ಮಾನಸಿಕ ಆರೋಗ್ಯ & ವ್ಯಕ್ತಿತ್ವ
ಮಾನಸಿಕ
ಆರೋಗ್ಯ
ವ್ಯಕ್ತಿಗಳು ಬಾಹ್ಯ ಜಗತ್ತಿನೊಂದಿಗೆ ಉತ್ತಮ ಸಂಯೋಜನೆ
ಹೊಂದುವಂತಹ ಸ್ಥಿತಿಯೇ ಮಾನಸಿಕ ಆರೋಗ್ಯ. ಮಾನಸಿಕ ಆರೋಗ್ಯವು ಮನಸ್ಸು ಅಥವಾ ಬುದ್ಧಿಗೆ ಸಂಬಂಧಿಸಿದ್ದು.
ಉತ್ತಮ ಮಾನಸಿಕ ಆರೋಗ್ಯ ಹೊಂದಿರುವ ವ್ಯಕ್ತಿ ಸಂತುಷ್ಟನಾಗಿರುತ್ತಾನೆ ಹಾಗೂ ಸಂತೃಪ್ತ ಜೀವನ ಸಾಗಿಸುತ್ತಾನೆ.
ಮಾನಸಿಕ ಆರೋಗ್ಯವಂತನು ಬದಲಾದ ಪರಿಸರಕ್ಕೆ ತಕ್ಕಂತೆ ತನ್ನ ವರ್ತನೆಯಲ್ಲಿಯೂ ಬದಲಾವಣೆಗಳನ್ನು ಮಾಡಿದೊಳ್ಳುತ್ತಾನೆ.
ವ್ಯಕ್ತಿ ತನ್ನನ್ನು ತಾನೇ ಅರಿತು ಜೀವನದ ವಿವಿಧ ಚಟುವಟಿಕೆಗಳನ್ನು ನಿರ್ವಹಿಸುತ್ತಾ ಪರಿಸರಕ್ಕೆ ತಕ್ಕಂತೆ
ಮನೋವ್ಯಾಪಾರ ಅಥವಾ ಮನಸ್ಥಿತಿಯನ್ನು ಬದಲಾಯಿಸಿಕೊಂಡು ತನ್ನನ್ನು ತಾನೇ ಸಮಾಜಕ್ಕೆ ಹೊಂದಿಕೊಳ್ಳುವಂತಹ
ಒಂದು ಮಾನಸಿಕ ಹೊಂದಾಣಿಕೆಯೇ ಮಾನಸಿಕ ಆರೋಗ್ಯ ಎನ್ನಬಹುದು.
ಅರ್ಥ:
“ವೈಯಕ್ತಿಕ ಹಾಗೂ ಸಾಮಾಜಿಕ ಹೊಂದಾಣಿಕೆಗಳನ್ನು ಮಾಡಿಕೊಳ್ಳುವ
ವೈಕ್ತಿಯ ಸಾಮರ್ಥ್ಯವೇ ಮಾನಸಿಕ ಆರೋಗ್ಯ”.
“ದ್ಯಹಿಕ ಮತ್ತು ಮಾನಸಿಕ ಸಮತೋಲನ
ಸ್ಥಿತಿಯೇ ಮಾನಸಿಕ ಆರೊಗ್ಯ”.
“ವ್ಯಕ್ತಿತ್ವದ ಸಮಗ್ರತೆ,
ದೃಢತೆ, ಪ್ರಾಮಾಣಿಕತೆ ಮುಂತಾದ ವಿವಿಧ ಲಕ್ಷಣಗಳೊಳಗೊಂಡ ಸುಸ್ಥಿಯೇ ಮಾನಸಿಕ ಆರೊಗ್ಯ.”
ವ್ಯಾಖ್ಯಾನಗಳು:
ಹ್ಯಾಡ್ ಫಿಲ್ಡ್ ಎಂಬುವರ ಪ್ರಕಾರ “ಪರಿಪೂರ್ಣ ಹಾಗೂ ಸಾರ್ಥಕ ರೀತಿಯಲ್ಲಿ ಕಾರ್ಯನಿರ್ವಹಿಸುವ
ವ್ಯಕ್ತಿಯ ಸಮಗ್ರ ವ್ಯಕ್ತಿತ್ವವೇ ಮಾನಸಿಕ ಆರೋಗ್ಯ” ಎಂದಿದ್ದಾರೆ.
ನೋರ‍್ಯಾ.ಈ. ತಟ್ಸ್ ರವರು “ಪರಿಸರದಲ್ಲಿ ಬರುವಂತಹ ಎಲ್ಲಾ ಸಂಕಷ್ಟಗಳಿಗೆ
ಸಮಾಧಾನದಿಂದ ಒಗ್ಗಿಕೊಂಡು ಬಾಳುವುದೇ ಮಾನಸಿಕ ಆರೋಗ್ಯ” ಎಂದಿದ್ದಾರೆ.
