆ ಮಾಡಿಕೊಳ್ಳುವಾಗ ವಿಶ್ವಾಸನೀಯತೆಯನ್ನು
ಆಧಾರವಾಗಿಟ್ಟುಕೊಳ್ಳುವ ಪ್ರವೃತ್ತಿ ತಾರುಣ್ಯದಲ್ಲಿ ಕಂಡು ಬರುತ್ತದೆ. ಆತ್ಮೀಯ ಮಿತ್ರರ ಸಂಖ್ಯೆ
ಕಡಿಮೆಯಾಗಿ ಪರಿಚಿತರ ಸಂಖ್ಯೆ ವೃದ್ಧಿಸುತ್ತದೆ. ಭಿನ್ನಲಿಂಗದವರ ಸ್ನೇಹ ಸಂಪಾದಿಸುವ ಬಯಕೆ ಈ
ಹಂತದಲ್ಲಿ ಪ್ರಬಲವಾಗುತ್ತದೆ. ತಮ್ಮ ಸ್ನೇಹಿತರ ಆಯ್ಕೆಯಲ್ಲಿ ಹಿರಿಯರು ತಲೆ ಹಾಕಿದರೆ ಇವರು
ಸಹಿಸುವುದಿಲ್ಲ. ಇದರಿಂದಾಗಿ ಅನನುಭವಿಗಳಾದ ಇವರು ಎಷ್ಟೋಸಲ ಸ್ನೇಹಿತರ ಆಯ್ಕೆಯಲ್ಲಿ ಎಡವುದುಂಟು.
ಆದರೂ ಈ ಅವಧಿಯಲ್ಲಿ ಬೆಳೆಯುವ ಸ್ನೇಹಗಳು ಹೆಚ್ಚಾಗಿ ಸ್ಥಿರವಾಗಿ ಉಳಿಯುತ್ತವೆ. ತಮ್ಮ ಜನಪ್ರಿಯತೆಯ
ಪ್ರತೀಕವಾಗಿ ಬಹಳ ಸ್ನೇಹಿರನ್ನು ಪಡೆಯುವ ಆಸೆ ತರುಣ-ತರುಣಿಯರಲ್ಲಿ ಕಂಡುಬರುತ್ತದೆ.
- ನಾಯಕತ್ವ ಬೆಳವಣಿಗೆ: ಈ ಹಂತದಲ್ಲಿ ನಾಯಕನ ಪ್ರಮುಖ ಗುಣವೆಂದರೆ
ಜನಪ್ರಿಯತೆ, ಕ್ರಿಯಾಶೀಲತೆ, ಮುನ್ನುಗ್ಗುವ ಪ್ರವೃತ್ತಿ, ಬಹಿರ್ಮುಖತ್ವ, ಸಹಕಾರ ಮನೋಭಾವ, ಕರ್ತವ್ಯ
ನಿಷ್ಠೆ, ಪ್ರಾಮಾಣಿಕತೆ, ಆತ್ಮ ವಿಶ್ವಾಸ, ಶೀಘ್ರ ನಿರ್ಣಯ ಶಕ್ತಿ, ವಹಿಸಿಕೊಂಡ ಜವಾಬ್ದಾರಿಯನ್ನುನಿರ್ವಹಿಸುವ
ಸಾಮರ್ಥ್ಯ, ದೃಢತೆ, ಚತುರತನ ಇವು ತಾರುಣ್ಯದಲ್ಲಿ ಜನಪ್ರಿಯಗೊಳಿಸಬಲ್ಲ ಗುಣಗಳು, ಸಾಮಾನ್ಯವಾಗಿ
ಉತ್ತಮ ಸಮತೋಲನ ವ್ಯಕ್ತಿತ್ವ ಹೊಂದಿರುವವರು ನಾಯಕರಾಗಿರುತ್ತಾರೆ. ಬುದ್ಧಿಶಕ್ತಿ, ಶೈಕ್ಷಣಿಕ
ಸಾಧನೆ, ಸಮಾಜಿಕ, ಆರ್ಥಿಕ ಸ್ಥಾನಮಾನಗಳು ಕೂಡ ಈ ಹಂತದ ಮಗುವಿಗೆ ಸಮಾಜೀಕರಣದ ಮೇಲೆ ಪ್ರಭಾವ
ಬೀರುತ್ತವೆ.
- ಸಾಮಾಜಿಕ ಸ್ವೀಕೃತಿ: ಕೆಲವು ತರುಣ-ತರುಣಿಯರು ಎಲ್ಲರ ಪ್ರೀತಿ
ವಿಶ್ವಾಸಗಳಿಗೆ ಪಾತ್ರರಾಗಿ ʼತಾರೆʼ ಗಳಂತಿರುತ್ತಾರೆ. ಅವರದು ಮುನ್ನುಗ್ಗುವ ಸ್ವಭಾವ, ವಸ್ತುಗಳಿಗಿಂತ
ವ್ಯಕ್ತಿಗಳನ್ನು ಕಂಡರೆ ಅವರಿಗೆ ಹೆಚ್ಚು ಇಷ್ಟ. ಕಾರ್ಯಶೀಲತೆ, ಧೈರ್ಯ, ಸಮಕಾಲೀನ ರೀತಿ ನೀತಿಗಳನ್ನು
ಒಪ್ಪಿಕೊಳ್ಳುವ ಮನೋಭಾವ ಮುಂತಾದವುಗಳು ಅವರಲ್ಲಿ ಕಂಡುಬರುತ್ತದೆ. ಇನ್ನು ಕೆಲವರು ಇದಕ್ಕೆ ತದ್ವಿರುದ್ದರಾಗಿ
ಎಲ್ಲರಿಂದಲೂ ಕಡೆಗಣಿಸಲ್ಪಟ್ಟು ಒಂಟಿಗಳಾಗಿರುತ್ತಾರೆ. ಕೆಲವರು ತಾವಾಗಿಯೇ ಸಮಾಜದ ಕ್ರಿಯಾಶೀಲ
ಜೀವನದಿಂದ ಮಿಮುಖರಾಗಬಹುದು. ಉಳಿದವರಲ್ಲಿ ಕೆಲವರು ಕಡೆಗಣಿಸಲ್ಪಟ್ಟವರು, ನಿರಾಕರಿಸಲ್ಪಟ್ಟವರು
ಆತ್ಮ ನಿರಾಕರಣೆಗೆ ತುತ್ತಾಗಿ ಹಗಲು-ಗನಸುಗಳಲ್ಲಿ ತಮ್ಮ ಶಕ್ತಿ ಸಾಮರ್ಥ್ಯಗಳನ್ನು ವ್ಯಯಿಸುತ್ತಾ
ಸದಾ ಅಸುಖಿಗಳಾಗಿರುತ್ತಾರೆ.
- ಸಾಮಾಜಿಕ ವರ್ತನೆಯ
ಪರಿಪಕ್ವತೆ:
ಸಾಮಾಜಿಕ ಪರಿಪಕ್ವವೆನಿಸುವ ತರುಣರ-ತರುಣಿಯರಿಗೆ ಸಮಾಜದಲ್ಲಿ ಸ್ಥಾನಮಾನಗಳು ದೊರೆಯುವುದಲ್ಲದೇ
ಅವರ ಕರ್ತವ್ಯಪರಿಜ್ಞಾನ ಉತ್ತಮ ಮಟ್ಟದಲ್ಲಿರುತ್ತದೆ. ಇವರು ಸಮಚಿತ್ತ ಪ್ರವೃತ್ತಿಯಯನ್ನು ಪ್ರದರ್ಶಿಸುತ್ತಾರೆ.
ಇವರು ಭಾವಶುದ್ದಿಯಿಂದ ಕೂಡಿರುವರು, ಹೊಸ ಸನ್ನಿವೇಶಗಳಲ್ಲಿಯೂ ಸಹ ಸಾಮಾಜಿಕ ಜೀವನವನ್ನು ಸಮರ್ಥವಾಗಿ
ನಿರ್ವಹಿಸಬಲ್ಲರು, ಇವರು ತಮ್ಮ ಕುಟುಂಬ ವರ್ಗದವರೊಡನೆ ಪ್ರೀತಿ ವಾತ್ಸಲ್ಯಗಳಿಂದ ಕೂಡಿ ಗೌರವಗಳಿಂದ
ವ್ಯವಹರಿಸುತ್ತಾರೆ. ಕುಟುಂಬದ ಸ್ಥಿತಿಗತಿಗಳು, ಪೋಷಕರ ಶಿಕ್ಷಣದ ಮಟ್ಟ ಮತ್ತು ಆರೋಗ್ಯ ಸ್ಥಿತಿ
ಮುಂತಾದ ಅಂಶಗಳು ಸಾಮಾಜಿಕ ಪರಿಪಕ್ವತೆಯ ಮೇಲೆ ಪ್ರಭಾವ ಬೀರುತ್ತವೆ.
ಸಂವೇಗಾತ್ಮಕ
ವಿಕಾಸ
ಹದಿಯರೆಯದಲ್ಲಿ ದೇಹದ ಒಳ ಅಂಗಗಳಲ್ಲಿ ಆಗುವ ಬದಲಾವಣೆ,
ಸಾಮಾಜಿಕ ನಿರೀಕ್ಷೆಗಳಿಗೂ ಹೊಂದಿಕೊಳ್ಳಬೇಕಾದ ಕಠಿಣ ಪರಿಸ್ಥಿತಿಯಿಂದಾಗಿ ತರುಣ-ತರುಣಿಯರು ಭಾವೋತ್ಕರ್ಷದಿಂದ
ಕೂಡಿರುತ್ತಾರೆ. ಈ ಅವಧಿಯನ್ನು ಸಂಕ್ಷೋಭೆ ಮತ್ತು
ಪ್ರಯಾಸಗಳ ಕಾಲವೆಂದು ಕರೆಯುತ್ತಾರೆ. ಈ ಅವಧಿಯಲ್ಲಿ ಉಂಟಾಗುವ ಭಾವೋತ್ಕರ್ಷಗಳು ಬಹಳ ದಿನಗಳವರೆಗೆ
ನಿರಂತರವಾಗಿ ಮುಂದುರೆದರೆ ಅವು ಅಸಮರ್ಪಕವಾದ ಹೊಂದಾಣಿಕೆಯನ್ನು ಸೂಚಿಸುತ್ತದೆ. ಏಕೆಂದರೆ, ಈ ವಯಸ್ಸಿನಲ್ಲಿ
ಕಾಣಿಸಿಕೊಳ್ಳುವ ಭಾವೋತ್ಕರ್ಷಗಳು ಬಹಳ ದಿನಗಳವರೆಗೆ ಮುಂದುರೆಯುವುದಿಲ್ಲ.