ಒಟ್ಟಾರೆ ಹೇಳುವುದಾದರೆ “ತನ್ನ ಮನಸ್ಸನ್ನು ತನ್ನ ಹತೋಟಿಯಲ್ಲಿಟ್ಟುಕೊಂಡು,
ಬದಲಾಗುವ ಪರಿಸ್ಥಿತಿಗಳಿಗೆ ಸರಿಯಾಗಿ ಹೊಂದಿಕೊಂಡು, ಯುಕ್ತ ರೀತಿಯಲ್ಲಿ ಜೀವನ ಸಾಗಿಸುವ ಮನಸ್ಥಿತಿಯೇ
ಮಾನಸಿಕ ಆರೋಗ್ಯ.”
ಮಾನಸಿಕ ಆರೋಗ್ಯ ಶಾಸ್ತ್ರ:
ಮಾನಸಿಕ ಆರೋಗ್ಯ ಶಾಸ್ತ್ರವು ಇತ್ತೀಚಿನ ಬೆಳವಣಿಗೆ,
ಮಾನಸಿಕ ಆರೋಗ್ಯ ಶಾಸ್ತ್ರವು ಆರೋಗ್ಯ ಶಾಸ್ತ್ರದ ಒಂದು ಶಾಖೆ. ಮಾನಸಿಕ ಆರೋಗ್ಯವನ್ನು ಪಡೆಯುವ ಮತ್ತು
ಅದನ್ನು ಕಾಪಾಡಿಕೊಂಡು ಹೋಗುವಂತೆ ಕೈಗೊಳ್ಳಬಹುದಾದ ಕ್ರಮಗಳ ಅಧ್ಯಯನವೇ ಮಾನಸಿಕ ಆರೋಗ್ಯ ಶಾಸ್ತ್ರ.
ಮಾನಸಿಕ ಆರೋಗ್ಯ ಶಾಸ್ತ್ರವು ಸಮಾಜ ಶಾಸ್ತ್ರ, ಜೀವಶಾಸ್ತ್ರ,
ಮನೋವಿಜ್ಞಾನ, ಶರೀರ ವಿಜ್ಞಾನ ಹಾಗೂ ಔಷಧಿ ವಿಜ್ಞಾನದ ಕೆಲವು ತತ್ವಗಳನ್ನು ಒಳಗೊಂಡಿದೆ. ಮಾನಸಿಕ ಆರೋಗ್ಯಶಾಸ್ತ್ರವು
ಒಂದು ವಿಜ್ಞಾನವಿದ್ದಂತೆ ಎಂದು ಕ್ರೋ ಅಂಡ್ ಕ್ರೋ ಅಭಿಪ್ರಾಯಪಟ್ಟಿದ್ದಾರೆ. ಗೀಬನ್ಸ್ ರ ಪ್ರಕಾರ
“ಯಾವುದೇ ಒಬ್ಬ ವ್ಯಕ್ತಿ ತನ್ನನ್ನು ತಾನರಿತು ಜೀವನದ ಚಟುವಟಿಕೆಗಳನ್ನು ಸಮರ್ಪಕವಾಗಿ ನಿರ್ವಹಿಸುವ
ಸಲಹೆಗಳನ್ನು ನೀಡುವ ಸಲಹೆಗಳನ್ನು ನೀಡುವ ಶಾಸ್ತ್ರಕ್ಕೆ ಮಾನಸಿಕ ಆರೋಗ್ಯಶಾಸ್ತ್ರ” ಎನ್ನುತ್ತೇವೆ.
ಮಾನಸಿಕ ಆರೋಗ್ಯ
ಶಾಸ್ತ್ರದ ಉದ್ದೇಶಗಳು:
- ವ್ಯಕ್ತಿಯ
ಮಾನಸಿಕ ಕ್ಷಮತೆಯನ್ನು ಅಭಿವೃದ್ದಿಪಡಿಸುವುದು.
- ಪರಿಪೂರ್ಣ,
ತೃಪ್ತ, ಸಮಯೋಜಿತ, ಪರಿಣಾಮಕಾರಿ ಜೀವನವನ್ನು ನಡೆಸಲು ವ್ಯಕ್ತಿಗಳನ್ನು ಸಿದ್ದಗೊಳಿಸುವುದು.
- ಮಾನಸಿಕ
ಕಾಯಿಲೆಗಳನ್ನು ತಡೆಗಟ್ಟುವಲ್ಲಿ, ಮಾನಸಿಕ ಆರೋಗ್ಯವನ್ನು ಸಂರಕ್ಷಿಸುವಲ್ಲಿ ಹಾಗೂ ಮಾನಸಿಕ ಕಾಯಿಲೆಗಳನ್ನು
ಗುಣಪಡಿಸುವಲ್ಲಿ ಕಾರ್ಯೋನ್ಮುಖವಾಗುವುದು.
- ಸಾಮಾಜಿಕ
ಹಾಗೂ ಮಾನಸಿಕ ಹೊಂದಾಣಿಕೆಯನ್ನು ಪಡೆಯುವಂತೆ ಮಾಡುವುದು.
- ಮಾನಸಿಕ
ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಹೊಸ ತಂತ್ರಗಳು ಹಾಗೂ ಸಾಧನಗಳನ್ನು ಕಂಡುಹಿಡಿಯುವುದು.
ಮಾನಸಿಕ ಆರೋಗ್ಯವಂತನ ಲಕ್ಷಣಗಳು:
- ಮಾನಸಿಕ
ಆರೋಗ್ಯವಂತನಿಗೆ ತನ್ನ ವ್ಯಕ್ತಿತ್ವದ ಅರಿವು ಇರುತ್ತದೆ.
- ಸ್ವತಂತ್ರವಾಗಿ
ಕಾರ್ಯನಿರ್ವಹಿಸುವ ಆತ್ಮವಿಶ್ವಾಸ ಹೊಂದಿರುತ್ತಾನೆ.
- ಮನಸ್ಸನ್ನು
ಪರಿಸರಕ್ಕೆ ಹೊಂದಿಸಿಕೊಳ್ಳುವಂತಹ ಸಾಮರ್ಥ್ಯ ಇರುತ್ತದೆ.
- ʼಸ್ಥಿತ
ಪ್ರಜ್ಞೆʼ ಇರುತ್ತದೆ, ಮನಸ್ಸು ಮರ್ಕಟದಂತೆ ಚಲಿಸಲು ಬಿಡುವುದಿಲ್ಲ.
- ಇತರರೊಡನೆ
ಹೊಂದಿಕೊಂಡು ಹೋಗಬಲ್ಲೆ ಎಂಬ ಆತ್ಮ ವಿಶ್ವಾಸ ಇರುತ್ತದೆ.
- ಇತರರ
ಬಗ್ಗೆ ಪ್ರೀತಿ, ನಂಬಿಕೆ, ಆತ್ಮವಿಶ್ವಾಸ, ಕರುಣೆ ಇರುತ್ತದೆ.
- ಯಾವಾಗಲೂ
ಜವಾಬ್ದಾರಿಯುತ ವರ್ತನೆ ಪ್ರಕಟಿಸುತ್ತಾನೆ. ವಹಿಸಿಕೊಂಡ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಾನೆ.
ತನ್ನ ಸೋಲಿಗೆ ಕುಂಟುನೆಪಗಳನ್ನು ಕೊಡುವುದಿಲ್ಲ.
ಇತರರ ಮೇಲೆ ದೋಷಾರೋಪಣೆ ಮಾಡುವುದಿಲ್ಲ.
- ಅವನ
ಚಟುವಟಿಕೆಗಳು ನಿರ್ದಿಷ್ಟ ಉದ್ದೇಶಗಳಿಂದ ಕೂಡಿರುತ್ತದೆ.
- ಬೇಕಾಬಿಟ್ಟಿ
ಇತರರನ್ನು ಓಲೈಸವ ಕೆಲಸ ಮಾಡದೆ ತನ್ನ ಆತ್ಮ ಸಂತೋಷದಿಂದ ಕಾರ್ಯವನ್ನು ನಿರ್ವಹಿಸುತ್ತಾನೆ.
- ಸಂತೋಷದಲ್ಲಿ
ಹಿಗುವ, ದುಖಃದಲ್ಲಿ ಕುಗುವ ಪ್ರವೃತ್ತಿ ಇರುವುದಿಲ್ಲ. ಎರಡೂ ಸಂದರ್ಭಗಳನ್ನು ಸಮನಾಗಿ ಅನುಭವಿಸುತ್ತಾನೆ.
- ಉದ್ದೇಶ
ಸಾಧನೆಗಾಗಿ ಪೂರ್ವಸಿದ್ಧತೆ ಮಾಡಿಕೊಳ್ಳುತ್ತಾನೆ. ಅಡ್ಡ ಎನೇ ತೊಂದರೆ ಬಂದರೂ ವಿಚಲಿತನಾಗುವುದಿಲ್ಲ.
- ಸಮಯದ
ಬಗ್ಗೆ ಪೂರ್ಣ ಅರಿವು ಇರುತ್ತದೆ.
- ತನ್ನದೇ
ಆದ ಜೀವನ ಮೌಲ್ಯಗಳನ್ನು ಹೊಂದಿರುತ್ತಾನೆ.