ತಾರುಣ್ಯಾವಸ್ಥೆಯಲ್ಲಿ
ಭಾವೋತ್ಕರ್ಷಕ್ಕೆ ಕಾರಣಗಳು:
- ಮನೆ, ಶಾಲೆ ಮತ್ತು ಸಮಾಜದಲ್ಲಿ ಹೊಂದಾಣಿಕೆಯ ಸಮಸ್ಯೆ: ಹೊಸ ಸಾಮಾಜಿಕ ಸನ್ನಿವೇಶಗಳೊಡನೆ ಹೊಂದಾಣಿಕೆ
ಮಾಡಿಕೊಳ್ಳುವುದು, ಹಳೆಯ ಹವ್ಯಾಸಗಳನ್ನು ಮರೆತು ಈ ಹಂತಕ್ಕನುಗುಣವಾದ ಹೊಸ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದು.
ಪರತಂತ್ರದಿಂದ ಸ್ವತಂತ್ರದೆಡೆಗೆ ಸಾಗುವುದು. ಜವಾಬ್ದಾರಿಗಳ ನಿರ್ವಹಣೆ ಮುಂತಾದವುಗಳು ಬಾವೋತ್ಕರ್ಷಕ್ಕೆ
ಕಾರಣವಾಗುತ್ತವೆ.
- ಮನೆಯಲ್ಲಿ ವ್ಯಕ್ತಿಗಳೊಡನೆ ಅಸಮರ್ಪಕ ಸಂಬಂಧ: ತಂದೆ- ತಾಯಿಯರು ತರುಣ-ತರುಣಿಯರ ಭಾವನೆಗಳನ್ನು
ಅರ್ಥ ಮಾಡಿಕೊಳ್ಳದೇ ಹೋದಾಗ, ತಂದೆ-ತಾಯಿಗಳು ಈ ಹಂತದ ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು.
ಅವರು ಈ ರೀತಿ ಕಾಣದೇ ಹೋದಾಗ ಅವರಲ್ಲಿ ಬಂಡಾಯ ಪ್ರವೃತ್ತಿ ಕಾಣಿಸಿಕೊಳ್ಳುತ್ತದೆ. ಪೋಷಕರು ಮತ್ತು
ಒಡಹುಟ್ಟಿದವರೊಡನೆ ಜಗಳಗಳು, ತಮ್ಮ ಬೇಡಿಕೆಗಳ ಪೂರೈಕೆಗೆ ಮನೆಯಲ್ಲಿ ಹಣ ದೊರೆಯದೆ ಇರುವುದು
ಭಾವೋತ್ಕರ್ಷಕ್ಕೆ ಕಾರಣವಾಗುತ್ತದೆ.
- ಸಾಮಾಜಿಕ ನಿರೀಕ್ಷೆಗಳು: ಸಮಾಜ ನಿರೀಕ್ಷಿಸಿದಂತೆ ನಡೆದುಕೊಳ್ಳಲು
ಸಾಧ್ಯವಾಗದೇ ಇರುವುದು, ಹೊಸ ಪರಿಸರದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದು. ಬೇರೆ ಬೇರೆ ಸಾಮಾಜಿಕ
ಸನ್ನಿವೇಶಗಳಿಗೆ ಹೊಂದಿಕೊಳ್ಳುವುದು, ಹಲವಾರು ಹೊಸ ಪಾತ್ರಗಳ ನಿರ್ವಹಣೆ ಕಷ್ಟವಾಗುವುದು ಹಾಗೂ
ಭಾವೋತ್ಕರ್ಷಕ್ಕೆ ಕಾರಣವಾಗುತ್ತದೆ.
- ಭಿನ್ನ ಲಿಂಗದ ವ್ಯಕ್ತಿಗಳೊಡನೆ ಹೊಂದಾಣಿಕೆ: ಈ ಹಂತದಲ್ಲಿ ಭಿನ್ನ ಲಿಂಗದ ಆಕರ್ಷಣೆ
ಹೆಚ್ಚಾಗಿರುತ್ತದೆ. ಭಿನ್ನ ಲಿಂಗದ ವ್ಯಕ್ತಿಯೊಬ್ಬರೊಡನೆ ಸ್ನೇಹ ಬೆಳೆಸಿಕೊಳ್ಳಲು ಸಾಧ್ಯವಾಗದೇ
ಹೋದಾಗ ಭಾವೋದ್ವೇಗವನ್ನುಂಟುಮಾಡುತ್ತದೆ.
- ಶಾಲೆಯಲ್ಲಿ ಅನುತ್ತೀರ್ಣನಾಗುವಿಕೆ: ಹದಿಹರೆಯದವರು ಅನುತ್ತೀರ್ಣನಾಗಿ ಮನೆ
ತೊರೆಯುವುದು, ಶಿಕ್ಷಣ ತೊರೆಯುವುದು ಮತ್ತು ಆತ್ಮಹತ್ಯೆ ಮುಂತಾದವುಗಳಿಗೆ ಪ್ರಯತ್ನಿಸುತ್ತಾರೆ.
- ಸ್ನೇಹಿತರು ಮತ್ತು ಕುಟುಂಬದರೊಡನೆ ಘರ್ಘಣೆಗಳು: ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳದವರೊಡನೆ
ಜಗಳ, ತಂದೆ ತಾಯಿಗಳ ಅತಿಯಾದ ಶಿಸ್ತು, ನಿಬಂಧನೆಗಳು, ತಮ್ಮ ಆಸಕ್ತಿ ಮತ್ತು ಅಭಿರುಚಿಗಳಿಗೆ
ಮನ್ನಣೆ ಕೊಡದಿರುವುದು, ಸ್ನೇಹಿತರು ಅಣಕಿಸುವುದು, ಬಯ್ಯುವುದು ಇತ್ಯಾದಿ.
- ವೃತ್ತಿಯ ಸಮಸ್ಯೆಗಳು: ಭಾರತದ ಹೆಚ್ಚಿನ ತರುಣ-ತರುಣಿಯರು ತಮ್ಮ
ಭವಿಷ್ಯ ಜೀವನದ ಬಗ್ಗೆ ಹೆಚ್ಚು ಚಿಂತಿತರಾಗಿರುತ್ತಾರೆ. ನಿರುದ್ಯೋಗಿಗಳನ್ನು ಕಂಡಾಗ ಇವರು ಭಯಗೊಳ್ಳುತ್ತಾರೆ.
ಉದ್ವಿಗ್ನರಾಗುತ್ತಾರೆ. ಬಡ ಮಕ್ಕಳು ತಮ್ಮ ಮನೆತನವನ್ನು ನಡೆಸುವಲ್ಲಿ ಸಹಾಯ ಮಾಡಬೇಕಾಗಿರುವವರು
ಹೆಚ್ಚು ಚಿಂತಿತರಾಗುತ್ತಾರೆ.
- ಧಾರ್ಮಿಕ ಘರ್ಘಣೆಗಳು: ತಂದೆ ತಾಯಿಗಳಿಂದ ಬೋಧಿಸಲ್ಪಟ್ಟ ಧಾರ್ಮಿಕ
ನಂಬಿಕೆಗಳನ್ನು ಹದಿಹರೆಯದವರು ಪ್ರಶ್ನಿಸಲು ಪ್ರಾರಂಭಿಸುತ್ತಾರೆ. ಧಾರ್ಮಿಕ ನಂಬಿಕೆ ಮತ್ತು
ಮೌಲ್ಯಗಳನ್ನು ಪರೀಕ್ಷಿಸುತ್ತಾರೆ. ಒಂದು ಜಾತಿಯವರು ಇನ್ನೊಂದು ಜಾತಿಯವರನ್ನು ದ್ವೇಷಿಸುವುದರ
ನುಡಿಗಳಲ್ಲಿ ಯಾವುದೇ ಹೋಲಿಕೆ ಇಲ್ಲದಿರುವುದು ಅವನಲ್ಲಿ ಭಾವೋದ್ವೇಗವನ್ನುಂಟು ಮಾಡುತ್ತವೆ.
ಭಾವನಾತ್ಮಕ
ವಿಚಲನೆಯ ಚಿಹ್ನೆಗಳು:
- ಚಿಹ್ನೆಗಳು: ಅತಿಯಾಗಿ ಉಗುರು ಕಚ್ಚುವುದು, ಹೆಬ್ಬೆರಳು
ಚೀಪುವುದು, ತುಟಿ ಕಚ್ಚುವುದು, ಮೂಗು ಅಥವಾ ತಲೆ ಕೆರೆದುಕೊಳ್ಳುವುದು, ತಲೆಯ ಕೂದಲುಗಳನ್ನು
ಸುರುಳಿ ಮಾಡುವಿಕೆ, ಬೆವತಂತೆ ಭಾವಿಸಿ ಮುಖ ಒರೆಸಿಕೊಳ್ಳುವುದು, ಕೈಗಳ ಮೇಲೆ ಮುಖವಿಟ್ಟು ಎಲ್ಲೋ
ವೀಕ್ಷಿಸುವುದು, ಅತಿಯಾಗಿ ಸಿಟ್ಟು, ಅವಧಾನದ ಕೊರತೆ, ಅತಿಯಾದ ನಾಚಿಕೆ, ಸನ್ನಿವೇಶದಿಂದ ಹಿಂದೆ
ಸರಿಯುವುದು, ಗಂಟಲು ಒಣಗುವುದು, ಬೆವರುವುದು ಮತ್ತು ಸಹಪಾಠಿಗಳು, ಒಡಹುಟ್ಟಿದವರು ಹಾಗೂ ಪೋಷಕರೊಡನೆ
ಜಗಳ ಇತ್ಯಾದಿ.
ಹದಿಹರೆಯದವರಲ್ಲಿ ಸಾಮಾನ್ಯವಾಗಿ ಕಂಡುಬರುವ ಸಂವೇಗಗಳೆಂದರೆ
ಕೋಪ, ಭಯ, ಚಿಂತೆ, ಅಸೂಯೆ, ಕುತೂಹಲ, ಸಂತೋಷ ಮತ್ತು ಪ್ರೀತಿ, ಬಾಲ್ಯದಲ್ಲಿ ಕಂಡು ಬಂದಂತಹ ಸಂವೇಗಗಳೇ,
ಈ ಹಂತದಲ್ಲಿಯೂ ಕಂಡು ಬಂದರೂ ಸಹ, ಅವುಗಳನ್ನು ಉದ್ದೀಪಿಸುವ ಅಂಶಗಳಲ್ಲಿ ಮತ್ತು ಹದಿಹರೆಯದವರು ತೋರಿಸುವ
ಅನುಕ್ರಿಯೆಗಳಲ್ಲಿ ವ್ಯತ್ಯಾಸ ಕಂಡು ಬರುತ್ತದೆ.