- ಇತರರನ್ನು
ಪ್ರೀತಿಸುವ ಸಾಮರ್ಥ್ಯ, ಮನರಂಜನಾ ಕಾರ್ಯದಲ್ಲಿ ಭಾಗವಹಿಸುವಿಕೆ, ಉತ್ತಮ ಮಾನವೀಯ ಸಂಬಂಧಗಳು,
ತನ್ನ ಕಾರ್ಯಸಾಧನೆ ಬಗ್ಗೆ ತೃಪ್ತಿ, ಸಮಸ್ಯೆ ಪರಿಹಾರದ ಕುಶಲತೆ ಈ ಎಲ್ಲಾ ಗುಣಗಳನ್ನು ಹೊಂದಿದವನಾಗಿರುತ್ತಾನೆ.
ಮಾನಸಿಕ ಅಸ್ವಸ್ಥತೆಗೆ ಕಾರಣಗಳು:
- ಅನುವಂಶೀಯತೆ: ಮನೋವಿಜ್ಞಾನಿಗಳು ಹೇಳುವಂತೆ ಮಾನಸಿಕ
ಆರೋಗ್ಯ ಮೆದುಳು ಸಹ ಕಾರಣವಾಗಿರುತ್ತದೆ. ಬುದ್ದಿಮಾಂದ್ಯರು ವಿಶೇಷವಾಗಿ ಇದರಿಂದ ಅಂದರೆ ಬೌದ್ಧಿಕ
ಅಶಕ್ತತೆಯಿಂದ ಬಳಲುತ್ತಾರೆ. ಕೆಲವೊಂದು ಸಲ ಅನುವಂಶೀಯತೆಯಿಂದ ಬಂದಂತಹ ದೇಹರಚನೆ, ಅನಾರೋಗ್ಯ
ಮೊದಲಾದವುಗಳು ಮಾನಸಿಕ ಅನಾರೋಗ್ಯಕ್ಕೆ ಎಡೆ ಮಾಡಿಕೊಡುತ್ತವೆ. ಮನುಷ್ಯನ ಮಾನಸಿಕ ಆರೋಗ್ಯವನ್ನು
ಶಿಕ್ಷಕ ಕಾಪಾಡಬಹುದು ಅದಕ್ಕೆ ಸೂಕ್ತ ಮಾರ್ಗದರ್ಶನವನ್ನುಮಕ್ಕಳಿಗೆ ನೀಡಬೇಕಾಗುತ್ತದೆ.
- ಸನ್ನಿವೇಶ: ಸನ್ನಿವೇಶ ಅಂಶದಲ್ಲಿ ವ್ಯಕ್ತಿ ಅನುಭವಿಸುವ
ತೊಂದರೆ ಏನೆಂದರೆ ಅನಾರೋಗ್ಯಕರ ಶಾಲಾ ವಾತಾವರಣ, ಗುರಿಯಿಲ್ಲದ ಶಿಕ್ಷಣ, ಸಾಮರ್ಥ್ಯ, ಅಭಿರುಚಿಗೆ
ತಕ್ಕಂತೆ ಪಠ್ಯಕ್ರಮ ಇಲ್ಲದಿರುವುದು, ಅವೈಜ್ಷಾನಿಕ ಬೋಧನಾ ಪದ್ದತಿ, ಮಕ್ಕಳ ದೈಹಿಕ ಬದಲಾವಣೆಗೆ
ತಕ್ಕಂತೆ ಪರಿಸರದ ಬದಲಾವಣೆಯಾಗದಿರುವುದು, ಲೈಂಗಿಕ ಶಿಕ್ಷಣ, ಧಾರ್ಮಿಕ ಶಿಕ್ಷಣ ಹಾಗೂ ನೀತಿ
ಶಿಕ್ಷಣದ ಕೊರತೆ, ಕೆಟ್ಟ ರೀತಿಯ ಶಿಕ್ಷಕರ ವರ್ತನೆ, ಶಿಕ್ಷಕರು ಮಕ್ಕಳಿಗೆ ಶಾಲೆಯಲ್ಲಿ ಸೂಕ್ತ
ಮಾರ್ಗದರ್ಶನ ನೀಡದಿರುವುದು, ಇವೆಲ್ಲವೂ ಮಕ್ಕಳ ಮಾನಸಿಕ ಅಸ್ವಸ್ಥತೆಗೆ ಕಾರಣವಾಗಿವೆ.