- ಕೋಪ: ಹದಿಯರೆಯದವರಲ್ಲಿ ಕೋಪವನ್ನು ಉದ್ದೀಪಿಸುವ
ಅಂಶಗಳೆಂದರೆ- ತಮಗೆ ಬೇಕಾದ ವಸ್ತುಗಳು ದೊರೆಯದೆ ಇರುವುದು, ಶಿಕ್ಷಕರು, ಪೋಷಕರು, ಹಿರಿಯರು
ಹಾಗೂ ಸ್ನೇಹಿತರ ಅಣುಕು ನುಡಿಗಳು, ಅವಹೇಳನ ಮತ್ತು ಟೀಕೆಗಳಿಗೆ ಗುರಿಯಾಗುವುದು, ಪೋಷಕರು ಮತ್ತು
ಶಿಕ್ಷಕರು ಅನ್ಯಾಯವಾಗಿ ತಮ್ಮನ್ನು ದಂಡಿಸಿದಾಗ, ಅನಪೇಕ್ಷಿತ ಉಪದೇಶ, ಸ್ವಾಭಿಮಾನಕ್ಕೆ ಧಕ್ಕೆ
ತಗುಲುವ ಸನ್ನಿವೇಶ, ತಮ್ಮ ಇಚ್ಚೆಯಂತೆ ಕಾರ್ಯವಾಗದೇ ಇರುವುದು, ರೂಢಿಯಾದ ಅಭ್ಯಾಸಗಳನ್ನು ಬಿಡಬೇಕಾಗುವ
ಸನ್ನಿವೇಶ ಇತ್ಯಾದಿ.
ಕೋಪ ಬಂದಾಗ ಈ ಹಂತದ ತರುಣ-ತರುಣಿಯರು
ಸಾಮಾನ್ಯವಾಗಿ ತೋರುವ ಅನುಕ್ರಿಯೆಗಳೆಂದರೆ- ಮುನಿಸು, ಪೋಷಕರು, ಹಾಗೂ ಸ್ನೇಹಿತರೊಡನೆ ಮಾತನಾಡದಿರುವುದು,
ತಮಗೆ ವಹಿಸಿದ ಕೆಲಸಗಳನ್ನು ಮಾಡಲು ನಿರಾಕರಿಸುವುದು, ನಿಂದಿಸುವುದು, ತಾತ್ಕಾಲಿಕವಾಗಿ ಮನೆ ಬಿಟ್ಟು
ಹೋಗುವುದು, ಅಳುವುದು ಇತ್ಯಾದಿ.
- ಭಯ: ಈ ಹಂತದಲ್ಲಿ ಭಯವನ್ನು ಉದ್ದೀಪಿಸುವ
ಅಂಶಗಳೆಂದರೆ, ಶಾಲೆಯಲ್ಲಿನ ಸೋಲುಗಳು, ಅಪರಿತರನ್ನು ಭೇಟಿಯಾಗುವುದು, ಒಂಟಿಯಾಗಿರವುದು, ವೇದಿಕೆಯಲ್ಲಿ
ನಿಂತು ಭಾಷಣ ಮಾಡುವುದು, ಭಿನ್ನ ಲಿಂಗದವರು ಇರುವ ಕೂಟಗಳಲ್ಲಿ ಭಾಗವಹಿಸುವುದು, ವಯಸ್ಕರು, ವ್ಯಂಗ್ಯವಾಗಿ
ಮಾತನಾಡುವವರು ಮತ್ತು ತಮಗಿಂತ ಬುದ್ದಿವಂತರು ಇರುವ ಕೂಟಗಳಲ್ಲಿ ಇರುವುದು ಇತ್ಯಾದಿ.
ಭಯಗೊಂಡಾಗ ತೋರುವ ಅನುಕ್ರಿಯೆಗಳೆಂದರೆ:
ಬೆವರುವುದು, ಗಂಟಲು ಒಣಗುವುದು, ನಾಚಿಕೊಳ್ಳುವುದು, ದಿಗ್ಬ್ರಮೆಯಾಗಿ ನಿಂತಿರುವುದು, ಬಿಳಿಚಿಕೊಳ್ಳುವುದು,
ಚಿಂತಿಸುವುದು, ಅಳುವುದು ಇತ್ಯಾದಿ.
- ಚಿಂತೆ: ಚಿಂತೆಯೆಂಬುದು ಕಲ್ಪನಾ ಭಯ, ವಾಸ್ತವವಾದ
ಕಾರಣಗಳಿಗಿಂತ ಹೆಚ್ಚಾಗಿ ಸ್ವಕಲ್ಪಿತ ಕಾರಣಗಳಿಗಾಗಿಯೇ ತರುಣ-ತರುಣಿಯರು ಚಿಂತಿಸುವುದು. ಹದಿಹರೆಯದವರಲ್ಲಿ
ಕಂಡು ಬರುವ ಚಿಂತೆಗಳೆಂದರೆ – ಶಾಲಾ-ಕಾಲೇಜುಗಳ ಪರೀಕ್ಷೆಗಳು ಮತ್ತು ಶಾಲಾ ಕೆಲಸಗಳ ಬಗ್ಗೆ ಚಿಂತೆಗೊಳಗಾಗುತ್ತಾರೆ.
ತರಗತಿ ಕಲಿಕೆಯಲ್ಲಿ ಗಮನ ಕೇಂದ್ರೀಕರಿಸಲು ಸಾದ್ಯವಾಗದಿರುವುದು. ಓದುವ ವಿಧಾನ ತಿಳಿಯದಿರುವುದು,
ಲೈಂಗಿಕ ಪಾತ್ರಗಳ ನಿರ್ವಹಣೆಯ ಅಸಮರ್ಪಕತೆ, ಅನುತ್ತೀರ್ಣನಾಗುವ ಭಯ ಚಿಂತೆಯನ್ನುಂಟುಮಾಡುತ್ತದೆ.
ತರುಣಿಯರಲ್ಲಿ ಸಾಮಾನ್ಯವಾಗಿ ತಮ್ಮ ಮುಖಲಕ್ಷಣ ಅಥವಾ ಅಂದ ಚೆಂದ, ದೇಹದ ಮಾಟ, ತಂದೆ ತಾಯಿಗಳೊಂದಿಗೆ
ಉತ್ತಮ ಬಾಂಧವ್ಯವಿಲ್ಲದಿರುವುದು, ಪೋಷಕರ ಅನಾರೋಗ್ಯ ಮುಂತಾದವು ಚಿಂತೆಗೆ ಕಾರಣವಾಗುತ್ತವೆ. ತರುಣರು
ಹಣ ಮತ್ತು ತಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಚಿಂತೆಗೊಳಗಾಗುತ್ತಾರೆ.
- ಕುತೂಹಲ: ಬಾಲ್ಯದಲ್ಲಿರುವಂತಹ ಸಾಮಾನ್ಯ ರೀತಿಯ ಕುತೂಹಲಗಳು ಈ ಹಂತದಲ್ಲಿ
ಕಂಡುಬರುವುದಿಲ್ಲ. ಲೈಂಗಿಕ ವಿಷಯಗಳು, ಹೊಸ ಹೊಸ ವಸ್ತುಗಳು ಮತ್ತು ವಿಷಯಗಳು, ತಮ್ಮ ದೇಹದಲ್ಲಿ
ನಿರಂತರವಾಗಿ ಆಗುತ್ತಿರುವ ಬದಲಾವಣೆಗಳು ಅವರ ಕುತೂಹಲವನ್ನುಕೆರಳಿಸುತ್ತವೆ. ಪ್ರಶ್ನೆಗಳು ಮತ್ತು
ಟೀಕೆಗಳ ಮೂಲಕ ಅವರು ತಮ್ಮ ಕುತೂಹಲವನ್ನು ವ್ಯಕ್ತಪಡಿದುತ್ತಾರೆ.
- ಅಸೂಯೆ: ಪ್ರೀತಿ ಪಾತ್ರರ ಪ್ರೀತಿಯನ್ನು ಕಸಿದುಕೊಳ್ಳಲು
ಯತ್ನಿಸುವರು, ತಮಗಿಂತ ಹೆಚ್ಚು ಸೌಲಭ್ಯಗಳನ್ನು ಹೊಂದಿರುವವರು, ಕಲಿಕೆಯಲ್ಲಿ ತಮಗಿಂತ ಮುಂದೆ
ಇರುವ ಸಹಪಾಠಿಗಳು ಹದಿಹರೆಯದಲ್ಲಿ ಅಸೂಯೆಯನ್ನು ಉದ್ದೀಪನಗೊಳಿಸುವಂತಹುಗಳು.
ಹದಿಹರೆಯದವರು ಅಸೂಯೆಯನ್ನು ತೋರ್ಪಡಿಸುವ ಅನುಕ್ರಿಯೆಗಳೆಂದರೆ- ವ್ಯಂಗ್ಯ, ಟೀಕೆ, ಹಿಂದಿನಿಂದ
ನಿಂದಿಸುವುದು, ನೈತಿಕ ಜೀವನದ ಬಗ್ಗೆ ಟೀಕೆ, ತಮ್ಮ ದುರಾದೃಷ್ಟವನ್ನು ಹಳಿದುಕೊಳ್ಳುವುದು, ಹುಳಿದ್ರಾಕ್ಷಿ
ಮನೋಭಾವ ಇತ್ಯಾದಿ.
- ಸಂತೋಷ ಅಥವಾ ಹರ್ಷ: ತಮ್ಮ ದೈನಂದಿನ ಜೀವನದ ರೀತಿ ನೀತಿಗಳು
ಮತ್ತು ಸಾಮಾಜಿಕ ನಡೆ ನುಡಿಗಳಿಗೆ ಹೊಂದಿಕೊಂಡಾಗ, ತಮ್ಮ ಚಿಂತೆಗಳ ಕಾರಣಗಳ ಅರಿವಾದಾಗ, ಯಾವುದಾದರೂ
ಕಾರ್ಯವನ್ನುಸಾಧಿಸಿದಾಗ ತರುಣ-ತರುಣಿಯರು ಸಂತೋಷಗೊಳ್ಳುತ್ತಾರೆ. ಹರ್ಷ ಸಾಮಾನ್ಯವಾಗಿ ಮುಗುಳು
ನಗೆಯಲ್ಲಿ ವ್ಯಕ್ತವಾಗುತ್ತದೆ. ವಿನೋದ ಪೂರ್ಣ ಸನ್ನಿವೇಶಗಳಿದ್ದಾಗ, ತಾವು ಸಂಗಡಿಗರಿಗಿಂತ ಮೇಲು
ಎಂಬ ಭಾವನೆಯಿಂದ ಕೂಡಿದ್ದಾಗಲೂ ಹರ್ಷಚಿತ್ತರಾಗಿರುತ್ತಾರೆ. ತರಗತಿಯಲ್ಲಿ ಉನ್ನತ ದರ್ಜೆಯಲ್ಲಿ
ತೇರ್ಗಡೆ ಹೊಂದುವುದು. ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳಾಗಿ ಆಯ್ಕೆಯಾಗುವುದು, ಕ್ರೀಡೆ
ಮತ್ತು ಆಟಗಳಲ್ಲಿ ಮುಂದುವರಿಯುವುದು. ಇರತರಿಗಿಂತ ಹೆಚ್ಚಿನ ದೈಹಿಕ ಸಾಮರ್ಥ್ಯ ಹೊಂದಿರುವುದು
ಈ ಹಂತದಲ್ಲಿ ಹರ್ಷವನ್ನು ಉದ್ದೀಪಿಸುವ ಅಂಶಗಳು.
- ಪ್ರೀತಿ: ತಮಗೆ ಸಂತೋಷವನ್ನು ಕೊಡುವ ಮತ್ತು ತಮ್ಮಲ್ಲಿ
ಸುರಕ್ಷಿತಾ ಭಾವವನ್ನುಂಟು ಮಾಡುವ ವ್ಯಕ್ತಿಗಳನ್ನು ಹದಿಹರೆಯದವರು ಹೆಚ್ಚಾಗಿ ಪ್ರೀತಿಸುತ್ತಾರೆ.
ಕೆಲವರನ್ನಂತೂ ಅತಿಯಾಗಿ ಪ್ರೀತಿಸುವುದಲ್ಲದೇ, ಸದಾ ಅವರ ಸಂಗಡವೇ ಇರಬೇಕೆಂದು ಬಯಸುತ್ತಾರೆ.
ತಮಗೆ ಪ್ರೀತಿ ಪಾತ್ರರಾದ ವ್ಯಕ್ತಿಗಳನ್ನು ಸಂತೋಷಪಡಿಸಲು ಅವರಿಗೆ ಯಾವ ರೀತಿಯ ನೆರವನ್ನಾದರೂ
ನೀಡಲು ಅವರು ಸದಾ ಸಿದ್ದರಾಗಿರುತ್ತಾರೆ. ಭಿನ್ನ ಲಿಂಗದ ವ್ಯಕ್ತಿಯೊಬ್ಬರನ್ನು ಪ್ರೀತಿಸುವುದು
ಮಾತ್ರವಲ್ಲದೇ ಆ ವ್ಯಕ್ತಿಯನ್ನು ಆರಾಧ್ಯ ದೈವವನ್ನಾಗಿ ಮಾಡಿಕೊಳ್ಳುವ ಪ್ರವೃತ್ತಿ ತರುಣ-ತರುಣಿಯರಲ್ಲಿ
ಕಂಡುಬರುತ್ತದೆ.
- ಭಾವ ಪರಿಪಕ್ವತೆ: ಸಮಾಜ ಒಪ್ಪುವ ರೀತಿಯಲ್ಲಿ, ಸಮಯ ಸಂದರ್ಭಗಳನ್ನರಿತು
ತಮ್ಮ ಭಾವೋದ್ವೇಗಗಳನ್ನು ವ್ಯಕ್ತಪಡಿಸಲು ಸಮರ್ಪಕರಾದವರನ್ನು ಭಾವ ಪರಿಪಕ್ವರು ಎಂದು ಪರಿಗಣಿಸಬಹುದು.
ಇವರು ತಮ್ಮ ಭಾವನೆಗಳ ಮೇಲೆ ಹಿಡಿತ ಸಾಧಿಸಿರುತ್ತಾರೆ. ಭಾವೋದ್ವೇಗಗಳನ್ನು ಶಮನಗೊಳಿಸಲು ಪ್ರಾರ್ಥನೆ,
ವ್ಯಾಯಾಮ, ಯೋಗ ಶಿಕ್ಷಣ, ಕ್ರೀಡೆ, ಶಿಸ್ತಿನ ಜೀವನ, ಏಕಾಗ್ರತೆ ಹೆಚ್ಚಿಸುವುದು, ತಮ್ಮ ಭಾವನೆಗಳನ್ನು
ಇತರರ ಮುಂದೆ ವ್ಯಕ್ತಪಡಿಸಲು ಅವಕಾಶ ನೀಡುವುದು ಮುಂತಾದ ಚಟುವಟಿಕೆಗಳ ಮೂಲಕ ಪ್ರಯತ್ನಿಸಬಹುದು.
ಭಾವನೆಗಳ ನಿಯಂತ್ರಣವನ್ನು ತರುಣ-ತರುಣಿಯರಲ್ಲಿ ಮೂಡಿಸಬೇಕಾದರೆ
ಅವರಲ್ಲಿ ಆತ್ಮ ವಿಶ್ವಾಸ, ತಾಳ್ಮೆ, ಸಹಕಾರ, ಜವಾಬ್ದಾರಿಯ ಮನೋಭಾವ ಬೆಳೆಸಬೇಕು. ಕಲೆ, ವಾಸ್ತು ಶಿಲ್ಪ,
ಚಿತ್ರ ರಚನೆ, ಮಾದರಿಗಳ ನಿರ್ಮಾಣ, ಚಿತ್ರಕಲೆ ಮುಂತಾದ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ಅವರನ್ನು ತೊಡಗಿಸಬೇಕು.
ಇವರ ಸಾಹಸ ಪ್ರವೃತ್ತಿಯನ್ನು ತಣಿಸಲು ಶಾಲಾ-ಕಾಲೇಜುಗಳಲ್ಲಿ ಎನ್.ಸಿ. ಸಿ,, ಎನ್.ಎಸ್.ಎಸ್., ಸ್ಕೌಟ್
ಮತ್ತು ಗೈಡ್ಸ್, ಪರ್ವತಾರೋಹಣ, ಸೈಕ್ಲೀಂಗ್, ಟ್ರೆಕ್ಕಿಂಗ್ ಮುಂತಾದ ಚಟುವಟಿಕೆಗಳಲ್ಲಿ ತೊಡಗಿಸಬೇಕು.
ನೈತಿಕ ವಿಕಾಸ:
ಸಮಾಜದ ನಿರೀಕ್ಷೆಗಳಿಗೆ ಅನುಗುಣವಾಗಿ ಹದಿಹರೆಯದವರು
ತಮ್ಮ ಮನೋಭಾವಗಳು ಮತ್ತು ನಡತೆಯನ್ನು ರೂಪಿಸಿದೊಳ್ಳಬೇಕಾದುದು ಅವಶ್ಯಕ. ಬಾಲ್ಯದಲ್ಲಿ ಬೆಳೆಸಿಕೊಂಡಿದ್ದ
ನೈತಿಕ ಪರಿಕಲ್ಪನೆಗಳ ಸರಿ ತಪ್ಪು ಗಳನ್ನು ಈ ಹಂತದಲ್ಲಿ ಸ್ವಯಂ ವಿವೇಚಿಸಿ, ಅನಂತರ ತಮ್ಮದೇ ಆದ ನೈತಿಕ
ಸೂತ್ರಗಳನ್ನು ರೂಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ತರುಣ-ತರುಣಿಯರು ತಮ್ಮ ನೈತಿಕ ನಂಬಿಕೆಗಳಿಗೆ
ಅನುಗುಣವಾಗಿ ವರ್ತಿಸುತ್ತಾರೆ.
ಈ ಹಂತದಲ್ಲಿ
ಹದಿಹರೆಯದವರಲ್ಲಿ ಬೆಳವಣಿಗೆಯಾಗುವ ಅಂತಃ ಪ್ರಜ್ಞೆ ವ್ಯಕ್ತಿಯ ವರ್ತನೆಯನ್ನು ನಿಯಂತ್ರಿಸುತ್ತದೆ.
ಅಂತಃ ಪ್ರಜ್ಞೆಯು ಆಂತರಿಕ ನಿರ್ಣಯ ಶಕ್ತಿ, ಸಾಮಾಜಿಕ ನಿರೀಕ್ಷೆ, ಮನ್ನಣೆ ಮತ್ತು ನಿರಾಕರಣೆಗಳು ಅದರ
ಬೆಳವಣಿಗೆಗೆ ಬೇಕಾದ ಅಭಿಪ್ರೇರಣೆ ಉಂಟುಮಾಡುತ್ತದೆ. ತನ್ನ ವರ್ತನೆ, ಸಮಾಜದ ನಿರೀಕ್ಷೆಗೆ ಅನುಗುಣವಾಗಿಲ್ಲವೆಂಬ
ಅರಿವು ಮೂಡಿದಾಗ ವ್ಯಕ್ತಿಯಲ್ಲಿ ದೋಷ ಪ್ರಜ್ಞೆ ಉಂಟಾಗುತ್ತದೆ. ಅದರಂತೆಯೇ ತನ್ನ ವರ್ತನೆಯ ಬಗ್ಗೆ
ಇತರರಲ್ಲಿ ಉಂಟಾಗುವ ಅಹಿತ ಭಾವನೆಯ ಪರಿವೆ ಬಂದಾಗ ಅವನಲ್ಲಿ ನಾಚಿಕೆ ಭಾವವುಂಟಾಗುತ್ತದೆ. ಈ ದೋಷಪ್ರಜ್ಞೆ
ಮತ್ತು ನಾಚಿಕೆ ಭಾವಗಳೆರಡೂ, ಅಂತಃ ಪ್ರಜ್ಞೆಯಲ್ಲಿ ಅಂತರ್ಗತವಾಗಿದ್ದು ವ್ಯಕ್ತಿಯ ವರ್ತನೆಯನ್ನು ನಿಯಂತ್ರಿಸುತ್ತವೆ.
ನಿರಂತರ ಮಾರ್ಗದರ್ಶನ, ಮೇಲ್ವಿಚಾರಣೆ, ಶಿಕ್ಷೆಯ ಭಯ
ಇಂತಹ ಪ್ರೇರಕಗಳು ಇಲ್ಲದೇ ಇದ್ದಾಗ, ಸಮೂಹ ನಿರೀಕ್ಷೆಯನ್ನು ಸ್ವತಃ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕಂತೆ
ತನ್ನ ವರ್ತನೆಯನ್ನುರೂಪಿಸಿಕೊಳ್ಳಲು ವ್ಯಕ್ತಿ ತಾರುಣ್ಯದಲ್ಲಿ ಕಲಿಯುತ್ತಾನೆ. ಸಾರ್ವತ್ರಿಕ, ನೈತಿಕ
ತತ್ವಗಳನ್ನು ಆಧರಿಸಿ ವರ್ತನೆಯ ಮಾರ್ಗದರ್ಶನ ಮಾಡಬಲ್ಲ ನೀತಿ ಸಂಹಿತೆಯ ನಿರ್ಮಾಣ ಕೂಡ ಈ ಹಂತದಲ್ಲಿ
ಆಗುತ್ತದೆ. ವೈಯಕ್ತಿಕ ನೀತಿ ಸಂಹಿತೆಗೆ ಅನುಗುಣವಾಗಿ ತನ್ನ ವರ್ತನೆಯನ್ನು ತಾನೇ ನಿಯಂತ್ರಿಸಿಕೊಳ್ಳಲು
ವ್ಯಕ್ತಿ ತಾರುಣ್ಯದಲ್ಲಿ ಕಲಿಯುತ್ತಾನೆ.
ಹದಿಹರೆಯದವರ ಮೇಲೆ ನಗರೀಕರಣ
ಮತ್ತು ಆರ್ಥಿಕ ಬದಲಾವಣೆಯ ಪ್ರಭಾವ
ಧನಾತ್ಮಕ ಅಂಶಗಳು:
- ಹದಿಹರೆಯದವರು
ತಮ್ಮ ಸುತ್ತಮುತ್ತಲಿನ ಪರಿಸರದ ಬಗ್ಗೆ ಹೆಚ್ಚಿನ ಅರಿವನ್ನು ಹೊಂದಿರುವರು ಮತ್ತು ತಾಂತ್ತಿಕ
ಬೆಳವಣಿಗೆಯ ಕಾರಣದಿಂದ ಹೊರ ಪ್ರಪಂಚದೊಡನೆ ಸಂಪರ್ಕವನ್ನು ಹೊಂದಿರುವರು.