- ಆಹಾರ ಮತ್ತು ಸಂಸ್ಕಾರ: ಕೆಲವು ಕುಟುಂಬಗಳಲ್ಲಿ ಮಕ್ಕಳಿಗೆ ಸರಿಯಾಗಿ
ಆಹಾರ ಹಾಗೂ ಸಂಸ್ಕಾರ ದೊರೆಯುತ್ತಿಲ್ಲ. ತಂದೆ ತಾಯಿಗಳು ಯಾವಾಗಲೂ ಜಗಳ ಮಾಡುತ್ತಿದ್ದು ಅಥವಾ
ಇನ್ನಾವುದೋ ಕಾರಣದಿಂದ ಮಗುವನ್ನು ಪ್ರೀತಿ ವಾತ್ಸಲ್ಯದಿಂದ ವಂಚಿಸುತಿದ್ದು, ಮಗುವಿಗೆ ಯಾವ ಪ್ರೋತ್ಸಾಹವನ್ನು
ಕೊಡದೆ ಮಕ್ಕಳನ್ನು ಚಿಂತಾಕ್ರಾಂತರನ್ನಾಗಿ ಮಾಡಿ ಸೂಕ್ತ ಮಾರ್ಗದರ್ಶನ ನೀಡದಿರುವುದು ಮಕ್ಕಳ
ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗಿವೆ. ಉತ್ತಮ ಸ್ನೇಹಿತರು ಹಾಗೂ ಉತ್ತಮ ಸಾಮಾಜಿಕ ಹಿನ್ನೆಲೆ
ಇಲ್ಲದವರೂ ಸಹ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಾರೆ.
ಹದಿಹರೆಯದವರ
ಮಾನಸಿಕ ಆರೋಗ್ಯವನ್ನು ವೃಧ್ದಿಪಡಿಸುವುದು ಅಥವಾ ತಾರುಣ್ಯ ಅವಸ್ಥೆಯಲ್ಲಿ ಮಾನಸಿಕ ಅಸ್ವಸ್ಥತೆಯನ್ನು
ಹೋಗಲಾಡಿಸಲು ಶಿಕ್ಷಕರ ಪಾತ್ರ:
- ದೈಹಿಕ
ಆರೋಗ್ಯ ರಕ್ಷಣೆಗೆ ಮತ್ತು ವರ್ಧನೆಗೆ ಅಗತ್ಯವಾದ ಭೌತಿಕ ಪರಿಸರವನ್ನು ಒದಗಿಸಬೇಕು.
- ಪಠ್ಯಕ್ರಮ
ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿರಬೇಕು.
- ಮೌಲ್ಯಮಾಪನ
ಕಾರ್ಯಕ್ರಮ ಮಕ್ಕಳು ತಮ್ಮ ಬಲಾಬಲಗಳನ್ನು ತಿಳಿಯಲು ಸಹಾಯ ಮಾಡುವಂತೆ ಇರಬೇಕು.
- ಅನಾರೋಗ್ಯಕರ
ಸ್ಪರ್ಧೆಗಳನ್ನು ಏರ್ಪಡಿಸಬಾರದು.
- ಮಕ್ಕಳ
ಮಾನಸಿಕ ಮತ್ತು ಸಾಮಾಜಿಕ ಅಗತ್ಯತೆಗಳನ್ನು ಪೂರೈಸಬಲ್ಲ ಅವರ ಆತ್ಮವಿಶ್ವಾಸವನ್ನು ಬೆಳೆಸಬಲ್ಲ
ಪಠ್ಯ ಮತ್ತು ಸಹ ಪಠ್ಯ ಚಟುವಟಿಕೆಗಳನ್ನು ಒದಗಿಸಬೇಕು.
- ಜಟಿಲ
ಸಮಸ್ಯೆಗಳನ್ನು ಸಾವಧಾನದಿಂದ, ಬುದ್ದಿವಂತಿಕೆಯಿಂದ ಪರಿಹರಿಸುವಂತೆ ಮಾರ್ಗದರ್ಶನ ನೀಡಬೇಕು.
- ಮಾನಸಿಕ
ಅನಾರೋಗ್ಯದ ಕುರುಹುಗಳನ್ನು ಪ್ರಾರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸಾಕ್ರಮ ಕೈಗೊಳ್ಳಲು ಸೊಕ್ತ
ವ್ಯವಸ್ಥೆ ಇರಬೇಕು.
- ಅನುಕಂಪ,
ಸಹಾನುಭೂತಿ, ತಾಳ್ಮೆ, ಜಾಣತನ ಶಿಕ್ಷಕರಲ್ಲಿ ಹೇರಳವಾಗಿ ಇರಬೇಕು. ಇವುಗಳು ಮಕ್ಕಳ ಮಾನಸಿಕ ಸಮಸ್ಯೆಯನ್ನು
ಬಗೆಹರಿಸುವಂತೆ ಇರಬೇಕು.
- ವೈಯಕ್ತಿಕ
ಮಾರ್ಗದರ್ಶನ ನೀಡಬೇಕು.