- ಅತ್ಯುತ್ತಮ
ವರ್ದಿತ ಶಿಕ್ಷಣವ್ಯವಸ್ಥೆಯ ದೊರೆಯುವಿಕೆಯು ಹದಿಹರೆಯದವರಲ್ಲಿ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಿದೆ.
- ಪಟ್ಟಣ
ಪ್ರದೇಶಗಳಲ್ಲಿ ಪೋಷಕರು ಬಹು ಅವಕಾಶಗಳ ಕಾರಣದಿಂದ ಹೆಚ್ಚಿನ ಆದಾಯವನ್ನು ಗಳಿಸುತ್ತಿದ್ದಾರೆ.
ಇದರಿಂದ ಹದಿಹರೆಯದವರು ಉತ್ತಮ ಜೀವನ ನಡೆಸಲು ಸಹಾಯಕವಾಗಿದೆ. ಸರಾಸರಿ ಪಟ್ಟಣ ಪ್ರದೇಶಗಳಲ್ಲಿ
ಅಪೌಷ್ಟಿಕತೆಯು ಅಸಮಾನ್ಯವಾಗಿದೆ.
- ಪಟ್ಟಣದಲ್ಲಿಯ
ಹದಿಹರೆಯದವರು ಸಂಬಂಧಿತ ಹಣಕಾಸು ಅನುಕೂಲದಿಂದ ಹೆಚ್ಚಿನ ಸ್ವಾತಂತ್ರ್ಯವನ್ನು ಸಂತೋಷದಿಂದ ಅನುಭವಿಸುತ್ತಿದ್ದಾರೆ.
ಪಟ್ಟಣ ಪ್ರದೇಶದಲ್ಲಿ ಜೀತಪದ್ದತಿಯು ಇತಿಮಿತಿಯಲ್ಲಿರುವುದು ಕಾಣಬಹುದು.
- ನಗರೀಕರಣವು
ಹದಿಹರೆಯದವರ ಮೇಲೆ ಪರೋಕ್ಷವಾಗಿ ಪರಿಣಾಮ ಬೀರಿದೆ.
ಪಟ್ಟಣ ಪ್ರದೇಶಕ್ಕೆ ವಲಸೆ ಹೋದವರು ಕಳಿಸಿದ ಹಣದ ಸಹಾಯದಿಂದ ಗ್ರಾಮೀಣ ಪ್ರದೇಶದಲ್ಲಿಯ
ಹದಿದರೆಯದವರ ಕುಟುಂಬದವರ ಆರ್ಥಿಕ ಪರಿಸ್ಥಿತಿ ಸುಧಾರಿಸಿ ಹತ್ತಿರದ ಶಾಲೆಗಳಿಗೆ ದಾಖಲಾಗಲು ಸಹಾಯಕವಾಗಿದೆ.
ಋಣಾತ್ಮಕ ಅಂಶಗಳು:
- ಹೊಸ
ಯಂತ್ರೋಪಕರಣಗಳು ಹದಿಹರೆಯದವರನ್ನು ನೈಜ ಪ್ರಪಂಚದಿಂದ ಪ್ರತ್ಯೇಕಿಸಲ್ಪಟ್ಟಿದೆ. ವಾಸ್ತವ ಪ್ರಪಂಚಕ್ಕೆ
ಹೊಂದಿಕೊಳ್ಳುವಂತೆ ಮಾಡಿದೆ.
- ಪಟ್ಟಣ
ಪ್ರದೇಶದಲ್ಲಿ ಸಿಗುವ ಶೀಘ್ರ ತಯಾರಿ ಆಹಾರದ ಬಳಕೆಯು ಅತಿ ಹೆಚ್ಚಾದ ಪರಿಣಾಮವಾಗಿ ಜನರಲ್ಲಿ ಬೊಜ್ಜಿನ
ಸಮಸ್ಯೆ ತಲೆದೋರಿದೆ.
- ನಗರ
ಪ್ರದೇಶದಲ್ಲಿನ ಕೊಳಚೆ ಪ್ರದೇಶಗಳು ಹದಿಹರೆಯದವರ ಆರೋಗ್ಯಕರ ಮಾನಸಿಕ ಬೆಳವಣಿಗೆಗೆ ಮಾರಕವಾಗಿದೆ.
- ಇತ್ತೀಚಿನ
ದಿನಗಳಲ್ಲಿ ನಗರೀಕರಣವು ಪರಿಸರ ಸ್ನೇಹಿಯಾಗಿ ಉಳಿದಿಲ್ಲ, ಮಹಾ ನಗರ ಪಾಲಿಕೆ ನಗರಗಳಲ್ಲಿ ಮಾಲಿನ್ಯದ
ಪ್ರಮಾಣ ಅತೀ ಹೆಚ್ಚಾಗಿದೆ ಇದು ಹದಿಹರೆಯದವರ ಆರೋಗ್ಯದ ಮೇಲೆ ಅತ್ಯಂತ ಕೆಟ್ಟ ಪರಿಣಾಮವನ್ನುಂಟು
ಮಾಡಿದೆ.
- ಮಾದಕ
ವಸ್ತುಗಳ ಸೇವನೆಯು ನಗರ ಪ್ರದೇಶದಲ್ಲಿನ ತರುಣ- ತರುಣಿಯರಲ್ಲಿ ಸಾಮಾನ್ಯವಾಗಿದೆ. ವೈಯಕ್ತಿಕ
ಕೇಂದ್ರೀಕೃತ ಮಾನಸಿಕ ಬೆಳವಣಿಗೆಯು ಇದಕ್ಕೆ ಮತ್ತೊಂದು ಕಾರಣವಾಗಿದೆ.
ತಾರುಣ್ಯಾವಸ್ಥೆಯ ವಿಕಾಸಾತ್ಮಕ
ಕಾರ್ಯಗಳು
Ø ತನ್ನ ಅಂಗ ಸೌಂದರ್ಯದ ಬಗ್ಗೆ ಸಂತುಷ್ಟಿಯಿಂದರಬೇಕಲ್ಲದೇ,
ತನ್ನ ಪಾಲಿಗೆ ಬಂದಿರುವ ಗಂಡು ಅಥವಾ ಹೆಣ್ಣಿನ ಪಾತ್ರವನ್ನು ಸಂತೋಷದಿಂದ ಸ್ವೀಕರಿಸುವುದು.
Ø ಎರಡೂ ಲಿಂಗಗಳು ಸಮ ವಯಸ್ಕರೊಡನೆ ಉಚಿತವೆನಿಸುವ
ಹೊಸ ಸಂಬಂಧವನ್ನು ಹೊಂದುವುದು.
Ø ತಂದೆ-ತಾಯಿಗಳು ಮತ್ತು ಇತರ ಹಿರಿಯರ ಭಾವ ಬಂಧನದಿಂದ
ಮುಕ್ತರಾಗುವುದು.
Ø ಆರ್ಥಿಕ ಸ್ವಾತಂತ್ರ್ಯದ ಭರವಸೆಯನ್ನು ಬೆಳೆಸುವುದು.
Ø ತನ್ನ ಶಕ್ತಿ ಸಾಸಮರ್ಥ್ಯಗಳು ಹಾಗೂ ಅಭಿಕ್ಷಮತೆಗಳಿಗೆ
ಅನುಗುಣವಾದ ವ್ಯಕ್ತಿಯೊಂದನ್ನು ಆಯ್ಕೆ ಮಾಡಿಕೊಂಡು ಅದಕ್ಕೆ ಸಿದ್ದತೆ ಮಾಡಿಕೊಳ್ಳುವುದು.
Ø ಯೋಗ್ಯ, ಸಮರ್ಥ ಪೌರನಾಗಲು ಅಗತ್ಯವಾದ ಬೌದ್ದಿಕ
ಕುಶಲತೆಗಳು ಮತ್ತು ಪರಿಕಲ್ಪನೆಗಳನ್ನು ಬೆಳೆಸಿದೊಳ್ಳುವುದು.
Ø ಸಾಮಾಜಿಕ ಜವಾಬ್ದಾರಿಗಳನ್ನು ಹೊರಲು ಇಚ್ಚಿಸುವುದು
ಮತ್ತು ಸಾಧಿಸುವುದು.
Ø ವಿವಾಹ ಅಥವಾ ಕುಟುಂಬ ಜೀವನಕ್ಕೆ ಸಿದ್ದತೆ ಮಾಡಿಕೊಳ್ಳುವುದು.
Ø ವೈಜ್ಞಾನಿಕ ಜಗತ್ತಿಗೆ ಜೀವನದ ರೀತಿ ನೀತಿಗಳಿಗೆ
ಸಾಕಷ್ಟು ಸುಸಂಗತವಾಗುವಂತಹ ಜೀವನ ಮೌಲ್ಯಗಳನ್ನು ರೂಢಿಸಿಕೊಳ್ಳುವುದು.
ಹ್ಯಾವಿಗ್ ಹರ್ಸ್ಟ ಗುರುತಿಸಿರುವ
ವಿಕಾಸಾತ್ಮಕ ಕಾರ್ಯಗಳು ಇಂತಿವೆ,
- ಅನ್ಯಲಿಂಗದ
ಸಮ ವಯಸ್ಕರೊಂದಿಗೆ ಪರಿಪಕ್ವವಾದ ಸಂಬಂಧವನ್ನು ಸಾಧಿಸಿಕೊಳ್ಳುವಿಕೆ.
- ಪುರುಷ
ಅಥವಾ ಮಹಿಳಾ ಸಾಮಾಜಿಕ ಪಾತ್ರ ನಿರ್ವಹಣೆ ಸಾಧಿಸುವಿಕೆ.
- ವ್ಯಕ್ತಿ
ತನ್ನ ದೈಹಿಕ ಸಾಮರ್ಥ್ಯವನ್ನು ಪರಿಣಾಮಕಾರಿಯಾಗಿ ಬಳಸುವಿಕೆ.
- ತಂದೆ
ತಾಯಿಗಳ ಹಾಗೂ ಇತರ ಹಿರಿಯರ ಭಾವನಾತ್ಮಕ ಸ್ವಾತಂತ್ರ್ಯವನ್ನು ಪಡೆದುಕೊಳ್ಳುವಿಕೆ.
- ಆರ್ಥಿಕ
ಸ್ವಾತಂತ್ರ್ಯದ ಭರವಸೆ.
- ವೃತ್ತಿ
ಆಯ್ಕೆ ಮಾಡಿಕೊಂಡು ಅದಕ್ಕಾಗಿ ಸಿದ್ದಗೊಳ್ಳುವಿಕೆ.
- ವಿವಾಹ
ಮತ್ತು ಕೌಟುಂಬಿಕ ಜೀವನದ ತಯಾರಿ.
- ಸಾಮಾಜಿಕ
ಹೊಣೆಗಾರಿಕೆಯ ವರ್ತನೆಯನ್ನುಬೆಳೆಸಿಕೊಳ್ಳುವಿಕೆ.
- ಪೌರದಕ್ಷತೆಗೆ
ಅವಶ್ಯಕವಾದ ಬೌದ್ದಿಕ ಕೌಶಲಗಳು ಮತ್ತು ಪರಿಕಲ್ಪನೆಗಳನ್ನು ಬೆಳೆಸುವುದು.
- ವರ್ತನೆಗೆ
ಮಾರ್ಗದರ್ಶಿಯಾಗುವ ನೈತಿಕ ಸಂಹಿತೆ ಹಾಗೂ ಮೌಲ್ಯಗಳನ್ನು ಸಂಪಾದಿಸುವುದು.
ü ಸಾಮಾಜಿಕ ಮತ್ತು ನಾಗರಿಕ ಆಚಾರಗಳನ್ನು ಮನ್ನಿಸುವುದು.
ü ತೃಪ್ತಿಕರವಾದ ಭೌತಿಕ ಜೀವನ ಸೌಲಭ್ಯಗಳನ್ನು
ಒದಗಿಸಿಕೊಂಡಿರುವುದು.
ವಿಕಾಸಾತ್ಮಕ
ಕಾರ್ಯಗಳ ಪ್ರಭುತ್ವ ಗಳಿಸಲು ಪ್ರಭಾವ ಬೀರುವ ಅಂಶಗಳು
- ಸಾಮಾನ್ಯ
ಅಥವಾ ತೀವ್ರತರವಾದ ವಿಕಾಸದ ಮಟ್ಟ.
- ವಿಕಾಸ
ಕ್ರಿಯೆಗಳನ್ನು ಕಲಿಯಲು ದೊರೆತ ಅವಕಾಶ ಮತ್ತು ಅವುಗಳ ಮೇಲೆ ಪ್ರಭುತ್ವ ಗಳಿಸಲು ದೊರೆತ ಮಾರ್ಗದರ್ಶನ
- ಅಭಿಪ್ರೇರಣೆ
- ಉತ್ತಮ
ಆರೋಗ್ಯ ಮತ್ತು ಯಾವುದೇ ದೈಹಿಕ ನ್ಯೂನ್ಯತೆಗಳಿಲ್ಲದಿರುವುದು.
- ಹೆಚ್ಚಿನ
ಮಟ್ಟದ ಬುದ್ದಿಶಕ್ತಿ ಮತ್ತು
- ಸೃಜನಶೀಲತೆ
ತಾರುಣ್ಯಾವಸ್ಥೆಯ
ಸಮಸ್ಯೆಗಳು
ಯಾವುದೇ ಒಬ್ಬ ವ್ಯಕ್ತಿಯ ಜೀವನದಲ್ಲಿ ಅತ್ಯಂತ ಸಮಸ್ಯೆಯಿಂದ
ಕೂಡಿದ ಅವಧಿಯೆಂದರೆ ತಾರುಣ್ಯ. ಬದಲಾದ ದೇಹದೊಡನೆ ಹೊ್ದಿಕೊಳ್ಳುವಲ್ಲಿ ತರುಣ ತರುಣಿಯರು ಸಮಸ್ಯೆಯನ್ನು
ಎದುರಿಸುತ್ತಿರುತ್ತಾರೆ. ತಮ್ಮ ದೇಹದಲ್ಲಿ ಆಗುತ್ತಿರುವ ಬದಲಾವಣೆಗೆ ಹೊಂದಿಕೊಳ್ಳಲು ಕಷ್ಟಪಡುತ್ತಾರೆ.
ಈ ಸಮಸ್ಯೆಗಳಿಗೆ ಮುಖ್ಯವಾಗಿ ಎರಡು ಕಾರಣಗಳಿವೆ.
- ತನ್ನ
ದೇಹದಲ್ಲಿ ʼಏನೇನು ಆಗುತ್ತಿದೆʼ ಎನ್ನುವ ಭಾವನೆ ಮೂಡಿ ಬಂದು ತಕ್ಕ ವಿವರಣೆ ಪಡೆಯುವಲ್ಲಿ ವಿಫಲರಾದಾಗ
ಅಂತರಂಗಕ್ಕೆ ಒಳಗಾಗುತ್ತಾನೆ. ಈ ಅವಧಿಯಲ್ಲಿ ಕಂಡು ಬರುವ ಋತುಸ್ರಾವ ಹಾಗೂ ಸ್ವಪಸ್ಖಲನಗಳು ತರುಣ
ತರುಣಿಯರಲ್ಲಿ ನಿರ್ದಿಷ್ಟ ದೇಹಾಕೃತಿ ಉಂಟಾಗುವಂತೆ ಮಾಡುತ್ತವೆ. ಇದರೊಡನೆ ದೇಹದ ಅಂಗಾಂಗಳು
ರೂಪುಗೊಳ್ಳುತ್ತಿರುವ ಬಗೆಯನ್ನು ಸಹ ಅವರು ಅರ್ಥ ಮಾಡಿಕೊಳ್ಳಲು ವಿಫಲರಾಗುತ್ತಾರೆ.
- ಈ
ಬದಲಾವಣೆಗೆ ಕಾರಣ ಹುಡುಕುವುದು ವ್ಯಕ್ತಿ ಸಹಜವಾದ ಕುತೂಹಲದಿಂದ ತರುಣ ತರುಣಿಯರು ತಮ್ಮ ದೇಹದಲ್ಲಿ
ಉಂಟಾಗುವ ಬದಲಾವಣೆಗೆ ಕಾರಣಗಳನ್ನು ಅರಸುತ್ತಾರೆ. ಎಲ್ಲ ವಿಚಾರಗಳು ಹೊಸ ಅನುಭವ ಮೂಡಿದ್ದರಿಂದ
ಹಿರಿಯರನ್ನು ನೇರವಾಗಿ ಕೇಳಲು ನಾಚಿಕೊಳ್ಳುತ್ತಾರೆ. ಇದರಿಂದ ಅವರಿಗೆ ನಿಜವಾದ ಕಾರಣಗಳು ತಿಳಿಯದೆ
ತಮ್ಮದೇ ಆದ ಊಹಾಪೋಹಗಳನ್ನು ಹೊಂದುತ್ತಾರೆ. ಅವರಲ್ಲಿ ತಮ್ಮ ದೈಹಿಕ ಬೆಳವಣಿಗೆಯನ್ನು ಸಮ ವಯಸ್ಕರೊಂದಿಗೆ
ಹೋಲಿಸಿ ನೋಡಿ ಕಾರಣವಿಲ್ಲದೆ ಆತಂಕಗಳಿಗೆ ತುತ್ತಾಗುತ್ತಾನೆ. ಈ ಅವಧಿಯಲ್ಲಿ ಗಂಡು ಮತ್ತು ಹೆಣ್ಣು
ಮಕ್ಕಳು ಸೌಂದರ್ಯದ ಬಗ್ಗೆ ಹೆಚ್ಚು ಚಿಂತಿಸುತ್ತಾರೆ. ಇವೆಲ್ಲವೂ ಸಮಸ್ಯೆಗಳಿಗೆ ಕಾರಣಗಳಾಗಿವೆ.
ತಾರುಣ್ಯಾವಸ್ಥೆಯ
ಮುಖ್ಯವಾದ ಕೆಲವು ಕಾರಣಗಳನ್ನು ಕಾಣಬಹುದು,
- ಹೆಚ್ಚಿನ
ಮಟ್ಟದ ಸ್ವಯಂಭಾವ (ಆತ್ಮ ಪ್ರಜ್ಞೆ):
ತಾರುಣ್ಯದಲ್ಲಿ ಆತ್ಮ ಪ್ರಜ್ಞೆಯು ಹೆಚ್ಚಿನ ಮಟ್ಟವನ್ನು ಮುಟ್ಟುತ್ತದೆ. ಈ ಅವಧಿಯಲ್ಲಿ ವ್ಯಕ್ತಿಗಳು
ಮನೆಯಲ್ಲಿ, ಸಮಾಜದಲ್ಲಿ ತಮ್ಮ ವ್ಯಕ್ತಿತ್ವಕ್ಕೆ ಹೆಚ್ಚಿನ ಸ್ಥಾನ ಪಡೆಯಲು ಪ್ರಯತ್ನಿಸುತ್ತಾನೆ. ಈ
ಅವಧಿಯಲ್ಲಿ ಆತ್ಮಪ್ರಶಂಸೆ ಮತ್ತು ವೈಯಕ್ತಿಕ ಅಭಿವೃದ್ದಿ ಹೊಂದಲು ಪ್ರಯತ್ತಿಸುತ್ತಾ, ಉತ್ತಮ ಬಟ್ಟೆಗಳನ್ನು
ಧರಿಸಿ ಪ್ರಾಪ್ತ ವಯಸ್ಕರು ಪಡೆಯುವ ಮನ್ನಣೆ ಪಡೆಯಬೇಕೆಂದು ಆಶಿಸುತ್ತಾರೆ. ತಮ್ಮ ಬಗ್ಗೆ ತಾವೇ ಹೆಚ್ಚು
ಸಾಮರ್ಥ್ಯವನ್ನು ಕಲ್ಪಿಸಿಕೊಂಡು ಸಮಾಜವು ತನ್ನ ನಿರೀಕ್ಷೆಗೆ ಅನುಗುಣವಾಗಿ ವರ್ತಿಸದಿದ್ದಾಗ ಉರಿದು
ಬೀಳುತ್ತಾರೆ. ಅವರ ಆತ್ಮದ ಮೇಲೆ ಬೀಳುವ ಅಪಘಾತವು ಸಮಸ್ಯೆಗಳನ್ನು ತಂದೊಡ್ಡುತ್ತದೆ. ಇದು ಹಲವಾರು
ಬಾರಿ ಕೋಪದಲ್ಲಿ ಪರ್ಯಾವಸಾನಗೊಳ್ಳುತ್ತದೆ.
- ಲೈಂಗಿಕ
ಪ್ರಜ್ಞೆ ಹೆಚ್ಚಳಿಕೆ/ಜಾಗೃತಿ: ಈ ಅವಧಿಯಲ್ಲಿ ಲೈಂಗಿಕ ಪ್ರಜ್ಞೆಯು ಅನೇಕ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಲಿಂಗವು ಗ್ರಂಥಿಗಳಿಂದ ಸ್ರವಿಸುವ, ಲೈಂಗಿಕ ಹಾರ್ಮೋನುಗಳು ಲೈಂಗಿಕ ಪ್ರಜ್ಞೆಯನ್ನು ಕೆರಳಿಸುತ್ತದೆ.