- ಶಿಕ್ಷಕರು
ಶಿಸ್ತನ್ನು, ಧನಾತ್ಮಕ ವರ್ತನೆಗಳನ್ನು, ಸೃಜನಶೀಲ ಕೌಶಲ್ಯಗಳನ್ನು ಬೆಳೆಸುವಲ್ಲಿ ಸಹಾಯಹಸ್ತ
ನೀಡಬೇಕು.
- ಮಕ್ಕಳ
ಮಾನಸಿಕ ಅಸ್ವಸ್ಥತೆಯನ್ನು ಕೂಲಂಕುಷವಾಗಿ ಅರ್ಥ ಮಾಡಿಕೊಂಡು ಸರಳ ರೀತಿಯಲ್ಲಿ ಪರಿಹರಿಸುವಲ್ಲಿ
ಯಶಸ್ವಿಯಾಗಬೇಕು.
- ಮಕ್ಕಳಲ್ಲಿʼನಾವುʼ
ಎಂಬ ಮನೋಭಾವವನ್ನು ಬೆಳೆಸಿ ಸಮಾಜದಲ್ಲಿ ಹೊಂದಿಕೊಂಡು ಬಾಳುವುದನ್ನು ಕಲಿಸಬೇಕು.
- ಶಿಕ್ಷಕರು
ಮನೋವೈಜ್ಙಾನಿಕ ಸಿದ್ಧಾಂತ, ತತ್ವಗಳನ್ನು ಅಳವಡಿಸಿಕೊಂಡು ಮಾನಸಿಕ ಸಮಸ್ಯೆಯನ್ನು ಬಗೆಹರಿಸಲು
ಮುಂದಾಗಬೇಕು.
- ಮಕ್ಕಳಿಗೆ
ಯೋಗ, ಧ್ಯಾನ ಮಾಡಲು ಪ್ರೋತ್ಸಾಹ ನೀಡಬೇಕು.
- ಮಕ್ಕಳಿಗೆ
ನೀತಿ ಶಿಕ್ಷಣವನ್ನು ಬೋಧಿಸಬೇಕು.
ವ್ಯಕ್ತಿತ್ವ
ಅರ್ಥ:
ವ್ಯಕ್ತಿತ್ವ ಎಂಬುದು ಆಂಗ್ಲ ಪದದ (Personality)
ಎಂಬುದರ ರೂಪವಾಗಿದ್ದು, ಈ ಆಂಗ್ಲ ಪದವು ಗ್ರೀಕ್ ಭಾಷೆಯ ʼ Personaʼ ಎಂಬ ಮೂಲದಿಂದ ಬಂದಿದೆ. ಪ್ರಾಚೀನ
ಗ್ರೀಕರ ಕಾಲದಲ್ಲಿ ರಂಗಮಂಟಪದ ಮೇಲೆ ಕಲಾಕಾರರು ನೇರವಾಗಿ ಕಾಣಿಸಿಕೊಳ್ಳದೆ, ಪಾತ್ರ, ಸನ್ನಿವೇಶಗಳಿಗೆ
ತಕ್ಕಂತೆ ಮುಖವಾಡಗಳನ್ನು ಧರಿಸಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ಆ ಮುಖವಾಡಗಳಿಗೆ ಗ್ರೀಕ್ ಭಾಷೆಯಲ್ಲಿ
ʼ Personaʼ ಎನ್ನುತ್ತಿದ್ದರು. ಆದರ ರೂಪವೇ Personality.
ಮನೋವೈಜ್ಞಾನಿಕ ರೀತಿಯಲ್ಲಿ ನೋಡಿದಾಗ ವ್ಯಕ್ತಿತ್ವವು
ವ್ಯಕ್ತಿಯ ತೋರಿಕೆಯ, ನಟನೆಯ ವರ್ತನೆ, ವಿಚಾರಧಾರೆಗಳ ಹಿಂದಿನ ನೈಜ ವರ್ತನೆಯನ್ನು ಸೂಚಿಸುತ್ತದೆ.
ವ್ಯಾಖ್ಯಾನಗಳು:
1.
ಗಾರ್ಡನ್
ಆಲ್ಪೋರ್ಟ್: “ವ್ಯಕ್ತಿ ಪರಿಸರದೊಂದಿಗೆ ತನ್ನದೇ ಆದ ವಿಶೇಷತೆಯೊಂದಿಗೆ ಹೊಂದಿಕೊಳ್ಳುವುದರಲ್ಲಿ ಸಹಾಯಕವಾಗಿರುವ
ವ್ಯಕ್ತಿಯಲ್ಲಿನ ದೈಹಿಕ, ಮಾನಸಿಕ ವಿಶೇಷ ಅಂಶಗಳ ಸಂಘಟನೆಯೇ ವ್ಯಕ್ತಿತ್ವ”.
2.