ಈ ಅವಧಿಯಲ್ಲಿ ನಡೆಯುವ ಸ್ವಾಭಾವಿಕ, ಲೈಂಗಿಕ ಕ್ರಿಯೆಗಳು ಮಕ್ಕಳನ್ನು ಅಘಾತಗೊಳಿಸುತ್ತವೆ. ಸ್ವಲ್ಪಕಾಲದ
ನಂತರ ವ್ಯಕ್ತಿಯು ಲೈಂಗಿಕ ತೃಪ್ತಿಯನ್ನು ಬಯಸುವುದೇ ಸಮಸ್ಯೆಯ ಮೂಲ ಕಾರಣವಾಗಿರುತ್ತದೆ. ಲೈಂಗಿಕ
ಸಂವೇಗಕ್ಕೆ ತಿರುಗುತ್ತದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ತರುಣರು ಲೈಂಗಿಕ ಅಪರಾಧಗಳಿಗೆ
ಬಲಿಯಾಗುತ್ತಾರೆ. ಈ ಅವಧಿಯಲ್ಲಿ ವಿರುದ್ದ ಲಿಂಗದ ವ್ಯಕ್ತಿಗಳ ಸೆಳೆತ ಪ್ರಬಲವಾಗಿ ಸಮಸ್ಯೆಗಳು
ಮೂರ್ಮಡಿಯಾಗಿ ಬೆಳೆಯಲ್ಪಡುತ್ತವೆ. ಪೋಷಕರೇ ಅಲ್ಲ ಯಾರೇ ಅಡ್ಡ ಬಂದರೂ ತಮ್ಮ ತೀರ್ಮಾನದಲ್ಲಿ
ವಿರೋಧವನ್ನು ವ್ಯಕ್ತಪಡಿಸುತ್ತಾರೆ. ಆದ್ದರಿಂದ ತಾರುಣ್ಯಾವಸ್ಥೆಯಲ್ಲಿ ಲೈಂಗಿಕ ಪ್ರಜ್ಞೆ ಹೆಚ್ಚಳಿಕೆಯು
ಅಸಂಬದ್ದ ಸಮಸ್ಯೆಯಾಗಿದೆ.
- ಆದರ್ಶ
ಹಾಗೂ ನೈಜತೆಯ ನಡುವಿನ ತಿಕ್ಕಾಟ: ವ್ಯಕ್ತಿಯು ಸಾಮಾನ್ಯವಾಗಿ ಹಲವಾರು ಆದರ್ಶಗಳನ್ನು ಈ ಅವಧಿಯಲ್ಲಿ
ಇಟ್ಟುಕೊಂಡು ಅದರಂತೆಯೇ ನಡೆಯುತ್ತಾನೆ. ಅವನ ಎಲ್ಲಾ ಆಲೋಚನೆಗಳೂ ಆದರ್ಶ ಸಮಾಜವನ್ನು ನಿರ್ಮಿಸುವುದೇ
ಆಗಿರುತ್ತದೆ. ಪ್ರತಿಯೊಂದು ವಿಷಯವನ್ನು ವಿಮರ್ಶಾತ್ಮಕವಾಗಿ ಗಮನಿಸಿ ಸದ್ಯದ ಪರಿಸ್ಥಿತಿಯಲ್ಲಿ
ಸುಧಾರಣೆ ಮಾಡಲು ಇಚ್ಚಿಸುತ್ತಾನೆ. ಸಲಹೆಗಳನ್ನು ಕೊಡಲು ಇಷ್ಟಪಡುತ್ತಾನೆ. ಆದರೆ ಈ ಸಂದರ್ಭದಲ್ಲಿ
ಆದರ್ಶವನ್ನು ಬೆನ್ನಟ್ಟಿ ಹೊರಟಿರುವ ತರುಣ ನೈಜತೆಯನ್ನು ಮರೆತು ಪೇಚಿಗೆ ಸಿಲುಕುತ್ತಾನೆ. ಆಕಾಶವನ್ನು
ಮುಟ್ಟಲು ಹೋಗಿ ಆಧಾರ ಕಳೆದುಕೊಂಡು ಪಾತಾಳಕ್ಕೆ ಸೇರುತ್ತಾನೆ. ಆಗ ಅನುಭವವಿಲ್ಲದೆ ವರ್ತಿಸುವುದರಿಂದ
ಆಶಾಭಂಗ ಉಂಟಾಗುತ್ತದೆ. ಆಗ ವ್ಯಕ್ತಿಯು ನಿರಾಶಾವಾದಿಯಾಗುತ್ತಾನೆ. ಇಲ್ಲವೇ ಹಗಲುಗನಸುಗಳನ್ನು
ಕಾಣುತ್ತಾ ಕಲ್ಪನಾ ರಾಜ್ಯದಲ್ಲಿ ವಿಹರಿಸುತ್ತಾ ಕಾಲ ಕಳೆದು ಮನಃ ಶಾಂತಿಯನ್ನು ಕಳೆದುಕೊಳ್ಳುತ್ತಾನೆ.
- ವ್ಯಕ್ತಿಯ
ವೃತ್ತಿಯ ಆಯ್ಕೆ ಮತ್ತು ಸ್ವಾವಲಂಬನೆಯ ಅಗತ್ಯ:
ಪ್ರತಿಯೊಬ್ಬ ತರುಣನು ಈ ಅವಧಿಯಲ್ಲಿ ಪ್ರಾಪ್ತ ವಯಸ್ಸಿನಲ್ಲಿ
ಯಾವ ಉದ್ಯೋಗವನ್ನು ಆರಿಸಿಕೊಳ್ಳಬೇಕೆಂಬುದನ್ನು ಚಿಂತಿಸುತ್ತಾನೆ. ಯಾವ ಕ್ಷೇತ್ರದಲ್ಲಿ ನಾನು ಯಶಸ್ವಿಯಾಗಿ
ಜೀವನ ನಡೆಸಬಲ್ಲೆ ಎನ್ನುವ ಆಲೋಚನೆ ಇವನ್ನು ಕಾಡುತ್ತದೆ. ಭವಿಷ್ಯದಲ್ಲಿ ಸಮಸ್ಯೆಗಳನ್ನು ಎದುರಿಸುವ
ಪರಿ ಇದ್ದರೂ ತಾನು ಎಷ್ಟರ ಮಟ್ಟಿಗೆ ಸ್ವಾವಲಂಬಿಯಾಗಿರಬಲ್ಲೆ ಎಂಬುದರ ಬಗ್ಗೆ ಆತನಿಗೆ ಸಂಶಯ ಇದ್ದೇ
ಇರುತ್ತದೆ. ತನ್ನ ಸಾಮರ್ಥ್ಯ, ಆಸಕ್ತಿ, ಅಭಿರುಚಿಗಳ ಬಗ್ಗೆ ಇರುವ ಅನಿಶ್ಚಿತತೆ ಅವನ್ನು ಮಾನಸಿಕ ಆಯಾಸಕ್ಕೆ
ಗುರಿಪಡಿಸುತ್ತದೆ. ಈ ಸಂದರ್ಭದಲ್ಲಿ ಅವನಿಗೆ ಸೂಕ್ತ ಮಾರ್ಗದರ್ಶನ ಅವಶ್ಯವಾಗಿರುತ್ತದೆ.
- ನಿರ್ನಾಳ
ಗ್ರಂಥಿಗಳ ಚಟುವಟಿಕೆಯ ಸಮಸ್ಯೆ: ತಾರುಣ್ಯಾವಸ್ಥೆಯಲ್ಲಿ ನಿರ್ನಾಳ ಗ್ರಂಥಿಗಳು ಸಕ್ರಿಯವಾಗಿ
ಕಾರ್ಯನಿರ್ವಹಿಸುವುದರಿಂದ ದೈಹಿಕ ಮತ್ತು ಮಾನಸಿಕ ವರ್ತನೆಯಲ್ಲಿ ಬದಲಾವಣೆ ತರುತ್ತದೆ. ಉದಾ:
ತರುಣರಲ್ಲಿ ಗಡ್ಡ-ಮೀಸೆ ಬೆಳೆಯದಿದ್ದಲ್ಲಿ, ಯುವತಿಯರಲ್ಲಿ ಸ್ಥನ ವೃದ್ದಿಯಾಗದಿದ್ದರೆ, ಋತುಸ್ರಾವ
ಕಾಣದಿದ್ದರೆ, ಸಹಜವಾಗಿ ಅವರಲ್ಲಿ ಭಯ, ಕುತೂಹಲ ಉಂಟಾಗುತ್ತದೆ. ಕೆಲವು ಬಾರಿ ಜಿಗುಪ್ಸೆಗೆ ಒಳಗಾಗಿ
ಮಾನಸಿಕ ಸಮತೋಲನ ತಪ್ಪುವ ಸಂದರ್ಭಗಳು ಉಂಟು.
- ರಕ್ಷಣಾ
ಸಮಸ್ಯೆ: ತರುಣ-ತರುಣಿಯರು ಹಿರಿಯರ ಆಶ್ರಯದಿಂದ ಬೇರೆಯಾಗಿ ಬೆಳೆಯುವ ಬಯಕೆಯನ್ನು ಹೊಂದಿದ್ದರೂ,
ಯಾರಾದರೂ ತಮ್ಮ ಬಗ್ಗೆ ಅನುಚಿತವಾಗಿ ವರ್ತಿಸಬಹುದೆಂಬ ಭಯ ಅವರನ್ನು ಕಾಡುತ್ತಿರುತ್ತದೆ. ಆಗ
ಒಬ್ಬಂಟಿಗರಾಗಿ ಬಹುದೂರ ಉಳಿಯಲು ಹಿಂಜರಿಯುತ್ತಾರೆ. ತಮ್ಮನ್ನು ಹಿರಿಯರು ಹೆಚ್ಚು ಪ್ರೀತಿಸಬೇಕೆಂದು
ಬಯಸುತ್ತಾರೆ.
- ವೈಯಕ್ತಿಕ
ಭಿನ್ನತೆಯ ಸಮಸ್ಯೆ: ವ್ಯಕ್ತಿ ಭಿನ್ನತೆ ಸಹಜವಾದ ಗುಣ. ವೈಯಕ್ತಿಕ ಭಿನ್ನತೆಗಳು ತಮ್ಮ ಸಮವಯಸ್ಕರಲ್ಲಿಯೂ,
ಸಮವಾಗಿದ್ದರೆ ಯಾವುದೇ ಆತಂಕ ಇರುವುದಿಲ್ಲ. ಆದರೆ ವಿಕಾರ ದೇಹ, ಅಂಗಾಂಗಗಳ ಅಸಮರ್ಪಕ ಬೆಳವಣಿಗೆ,
ಚರ್ಮದ ಅಸಹಜತೆ, ಬೌದ್ದಿಕ ವ್ಯತ್ಯಾಸಗಳು ಯುವಕ-ಯುವತಿಯರಲ್ಲಿ ಸಮಸ್ಯೆಯನ್ನುಂಟುಮಾಡುತ್ತವೆ.
ಅಂತಹ ಸಂದರ್ಭದಲ್ಲಿ ಆತ್ಮಹತ್ಯೆಗೆ ಕೈ ಹಾಕುವ ಸಂಭವವೂ ಇರುತ್ತದೆ.
- ಸಾಹಸ
ಪ್ರವೃತ್ತಿ ಸಮಸ್ಯೆ: ತರುಣ-ತರುಣಿಯರು ಸಮಾಜದ ಗಮನ ಸೆಳೆಯಲು ಎಂತಹ ಸಾಹಸಕ್ಕಾದರೂ ಕೈ ಹಾಕುವ
ಸಂಭವ ಇರುತ್ತದೆ. ಮುಂದೆ ಆಗಬಹುದಾದ ತೊಂದರೆಗಳ
ಪರಿವೇ ಇರುವುದಿಲ್ಲ.