ಗಿಲ್
ಫರ್ಡ: “ವ್ಯಕ್ತಿಯ ವ್ಯಕ್ತಿತ್ವವೆಂದರೆ ಅವನಲ್ಲಿರುವ ವಿಶೇಷ ಲಕ್ಷಣಗಳ ಸ್ವರೂಪ.
3.
ಜೇಮ್ಸ್
ಸಿ. ಕೋಲ್ಮನ್: “ಒಬ್ಬ ವ್ಯಕ್ತಿಯಲ್ಲಿ ಕಂಡುಬರುವ ವಿಶೇಷ ಸ್ಥಿರ ಗುಣಗಳೇ ಆತನ ವ್ಯಕ್ತಿತ್ವ”.
4.
ಮಾರ್ಟಿನ್
ಪ್ರಿನ್ಸ್: “ವ್ಯಕ್ತಿಯ ಎಲ್ಲ ಆಂತರಿಕ ಪ್ರವೃತ್ತಿಗಳು, ಪ್ರೇರಣೆಗಳು, ಅಭಿವ್ಯಕ್ತಿ, ಆಕಾಂಕ್ಷೆಗಳು,
ಸಹಜ ಪ್ರವೃತ್ತಿಗಳು ಮತ್ತು ಅನುಭವಗಳಿಂದ ಗಳಿಸಿದ ಪ್ರವೃತ್ತಿಗಳು ಹಾಗೂ ಮನೋವೃತ್ತಿಗಳ ಮೊತ್ತವೇ ವ್ಯಕ್ತಿತ್ವ”.
ವ್ಯಕ್ತಿತ್ವದ
ನಿರ್ಧಾರಕಗಳು. (ಪ್ರಭಾವ ಬೀರುವ ಅಂಶಗಳು)
1. ಪರಿಸರ: ಶಾಲಾ ವಾತಾವರಣ, ಶಿಕ್ಷಕರು, ಮುಖ್ಯೊಪಾದ್ಯಾಯರು,
ಪಠ್ಯೇತರ ಚಟುವಟಿಕೆಗಳು, ಅವಕಾಶಗಳು, ಸಂಸ್ಥೆಯ ಮೌಲ್ಯಗಳು, ಆದರ್ಶಗಳು, ಸಹಪಾಠಿಗಳು, ಆಡಳಿತ ವರ್ಗ,
ಪರೀಕ್ಷಾ ಪದ್ಧತಿ, ಪ್ರಯೋಗಾಲಯ, ಗ್ರಂಥಾಲಯ, ಆಟದ ಮೈದಾನ, ತರಗತಿಯಲ್ಲಿನ ಉತ್ತಮ ಬೊಧನೆ, ಪಾಠೋಪಕರಣ,
ಪೀಠೋಪಕರಣ, ಶಿಸ್ತು, ನಿಯಮ, ವೇಳಾಪಟ್ಟಿ, ಅತಿಥಿ ಉಪನ್ಯಾಸಕರು, ಕಲೆ, ಸಾಹಿತ್ಯ, ಸಂಸ್ಕೃತಿ, ಸಹಕಾರ
ಮನೋಭಾವ, ಹೊಂದಾಣಿಕೆ ಇವೆಲ್ಲವೂ ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.
2. ಅನುವಂಶೀಯತೆ: ಗುಣಲಕ್ಷಣಗಳು ವಂಶಪಾರಂಪರಿಕವಾಗಿ ಒಂದು ಜನಾಂಗದಿಂದ
ಮುಂದಿನ ಜನಾಂಗಕ್ಕೆʼವಂಶಾಣುʼವಿನ ಮುಖಾಂತರ ವರ್ಗಾವಣೆ ಹೊಂದುತ್ತದೆ. ಈ ರೀತಿಯಾಗಿ ಪೂರ್ವ ವಂಶಸ್ಥರಿಂದ
ಹಲವಾರು ಸ್ವರೂಪ, ಚಹರೆ, ಲಕ್ಷಣಗಳು ಮುಂದಿನ ಜನಾಂಗಕ್ಕೆ ವರ್ಗಾಯಿಸಿ ವ್ಯಕ್ತಿಯ ವ್ಯಕ್ತಿತ್ವಕ್ಕೆ
ಬಹು ಮುಖ್ಯ ಪಾತ್ರವಹಿಸುತ್ತದೆ.