ತಾರುಣ್ಯಾವಸ್ಥೆಯ
ಸಮಸ್ಯೆಗಳನ್ನು ಪರಿಹರಿಸುವಲ್ಲಿ ಶಾಲೆ, ಕುಟುಂಬ ಹಾಗೂ ಸಮುದಾಯದ ಪಾತ್ರ
ವ್ಯಕ್ತಿ
ನಿರ್ಮಾಣವು ಒಂದು ಕ್ಲಿಷ್ಟಕರವಾದ ಸಂಗತಿ, ಇದರಲ್ಲಿ ಸಮಾಜದ ಎಲ್ಲಾ ಘಟಕಗಳ ಸಹಕಾರದೊಂದಿಗೆ ವರ್ತಿಸಬೇಕು.
ಅದರಲ್ಲೂ ಮನೆ, ಶಾಲೆ ಮತ್ತು ಸಮುದಾಯವು ಒಂದಕ್ಕೊಂದು ಹೊಂದಿಕೊಂಡು ವರ್ತಿಸಿದಾಗಲೇ ವ್ಯಕ್ತಿಯ ಸರ್ವಾಂಗಿಣ
ಬೆಳವಣಿಗೆಯು ಸಾದ್ಯ. ಈ ಸಹಕಾರದಿಂದ ಕೂಡಿದ ಪ್ರಯತ್ನದಲ್ಲಿ ಈ ಕೆಳಕಂಡ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
1. ಮನಃಶಸ್ತ್ರದ ಸ್ಪಷ್ಟ ಅರಿವು ಇರಬೇಕು: ಶಿಕ್ಷಣದ
ಗುರಿಗಳನ್ನು ರೂಪಿಸಲು ಯಾವ ಯೋಜನೆ ಕೈಗೊಳ್ಳಬೇಕು, ಎಂಬ ಸಮಸ್ಯೆಗಳ ಅರಿವು ಶಿಕ್ಷಕ, ತಂದೆ ತಾಯಿ ಹಾಗೂ
ಸಮಾಜದ ಪ್ರಮುಖರಿಗೆ ಇರಬೇಕು. ಇವರು ತಾರುಣ್ಯದ ಬಗ್ಗೆ ವ್ಯವಸ್ಥಿತ ಮನೋವೈಜ್ಞಾನಿಕ ಜ್ಞಾನವನ್ನು ಪಡೆದಿರಬೇಕು.
ತಾರುಣ್ಯದ ಅಗತ್ಯತೆಗಳೇನು? ತಾರುಣ್ಯದಲ್ಲಿ ಕಂಡುಬರುವ ಬದಲಾವಣೆಗಳೇನು? ತರುಣ-ತರುಣಿಯರ ಮುಖ್ಯ ಸಮಸ್ಯೆಗಳೇನು?
ಇವುಗಳನ್ನು ಹೇಗೆ ಎದುರಿಸಬೇಕು? ಮುಂತಾದ ಪ್ರಶ್ನೆಗಳು ಎದುರಿಸಬೇಕಾದ ತರುಣರು ಮನೋವಿಜ್ಞಾನವನ್ನು
ಅಧ್ಯಯನ ಮಾಡಬೇಕು. ಅನಂತರ ಅವರಿಗೆ ಮಾರ್ಗದರ್ಶನ ನೀಡಬೇಕು.
2. ವ್ಯಕ್ತಿ ವಿಕಾಸಕ್ಕೆ ಉತ್ತಮ ಸನ್ನಿವೇಶವನ್ನು
ರೂಪಿಸುವುದು: ಮನೆ, ಶಾಲೆ ಮತ್ತು ಸಮಾಜ ವ್ಯಕ್ತಿಯ ಉತ್ತಮ ಬೆಳವಣಿಗೆಗೆ ಉತ್ತಮ ವಾತಾವರಣವನ್ನು ಕಲ್ಪಿಸಿಕೊಡಬೇಕು.
ಮಕ್ಕಳಿಗೆ ಒಳ್ಳೆಯ ಪೋಷಣೆ, ಪಾಲನೆ, ತೃಪ್ತಿಕರ ವರ್ತನೆಗಳು ಅಂದರೆ ಒಳ್ಳೆಯ ಆಹಾರ, ಪ್ರೀತಿ, ವಾತ್ಸಲ್ಯಗಳ
ಉತ್ತಮ ಸನ್ನಿವೇಶ ಇವುಗಳನ್ನು ಅವರಿಗೆ ಒದಗಿಸಿಕೊಡಬೇಕು.
3. ಲೈಂಗಿಕ ಶಿಕ್ಞಣ: ತಾರುಣ್ಯದ ಪ್ರಬಲ ಸಮಸ್ಯೆ
ಎಂದರೆ ಲೈಂಗಿಕ ಸಮಸ್ಯೆ. ಲೈಂಗಿಕ ಪ್ರವೃತ್ತಿಗಳು ಈ ವೇಳೆಯಲ್ಲಿ ಹೆಚ್ಚು ಸಕ್ರಿಯವಾದವುಗಳಾಗುವುದರಿಂದ
ದೇಹದಲ್ಲಾಗುವ ಬದಲಾವಣೆಗಳು ಗುಪ್ತ ಲೈಂಗಿಕ ಪ್ರವೃತ್ತಿಗಳ ಬಗ್ಗೆ ಮಕ್ಕಳಲ್ಲಿ ಸರಿಯಾದ ಅರಿವನ್ನು
ಮೂಡಿಸಲು ಲೈಂಗಿಕ ಶಿಕ್ಞಣವನ್ನು ಶಾಲೆಯಲ್ಲಿ ಕಡ್ಡಾಯಗೊಳಿಸಬೇಕು. ವ್ಯವಸ್ಥಿತ ಲೈಂಗಿಕ ಶಿಕ್ಷಣ ಕೊಡುವುದರಿಂದ
ಬದಲಾದ ದೇಹಕ್ಕೂ ತೃಪ್ತಿ ತಂದುಕೊಡುತ್ತದೆ. ಇದರಿಂದ ಲೈಂಗಿಕ ಕುತೂಹಲವನ್ನು ತಣಿಸಬಹುದು. ಲೈಂಗಿಕ
ಪ್ರವೃತ್ತಿಗಳಗೆ ಧಾರ್ಮಿಕ ಲೇಪನ ಹಚ್ಚದೆ ವೈಜ್ಞಾನಿಕ ನಿಲುವಿನಲ್ಲಿ ಯುವ ಪೀಳಿಗೆಗೆ ಸೂಕ್ತ ಮಾರ್ಗದರ್ಶನದ
ಮೂಲಕ ಧೈರ್ಯ ತುಂಬಬೇಕು.
4. ತರುಣ ತರುಣಿಯ ಆಸಕ್ತಿಗಳಿಗೆ ಗಮನ ನೀಡುವುದು:
ಕುಟುಂಬ, ಶಾಲೆ ಮತ್ತು ಸಮಾಜದ ತರುಣ ಪೀಳಿಗೆಯ ಆಸಕ್ತಿಗಳ ಕಡೆ ಗಮನವಹಿಸಬೇಕು. ಅವರ ಆಸಕ್ತಿಯ ವಿಷಯ
ಗುರುತಿಸಿ ಅವುಗಳ ಬೆಳವಣಿಗೆಗೆ ಉತ್ತಮ ಏರ್ಪಾಡು ಮಾಡಬೇಕು. ವಿವಿಧ ಸಮಾಜ ಕಾರ್ಯಗಳಲ್ಲಿ, ಸಾಹಸ ಕಾರ್ಯಗಳಲ್ಲಿ
ಮತ್ತು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳಬೇಕು.
5. ಸ್ವಯಂ ಶಿಸ್ತನ್ನುಂಟುಮಾಡಬೇಕು: ಇತ್ತಿಚೆಗೆ
ಯುವಕರಲ್ಲಿ ಅಶಿಸ್ತು, ಅಶಾಂತಿ, ಎದ್ದು ಕಾಣುತ್ತಿದೆ. ಅದನ್ನು ಹೋಗಲಾಡಿಸಲು ಧಾರ್ಮಿಕ ಮತ್ತು ನೈತಿಕ
ಶಿಕ್ಷಣವನ್ನು ಕೊಡಬೇಕು. ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಸ್ವಯಂಶಿಸ್ತು ಉಂಟಾಗುವ ಪರಿಸರವನ್ನು
ನಿರ್ಮಿಸಬೇಕು.
6. ತರುಣ-ತರುಣಿಯರನ್ನು ಗೌರವದಿಂದ ನಡೆಸಿಕೊಳ್ಳಬೇಕು,
ಟೀಕಿಸಬಾರದು, ದಂಡ ಪ್ರಯೋಗ ಸಲ್ಲದು.
7. ಸಂವೇಗಗಳ ತರಬೇತಿ ಹಾಗೂ ಸಂವೇಗಾತ್ಮಕ ಅಗತ್ಯಗಳನ್ನು
ಪೂರೈಸುವಂತೆ ಮಾಡಬೇಕು. ಅಹಿತಕರ ಸಂವೇಗಗಳನ್ನು ತಡೆಗಟ್ಟಿ ಹಿತಕರ ಸಂವೇಗಗಳನ್ನು ಬೆಳೆಸಿಕೊಳ್ಳುವಂತೆ
ಮಾರ್ಗದರ್ಶನ ಮಾಡಬೇಕು.
8. ತರುಣ-ತರುಣಿಯರ ವಿಶೇಷ ಆಸಕ್ತಿಗಳ ಬಗ್ಗೆ ಹೆಚ್ಚಿನ
ಗಮನ ಕೊಡುವುದು. ಕೆಟ್ಟ ಹವ್ಯಾಸಗಳಿಗೆ ಎಡೆ ಮಾಡಿಕೊಡಬಾರದು. ಒಳ್ಳೆಯ ಚಟುವಟಿಕೆಗಳನ್ನು ಒದಗಿಸಿಕೊಡಬೇಕು.
9. ಜೀವನದ ರೀತಿ-ನೀತಿಗಳನ್ನು ತಿಳಿಸಿ ಭವಿಷ್ಯತ್ತಿನ
ಜೀವನಕ್ಕೆ ಬುನಾದಿ ಹಾಕಬೇಕು.
10. ವೃತ್ತಿಪರ ಶಿಕ್ಷಣಕ್ಕೆ ಅವಕಾಶ ಮಾಡಿಕೊಡಬೇಕು.
ಮಾರ್ಗದರ್ಶನ ಸೌಲಭ್ಯಗಳನ್ನು ಒದಗಿಸಿಕೊಡಬೇಕು.
ಹೀಗೆ ಯೌವನಾವಸ್ಥೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ
ಶಾಲೆ, ಕುಟುಂಬ ಮತ್ತು ಸಮುದಾಯ ಉತ್ತಮ ಪಾತ್ರವನ್ನು ವಹಿಸಬೇಕು.
Comments
Post a Comment