ವ್ಯಕ್ತಿಯು ಒಂದು ನಿರ್ದಿಷ್ಠ ಬಗೆಯಲ್ಲಿ ವರ್ತಿಸಲು
ಹಾಗೂ ನಿರ್ದಿಷ್ಠ ಬಗೆಯಲ್ಲಿ ಕಾರ್ಯ ನಿರ್ವಹಿಸಲು ಆತನ ಅನುವಂಶೀಯತೆಯೇ ಕಾರಣ. ಅನುವಂಶೀಯ ಗುಣಗಳಾದ
ಜ್ಞಾಪಕ ಶಕ್ತಿ, ಬುದ್ದಿಶಕ್ತಿ, ಸಜ್ಜನ ಸ್ವಭಾವ, ಮೃದು ಸ್ವಭಾವ, ಸಂವೇದನಾಶೀಲತೆ, ತಾಳ್ಮೆ, ದೇಹದ
ತೂಕ-ಗಾತ್ರ-ಎತ್ತರ, ಬಾಹ್ಯ ಸೌಂದರ್ಯ, ಇಂದ್ರೀಯ ಪಟುತ್ವ, ಅಂತಃಸ್ರಾವಕ ಗ್ರಂಥಿಗಳ ಕಾರ್ಯ ವೈಖರಿ,
ಜೀರ್ಣಕ್ರಿಯೆ, ಹೃದಯ ಹಾಗೂ ಶ್ವಾಸಕೊಶಗಳ ಗಾತ್ರ ಇವುಗಳೆಲ್ಲವೂ ನಮ್ಮ ತಂದೆ-ತಾಯಿಯರಿಂದ/ ಅಜ್ಜ- ಅಜ್ಜಿಯರಿಂದ
ಬಂದಂತಹ ಗುಣಗಳಾಗಿವೆ. ಆದ್ದರಿಂದ ವ್ಯಕ್ತಿತ್ವ ನಮ್ಮ ತಂದೆ-ತಾಯಿಯರಿಂದ/ ಅಜ್ಜ- ಅಜ್ಜಿಯರನ್ನು ಬಿಂಬಿಸುತ್ತದೆ.
ಒಳ್ಳೆಯ ಗುಣಗಳ ಜೊತೆ ಕೆಲವು ಕೆಟ್ಟ ಗುಣಗಳೂ ಅನುವಂಶೀಯವಾಗಿ ಬರುವ ಸಾದ್ಯತೆ ಇದೆ.
3. ವೈಯಕ್ತಿಕ ಅಂಶಗಳು: ದೈಹಿಕ ರಚನೆ, ವರ್ಣತಂತುಗಳು, ಬುದ್ಧಿಶಕ್ತಿ,
ಸಂವೇಗಗಳು, ಅಭಿವ್ಯಕ್ತಿ, ಆಸಕ್ತಿ ಮುಂತಾದವುಗಳು ಸೇರುತ್ತವೆ.
4. ದೇಹ ರಚನೆ: ವ್ಯಕ್ತಿಯ ದೈಹಿಕ ಲಕ್ಷಣಗಳು, ಅಂದರೆ ಎತ್ತರ,
ತೂಕ, ದೈಹಿಕ ನೋಟ, ದೈಹಿಕ ಸಾಮರ್ಥ್ಯ, ದೈಹಿಕ ಆರೋಗ್ಯ, ದೈಹಿಕ ವಿಕಲತೆ, ದಪ್ಪ, ವ್ಯಕ್ತಿತ್ವದ ಬೆಳವಣಿಗೆಯ
ಮೇಲೆ ಪ್ರಭಾವ ಬೀರುತ್ತದೆ.
5. ಮಾನಸಿಕ ಮತ್ತು ಮನೋವೈಜ್ಞಾನಿಕ ಅಂಶಗಳು: ಕಲಿಕೆ, ಚಿಂತನೆ, ಯೋಚನಾ ಶಕ್ತಿ, ನಿರ್ಣಯ,
ನಿರ್ಧಾರ ತೆಗೆದುಕೊಳ್ಳುವುದು, ತೀರ್ಪು, ವಿಶ್ಲೇಷಣೆ, ಜ್ಞಾನ, ಕೌಶಲತೆ ಸಂಪಾದನೆ.
6. ಸಂವೇಗಗಳು: ತೃಪ್ತಿಕರ ಭಾವನೆ, ಭಾವನಾ ಸಮತೋಲನದ ಅವಶ್ಯಕತೆ,
ಭವನೆಯ ಅಭಿವ್ಯಕ್ತಿಯ ಮೇಲಿನ ಬಿಗಿಯಾದ ಹಿಡಿತ, ಭಾವನಾ ಒತ್ತಡ, ಋಣಾತ್ಮಕ ಅಪಸಮಾಯೋಜನೆ ಇವುಗಳು ಪ್ರಭಾವ
ಬೀರುತ್ತವೆ.
ಸಾಮಾಜಿಕ
ಸಂಸ್ಕೃತಿ: ಶಾಲಾ
ಪರಿಸರ, ಮನೆಯ ಪರಿಸರ, ಸಮಾಜ, ಇವುಗಳು ವ್ಯಕ್ತಿತ್ವದ ಮೇಲೆ ಪ್ರಭಾವ ಬೀರುತ್ತವೆ.
Comments
Post a Comment